ಸರಣಿ 3

Contributed bymanjunathrd59@gmail.com|Vijaya Karnataka
farmers in despair without annual rain seeking divine help
ವರುಣದೇವನ ಕೃಪೆಗಾಗಿ ರೈತರ ಪೂಜೆ

ಮಂಜುನಾಥ ದಾಸಣ್ಣನವರ ಹಾವೇರಿ
ಋa್ಞ್ಜ್ಠ್ಞaಠಿh್ಟd59ಃಜಞaಜ್ಝಿ.್ಚಟಞ

ಮುಂಗಾರು ಪೂರ್ವದಲ್ಲಿಅಬ್ಬರಿಸಿದ್ದ ಮಳೆರಾಯ, ಕಳೆದೆರಡು ವಾರದಿಂದ ಮುನಿಸಿಕೊಂಡಿದ್ದಾನೆ. ಸಕಾಲಕ್ಕೆ ಮಳೆಯಾಗದೆ ಕಂಗಾಲಾಗಿರುವ ರೈತರು ಮಳೆಗಾಗಿ ದೇವರ ಮೊರೆ ಹೊಗಿದ್ದಾರೆ.

ಜಿಲ್ಲೆಯಲ್ಲಿಮುಂಗಾರು ಹಂಗಾಮಿನಲ್ಲಿಕೃಷಿ ಇಲಾಖೆಯು 3.28 ಲಕ್ಷ ಹೆ. ಬಿತ್ತನೆ ಪ್ರದೇಶದ ಗುರಿ ಹಾಕಿಕೊಂಡಿದೆ. ಈ ಪೈಕಿ ಶೇ.70ರಷ್ಟು ಬಿತ್ತನೆ ಮುಗಿದಿದೆ. ಮೆಕ್ಕೆಜೋಳ, ಸೋಯಾಬಿನ್ , ಹತ್ತಿ, ಶೇಂಗಾ, ಉದ್ದು, ತೊಗರಿ, ಭತ್ತ, ಜೋಳ ಸೇರಿದಂತೆ ನಾನಾ ಬೆಳೆಗಳ ಬೀಜ ಬಿತ್ತನೆಯಾಗಿದೆ. ಇದೀಗ ಬೆಳೆಗಳು ಚಿಗುರೊಡೆದು ಸಾಲು ಮಾಡುವ ಹಂತಕ್ಕೆ ತಲುಪಿವೆ. ಆದರೆ ಕಳೆದೆರಡು ವಾರಗಳಿಂದ ಮಳೆಯಾಗದ ಪರಿಣಾಮ ರೈತರು ಆಕಾಶದತ್ತ ಮುಖ ಮಾಡಿ ಕುಳಿತಿದ್ದಾರೆ. ಕೆಲ ರೈತರು ದೇವರ ಮೊರೆ ಹೋಗಿದ್ದಾರೆ. ಅನೇಕ ಗ್ರಾಮಗಳಲ್ಲಿಮಂಗಳವಾರ, ಶುಕ್ರವಾರ ವಾರ ನಡೆಸುವುದು, ಗುರ್ಜಿ ಪೂಜೆ, ಕಪ್ಪೆ ಮದುವೆ, ಕತ್ತೆಗಳ ಮದುವೆ, ಮಳಿ ಮಲ್ಲಪ್ಪನ ಮೆರವಣಿಗೆ ಹೀಗೆ ಅನೇಕ ಬಗೆಯ ಕಾರ್ಯಗಳನ್ನು ಮಾಡುತ್ತಿದ್ದಾರೆ.

ಜಾನಪದ ಹಾಡಿನ ಸೊಬಗು:

ಗುರ್ಜಿ ಗುರ್ಜಿ ಅಲ್ಲಾಡಿ ಬಂದೆ.., ಹಳ್ಳಕೊಳ್ಳ ಹರದಾಡಿ ಬಂದೆ..., ಬಾ ಮಳೆ ಯೇ.. ಕಾರ ಮಳೆಯೇ.. ಎನ್ನುವ ಜಾನಪದ ಹಾಡಿನ ಸೊಗಡಿನ ಮೂಲಕ ಮಳೆರಾಯನನ್ನು ಧರೆಗೆ ಕರೆತರುವ ಪ್ರಯತ್ನವನ್ನು ಹೆಂಗಳೆಯರು ಮಾಡುತ್ತಿದ್ದಾರೆ. ಇತ್ತ ಮಕ್ಕಳು, ಯುವಕರು ಸಹಿತ ಮಳೆ ಮಲ್ಲಪ್ಪನನ್ನು ಮಾಡುವ ಮೂಲಕ ಗ್ರಾಮದಲ್ಲೆಲ್ಲಾಸುತ್ತಾಡಿ, ಮನೆ ಬಾಗಿಲಲ್ಲಿನಿಂತು ಬಿಂದಿಗೆ ನೀರು ಹೋಯ್ಯುವಾಗ ಗಿರಾಗಿರಾ ತಿರುಗಾಡುತ್ತಾ ಹೂಯ್ಯೋ.. ಹುಯ್ಯೋ.. ಮಳೆರಾಯ ಎನ್ನುವ ಘೋಷಣೆಗಳು ಮೊಳಗಿಸುತ್ತಿದ್ದಾರೆ. ಇನ್ನೂ ಕೆಲವೆಡೆ ಶಾಸ್ತೊ್ರೕಕ್ತವಾಗಿ ಕಪ್ಪೆಗಳ ಮದುವೆಯನ್ನು ಮಾಡಿಸುವ ಮೂಲಕ ಮಳೆಯನ್ನು ಕರೆಯುತ್ತಿರುವುದು ಕಂಡುಬರುತ್ತಿದೆ.

-

ಕೋಟ್

ಮುಂಗಾರು ಮಳೆ ನಂಬಿಕೊಂಡು ರೈತರು ಬಿತ್ತನೆ ಮಾಡಿದ್ದಾರೆ. ಈಗಾಗಲೇ ಬೆಳೆ ಚಿಗುರೊಡೆದು ಸಾಲು ಮಾಡುವ ಹಂತಕ್ಕೆ ತಲುಪಿರುವ ಹೊತ್ತಿನಲ್ಲಿಮಳೆ ಬಾರದಿರುವುದರಿಂದ ರೈತರು ಆತಂಕಕ್ಕೀಡಾಗಿದ್ದಾರೆ. ಮಳೆಗಾಗಿ ಗುರ್ಜಿ ಪೂಜೆ ಸಲ್ಲಿಸುವ ಮೂಲಕ ಗ್ರಾಮಸ್ಥರು ದೇವರಲ್ಲಿಪ್ರಾರ್ಥಿಸುತ್ತಿದ್ದೇವೆ. ಇನ್ನಾದರೂ ಮುನಿಸಿಕೊಂಡಿರುವ ವರುಣ ಕೃಪೆ ತೋರಲಿ.

-ಶಿವಾನಂದ ಮ್ಯಾಗೇರಿ, ಹಿರೇಬೆಂಡಿಗೇರಿ ಗ್ರಾಮಸ್ಥ

-

ಕೋಟ್

ಕಳೆದೆರಡು ವಾರಗಳಿಂದ ಜಿಲ್ಲೆಯ ಯಾವ ಭಾಗದಲ್ಲೂಮಳೆಯಾಗದ ಪರಿಣಾಮ ರೈತರು ಚಿಂತೆಗೀಡಾಗಿದ್ದಾರೆ. ಸಾವಿರಾರು ರೂ. ಸಾಲ ಮಾಡಿ ಬಿತ್ತನೆ ಮಾಡಿರುವ ರೈತರು ಆಕಾಶದತ್ತ ನೋಡುತ್ತಿದ್ದಾರೆ. ಬೀಜ, ಗೊಬ್ಬರ ಬೆಲೆ ಏರಿಕೆ ಮಧ್ಯೆ ಮರುಬಿತ್ತನೆ ಮಾಡುವುದು ಅಸಾಧ್ಯ. ಮುಖ್ಯಮಂತ್ರಿಗಳು ಕೃತಕ ಮಳೆ ಸುರಿಸುವ ಮೂಲಕ ಮೋಡ ಬಿತ್ತನೆಗೆ ಮುಂದಾಗಬೇಕು.

-ಭುವನೇಶ್ವರ ಶಿಡ್ಲಾಪುರ, ಅಧ್ಯಕ್ಷ, ಜಿಲ್ಲಾಕಬ್ಬು ಬೆಳೆಗಾರರ ಸಂಘ, ಹಾವೇರಿ

-

21 ಮಂಜು 8

ಶಿಗ್ಗಾವಿ ತಾಲೂಕಿನ ಸೂರುಪಗಟ್ಟಿ ಗ್ರಾಮದಲ್ಲಿಮಳೆಗಾಗಿ ಗುರ್ಜಿ ಪೂಜೆ ಮಾಡಿದ ಮಹಿಳೆಯರು.