ರಾಸಾಯನಿಕ ಗೊಬ್ಬರಗಳ ಸಮತೋಲಿತ ಬಳಕೆಗೆ ಅರಿವು ಮೂಡಿಸಿ

Contributed byragh.pkn@gmail.com|Vijaya Karnataka
raise awareness for balanced use of chemical fertilizers to save agriculture for farmers
ವಿಕ ಸುದ್ದಿಲೋಕ ಕೋಲಾರ

ಕೋಲಾರದ ಕೃಷಿ ವಿಜ್ಞಾನ ಕೇಂದ್ರ ಹಾಗೂ ಬಂಗಾರಪೇಟೆಯ ಕೃಷಿ ಇಲಾಖೆ ಸಹಯೋಗದಲ್ಲಿವಟ್ರಕುಂಟೆ ಗ್ರಾಮದಲ್ಲಿಕೃಷಿ ಉಳಿಸಿ ಅಭಿಯಾನದ ಅಂಗವಾಗಿ ರೈತರ ಕಿಸಾನ್ ಗೋಷ್ಠಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿಕೃಷಿ ವಿಜ್ಞಾನ ಕೇಂದ್ರ ಕೋಲಾರದ ವಿಜ್ಞಾನಿ ಡಾ.ಕೆ.ಆರ್ .ಶಶಿಧರ್ , ಕೇಂದ್ರ ಸರಕಾರವು 2026ರ ಜೂನ್ 1ರಿಂದ ಜೂನ್ 30 ರವರೆಗೆ ದೇಶಾದ್ಯಂತ ಹೊಲ ಉಳಿಸಿ ಆಂದೋಲನ ಎಂಬ ಬೃಹತ್ ಕೃಷಿ ಜಾಗೃತಿ ಅಭಿಯಾನವನ್ನು ಹಮ್ಮಿಕೊಂಡಿದೆ. ಈ ಯೋಜನೆಯ ಪ್ರಮುಖ ಘೋಷವಾಕ್ಯ ಮಣ್ಣು ಉಳಿಸಿ, ಕೃಷಿ ಉಳಿಸಿ, ರೈತರನ್ನು ಉಳಿಸಿ ಎಂಬುದಾಗಿದ್ದು, ಅಭಿಯಾನದ ಮುಖ್ಯ ಉದ್ದೇಶಗಳೆಂದರೆ ಯೂರಿಯಾ ಮತ್ತು ಡಿಎಪಿನಂತಹ ರಾಸಾಯನಿಕ ಗೊಬ್ಬರಗಳು ಹಾಗೂ ಕೀಟನಾಶಕಗಳ ಅತಿಯಾದ ಮತ್ತು ಅಸಮರ್ಪಕ ಬಳಕೆಯನ್ನು ತಡೆಯುವುದು. ಮಣ್ಣಿಗೆ ಕೇವಲ ಎನ್ ಪಿಕೆ ಮಾತ್ರವಲ್ಲದೆ ಅಗತ್ಯವಿರುವ 17 ಸೂಕ್ಷತ್ರ್ಮ ಪೋಷಕಾಂಶಗಳ ಬಗ್ಗೆ ರೈತರಲ್ಲಿಜಾಗೃತಿ ಮೂಡಿಸುವುದು. ನಿಯಮಿತವಾಗಿ ಮಣ್ಣು ಪರೀಕ್ಷೆ ನಡೆಸಿ, ಮಣ್ಣಿನ ಆರೋಗ್ಯ ಕಾರ್ಡ್ ಆಧಾರದ ಮೇಲೆ ಅಗತ್ಯವಿರುವಷ್ಟೇ ಗೊಬ್ಬರ ಬಳಸಲು ಉತ್ತೇಜಿಸುವುದು ಆಗಿದೆ ಎಂದು ಹೇಳಿದರು.

ಹಸಿರು ಗೊಬ್ಬರ, ಎರೆಗೊಬ್ಬರ ಹಾಗೂ ಜೀವಾಮೃತ, ಬೀಜಾಮೃತಗಳಂತಹ ಪರಿಸರ ಸ್ನೇಹಿ ಕೃಷಿ ಪದ್ಧತಿಗಳ ಬಗ್ಗೆ ಹೊಲಗಳಲ್ಲೇ ಪ್ರಾಯೋಗಿಕ ತರಬೇತಿ ನೀಡುವುದು. ಕಡಿಮೆ ನೀರಿನಲ್ಲಿಹೆಚ್ಚು ಇಳುವರಿ ನೀಡುವ ವೈಜ್ಞಾನಿಕ ಬೇಸಾಯ ಪದ್ಧತಿಗಳನ್ನು ಪರಿಚಯಿಸುವುದು ಎಂದರು.

ಅಭಿಯಾನದ ಅನುಷ್ಠಾನ ಮತ್ತು ತಲುಪುವಿಕೆ ಈ ಅಭಿಯಾನವನ್ನು ಭಾರತೀಯ ಕೃಷಿ ಸಂಶೋಧನಾ ಮಂಡಳಿ ಆಯಾ ರಾಜ್ಯಗಳ ಕೃಷಿ ಇಲಾಖೆಗಳು, ಕೃಷಿ ವಿಶ್ವವಿದ್ಯಾಲಯಗಳು ಮತ್ತು ಸ್ಥಳೀಯ ಕೃಷಿ ವಿಜ್ಞಾನ ಕೇಂದ್ರಗಳ ಸಹಯೋಗದೊಂದಿಗೆ ಜಾರಿಗೆ ತರಲಾಗುತ್ತಿದೆ. ದೇಶಾದ್ಯಂತ 12,000 ಕ್ಕೂ ಹೆಚ್ಚು ಜಾಗೃತಿ ಶಿಬಿರಗಳನ್ನು ಆಯೋಜಿಸಲಾಗಿದ್ದು, ಲಕ್ಷಾಂತರ ರೈತರನ್ನು ಈ ಮೂಲಕ ತಲುಪಲಾಗುತ್ತಿದೆ ಎಂದು ಹೇಳಿದರು.

ಕೃಷಿ ವಿಜ್ಞಾನ ಕೇಂದ್ರದ ಸಸ್ಯ ಸಂರಕ್ಷಣಾ ವಿಜ್ಞಾನಿ ಡಾ.ಮಂಜುನಾಥ್ ರೆಡ್ಡಿ, ರಾಸಾಯನಿಕ ಗೊಬ್ಬರಗಳು ಮತ್ತು ಕೀಟನಾಶಕಗಳನ್ನು ಸುರಕ್ಷಿತವಾಗಿ ಬಳಸಲು ಪ್ರಮುಖ ನಿಯಮಗಳ ಬಗ್ಗೆ ಮಾಹಿತಿ ನೀಡುತ್ತಾ ಕೀಟನಾಶಕ ಸಿಂಪಡಿಸುವಾಗ ಮಾಸ್ಕ್ , ಕೈಗವಸು, ಕನ್ನಡಕ ಮತ್ತು ಪೂರ್ಣ ತೋಳಿನ ಬಟ್ಟೆ ಧರಿಸುವುದು, ಸಿಂಪರಣೆ ಮುಗಿದತಕ್ಷಣ ಸೋಪಿನಿಂದ ಕೈ-ಕಾಲು ತೊಳೆದು, ಸ್ನಾನ ಮಾಡುವುದು. ಬಳಸಿದ ಬಟ್ಟೆಗಳನ್ನು ಪ್ರತ್ಯೇಕವಾಗಿ ಒಗೆಯುವುದು, ಕೀಟನಾಶಕ ಬಾಟಲಿಯ ಮೇಲಿನ ಸೂಚನೆಗಳು ಮತ್ತು ಡೋಸೇಜ್ ಅನ್ನು ಕಡ್ಡಾಯವಾಗಿ ಓದುವುದು, ಗಾಳಿಯ ದಿಕ್ಕು ನೋಡಿ ಗಾಳಿ ಬೀಸುವ ದಿಕ್ಕಿಗೆ ಎದುರಾಗಿ ಕೀಟನಾಶಕವನ್ನು ಸಿಂಪಡಿಸಬಾರದೆಂದು ತಿಳಿಸಿದರು.

ಮಕ್ಕಳು ಮತ್ತು ಸಾಕು ಪ್ರಾಣಿಗಳಿಗೆ ಸಿಗದಂತೆ ಬೀಗ ಹಾಕುವ ಜಾಗದಲ್ಲಿಇಡಬೇಕೆಂದರು. ನಂತರ ರಾಸಾಯನಿಕಗಳಿಗೆ ಪರ್ಯಾಯವಾಗಿ ಬಳಸಬಹುದಾದ ಪ್ರಮುಖ ಸಾವಯವ ವಿಧಾನಗಳಾದ ನೈಸರ್ಗಿಕ ಕೀಟನಾಶಕಗಳು, ಜೈವಿಕ ಗೊಬ್ಬರಗಳು, ಎರೆಹುಳು ಗೊಬ್ಬರ ಉತ್ಪಾದನೆ, ಮಿತ್ರ ಕೀಟಗಳ ಮತ್ತು ಜೈವಿಕ ಶಿಲೀಂಧ್ರನಾಶಕ ಬಳಕೆ, ಬೆಳೆ ಪರಿವರ್ತನೆ, ಮಿಶ್ರ ಬೆಳೆ ಪದ್ಧತಿಯ ಬಗ್ಗೆ ಸಂಕ್ಷಿಪ್ತವಾಗಿ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿಕೃಷಿ ಅಧಿಕಾರಿ ನಾರಾಯಣರೆಡ್ಡಿ ಮೋಹಕ ಬಲೆಗಳನ್ನು ತೋಟಗಾರಿಕೆ ರೈತರಿಗೆ ವಿತರಿಸಿದರು. ಆತ್ಮ, ಬಿಟಿಎಂ ಗಣೇಶ್ , 150 ಕೃಷಿಕರು ಭಾಗವಹಿಸಿದ್ದರು.

=

ಫೋಟೋಕ್ಯಾಪ್ಷನ್ : ಕೋಲಾರದ ಕೃಷಿ ವಿಜ್ಞಾನ ಕೇಂದ್ರ ಹಾಗೂ ಬಂಗಾರಪೇಟೆಯ ಕೃಷಿ ಇಲಾಖೆ ಸಹಯೋಗದಲ್ಲಿವಟ್ರಕುಂಟೆ ಗ್ರಾಮದಲ್ಲಿಕೃಷಿ ಉಳಿಸಿ ಅಭಿಯಾನದ ಅಂಗವಾಗಿ ರೈತರ ಕಿಸಾನ್ ಗೋಷ್ಠಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. (24ಕೆಪಿಎಚ್ 4)