ವಿಕ ಸುದ್ದಿಲೋಕ ಕುಂದಾಣಶ್ರೀಜಗದ್ಗುರು ಸಿದ್ದರಾಮೇಶ್ವರ ಮಹಾ ಸಂಸ್ಥಾನ ಭೋವಿ ಗುರುಪೀಠ, ಬಾಗಲಕೋಟೆ-ಚಿತ್ರದುರ್ಗ ಇಲ್ಲಿಜೂನ್ 28ರಂದು ಬೆಳಗ್ಗೆ 11ಗಂಟೆಗೆ ಭೋವಿ ಜನೋತ್ಸವ 2026 ಪೂರ್ವಭಾವಿ ಸಭೆ ನಡೆಯಲಿದೆ.
ಪೂರ್ವಭಾವಿ ಸಭೆಗೆ ರಾಜ್ಯ, ಜಿಲ್ಲೆಮತ್ತು ತಾಲೂಕು ಸಂಘಟನೆಗಳ ಮುಖಂಡರನ್ನು ಆಹ್ವಾನಿಸಿದ್ದು, ಹೆಚ್ಚಿನ ಸಂಖ್ಯೆಯಲ್ಲಿಭೋವಿ ಸಮುದಾಯದ ಮುಖಂಡರು ಭಾಗವಹಿಸಿ ಪೂರ್ವಭಾವಿ ಸಭೆಯನ್ನು ಯಶಸ್ವಿಗೊಳಸಬೇಕಿದೆ. ಈ ನಿಟ್ಟಿನಲ್ಲಿ ದೇವನಹಳ್ಳಿ ತಾಲೂಕಿನ ಭೋವಿ ಸಮುದಾಯದ ಮುಖಂಡರು ಪಾಲ್ಗೊಂಡು ಸಲಹೆ ಮತ್ತು ಸೂಚನೆಯನ್ನು ನೀಡಬೇಕು ಎಂದು ದೇವನಹಳ್ಳಿ ತಾಲೂಕು ಭೋವಿ ಸಂಘದ ಅಧ್ಯಕ್ಷ ಶ್ರೀನಿವಾಸ್ .ಎಚ್ .ವಿ.ಎಸ್ ಮನವಿ ಮಾಡಿದ್ದಾರೆ.