ಡಿಜಿ, ಐಜಿಪಿ ಕಮಾಂಡೇಶನ್ ಡಿಸ್ಕ್ ಗೆ ಜಿಲ್ಲೆಯ ಇಬ್ಬರೂ ಆಯ್ಕೆ

Contributed byMruthyunjayar77@gmail.com|Vijaya Karnataka
chikkaballapur police achieve dg igp award success
ವಿಕ ಸುದ್ದಿಲೋಕ ಚಿಕ್ಕಬಳ್ಳಾಪುರ

ರಾಜ್ಯ ಪೊಲೀಸ್ ಇಲಾಖೆಯಲ್ಲಿಅತ್ಯುತ್ತಮ ಸೇವೆ ಸಲ್ಲಿಸಿದ ಅಧಿಕಾರಿ ಹಾಗೂ ಸಿಬ್ಬಂದಿಗೆ ನೀಡಲಾಗುವ ಪ್ರತಿಷ್ಠಿತ ಪೊಲೀಸ್ ಮಹಾ ನಿರ್ದೇಶಕರು ಮತ್ತು ಪೊಲೀಸ್ ಮಹಾ ನಿರೀಕ್ಷಕರ ಪ್ರಶಂಸನಾ ಪದಕ 2025-26ಕ್ಕೆ ಕರ್ನಾಟಕದ ನಾನಾ ಭಾಗಗಳಿಂದ ಒಟ್ಟು 200 ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಆಯ್ಕೆಯಾಗಿದ್ದು, ಜಿಲ್ಲೆಯಿಂದ ಇಬ್ಬರು ಆಯ್ಕೆಯಾಗಿದ್ದಾರೆ.
ಕಳೆದ ಒಂದು ವರ್ಷದಲ್ಲಿಪೊಲೀಸ್ ಇಲಾಖೆಯಲ್ಲಿತಮ್ಮ ಕರ್ತವ್ಯನಿಷ್ಠೆ, ಶಿಸ್ತು, ಕಾರ್ಯದಕ್ಷತೆ ಹಾಗೂ ವಿಶೇಷ ಸೇವೆಗಳ ಮೂಲಕ ಗಮನ ಸೆಳೆದಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಈ ಪದಕಕ್ಕೆ ಆರ್ ಪಿಐ ಭರತ್ ಹೆಗಡೆ ಹಾಗೂ ಸಿಎಚ್ ಸಿ ರವೀಂದ್ರ ಕುಮಾರ್ ಭಾಜನರಾಗಿದ್ದಾರೆ.

ಕಾನೂನು ಸುವ್ಯವಸ್ಥೆ ಕಾಪಾಡುವುದು, ಅಪರಾಧ ಪ್ರಕರಣಗಳ ಪತ್ತೆ, ತನಿಖೆಯಲ್ಲಿತೋರಿದ ಸಾಧನೆ, ಸಾರ್ವಜನಿಕ ಸೇವೆ, ತುರ್ತು ಸಂದರ್ಭಗಳಲ್ಲಿನೀಡಿದ ಕೊಡುಗೆ ಸೇರಿದಂತೆ ನಾನಾ ಕ್ಷೇತ್ರಗಳಲ್ಲಿನ ಅತ್ಯುತ್ತಮ ಕಾರ್ಯಗಳನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿ ಪೊಲೀಸ್ ಇಲಾಖೆಯಲ್ಲಿಅತ್ಯಂತ ಗೌರವಾನ್ವಿತ ಪ್ರಶಸ್ತಿಗಳಲ್ಲಿಒಂದಾಗಿದ್ದು, ಸಿಬ್ಬಂದಿಯ ಸೇವೆಗೆ ನೀಡುವ ವಿಶೇಷ ಮಾನ್ಯತೆಯಾಗಿದೆ.

ಡಿಜಿ ಮತ್ತು ಐಜಿಪಿ ಕಮಾಂಡೇಶನ್ ಡಿಸ್ಕ್ ಮೂಲಕ ಉತ್ತಮ ಸೇವೆ ಸಲ್ಲಿಸುವ ಪೊಲೀಸ್ ಸಿಬ್ಬಂದಿಗೆ ಪ್ರೋತ್ಸಾಹ ನೀಡುವುದರ ಜತೆಗೆ, ಇಲಾಖೆಯಲ್ಲಿಕರ್ತವ್ಯ ಬದ್ಧತೆ ಹಾಗೂ ವೃತ್ತಿಪರತೆಯನ್ನು ಮತ್ತಷ್ಟು ಹೆಚ್ಚಿಸುವ ಉದ್ದೇಶ ಹೊಂದಲಾಗಿದೆ. ಪ್ರಶಸ್ತಿ ಪುರಸ್ಕೃತರಿಗೆ ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ, ಜಿಲ್ಲಾಅಪರ ಪೊಲೀಸ್ ವರಿಷ್ಠಾಧಿಕಾರಿ ಜಗನ್ನಾಥ್ ರೈ ಹಾಗೂ ಡಿವೈಎಸ್ ಪಿ ಪ್ರಕಾಶ್ ಅಭಿನಂದನೆ ಸಲ್ಲಿಸಿದ್ದು, ಅವರ ಸೇವೆ ಇತರ ಸಿಬ್ಬಂದಿಗೂ ಮಾದರಿಯಾಗಿದೆ ಎಂದು ತಿಳಿಸಿದ್ದಾರೆ.

23 ಸಿಬಿಪಿಪೋಟೋ 2

ಆರ್ ಪಿಐ ಭರತ್ ಹೆಗಡೆ

23 ಸಿಬಿಪಿಪೋಟೋ 3

ಸಿಎಚ್ ಸಿ ರವೀಂದ್ರ ಕುಮಾರ್