ಬಾಲ್ಯ ವಿವಾಹ ಮುಕ್ತ ಜಿಲ್ಲೆಯನ್ನಾಗಿಸೋಣ

Contributed bymahadevakon@gmail.com|Vijaya Karnataka
child marriage free district awareness program in chitradurga
ಬಾಲ್ಯ ವಿವಾಹ ಮುಕ್ತ ಜಿಲ್ಲೆಯನ್ನಾಗಿಸೋಣ

ವಿಕ ಸುದ್ದಿಲೋಕ ಮೊಳಕಾಲ್ಮುರು
ಚಿತ್ರದುರ್ಗ ಜಿಲ್ಲೆಯನ್ನು ಬಾಲ ಕಾರ್ಮಿಕ ಹಾಗೂ ಬಾಲ್ಯ ವಿವಾಹ ಮುಕ್ತ ಜಿಲ್ಲೆಯನ್ನಾಗಿಸಲು ಸರಕಾರದೊಂದಿಗೆ ಸಮುದಾಯವು ಸಹಕಾರ ನೀಡಬೇಕು ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು.

ತಾಲೂಕಿನ ಚಿಕ್ಕೋಬನಹಳ್ಳಿ ಕುವೆಂಪು ರಂಗ ಮಂದಿರದಲ್ಲಿಮಂಗಳವಾರ ಚಿತ್ರದುರ್ಗದ ಆಶ್ರಿತ ಸಂಸ್ಥೆಯಿಂದ ಜೈಭೀಮ್ ಉಚಿತ ಕಲಿಕಾ ತರಬೇತಿ ಕೇಂದ್ರ ದ್ವಿತೀಯ ವರ್ಷದ ತರಬೇತಿ ಪ್ರಾರಂಭೋತ್ಸವ ಹಾಗೂ ಬಾಲಕಾರ್ಮಿಕ, ಬಾಲ್ಯ ವಿವಾಹ ಪದ್ಧತಿ ನಿಷೇಧ ಕುರಿತ ಜನ ಜಾಗೃತಿ ಕಾರ್ಯಕ್ರಮದಲ್ಲಿಮಾತನಾಡಿದರು.

ಬಾಲ್ಯದಲ್ಲಿಮಕ್ಕಳಿಂದ ದುಡಿಸಿಕೊಳ್ಳುವುದು ಅಥವಾ ಬಾಲ್ಯ ವಿವಾಹಕ್ಕೆ ದೂಡುವುದು ಕಾನೂನು ಉಲ್ಲಂಘನೆ ಕಾರ್ಯ. ಪೋಷಕರು ತಮ್ಮ ಜವಾಬ್ದಾರಿ ಅರಿತು ಚಿಕ್ಕ ವಯಸ್ಸಿಗೆ ಮದುವೆ ಮಾಡದೆ ಮಕ್ಕಳಿಗೆ ಶಿಕ್ಷಣ ಕೊಡಿಸಿ, ಉತ್ತಮ ಪ್ರಜೆಗಳಾಗಿ ರೂಪಿಸಬೇಕು ಎಂದರು.

ಕಾರ್ಯಕ್ರಮದಲ್ಲಿಬೋರೇಶ್ ಮಠದ ಶಿವಮೂರ್ತಿ ಸ್ವಾಮೀಜಿ, ಜೈಭೀಮ್ ಸಂಸ್ಥೆ ಸಂಸ್ಥಾಪಕ ಕಾರ್ಯದರ್ಶಿ ನಾಗರಾಜ್ , ಜಿಲ್ಲಾಸಂಚಾಲಕ ಡಿ.ಒ.ಮುರಾರ್ಜಿ, ತಾಲೂಕು ಸಂಯೋಜಕ ಭಟ್ರಹಳ್ಳಿ ಧನಂಜಯ, ಶಿಕ್ಷಕ ವಸಂತ್ ಕುಮಾರ್ , ಮುಖಂಡರಾದ ಸೂರಮಹಳ್ಳಿ ಶ್ರೀನಿವಾಸ್ , ಬಿ.ವಿ.ಶರಣಪ್ಪ, ಕೆ.ಟಿ.ಶಿವಕುಮಾರ್ , ಸಿ.ಬಿ.ಕೊಲ್ಲಪ್ಪ, ಜಿ.ಬಿ.ಸಣ್ಣಬೋಸಯ್ಯ, ಸತ್ಯಾನಂದ, ಗೌಡು ಪಾಪಣ್ಣ, ಎಸ್ .ಬಿ.ಪಾಪಯ್ಯ, ಕೆ.ಒ.ಓಬಯ್ಯ, ಯಜಮಾನ್ ದಾಸಪ್ಪ, ಮಲ್ಲೇಶಪ್ಪ, ಬಂಗಾರಪ್ಪ, ಜಯರಾಂ ಇದ್ದರು.

---

24 ಎಂಎಲ್ ಕೆ ಪಿ 2

ಮೊಳಕಾಲ್ಮುರು ತಾಲೂಕು ಚಿಕ್ಕೋಬನಹಳ್ಳಿ ಕುವೆಂಪು ರಂಗಮಂದಿರದಲ್ಲಿಮಂಗಳವಾರ ಜೈಭೀಮ್ ಉಚಿತ ಕಲಿಕಾ ತರಬೇತಿ ಕೇಂದ್ರ ದ್ವಿತೀಯ ವರ್ಷದ ತರಬೇತಿ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಸಂಸದ ಗೋವಿಂದ ಕಾರಜೋಳ ಉದ್ಘಾಟಿಸಿದರು.