ರೈಟ್ ಗೆ ತಗೊಳ್ಳಿ

Contributed bybabitha.salian@timesgroup.com|Vijaya Karnataka
how the relationship between trisha and vijay has evolved
ತ್ರಿಶಾ-ವಿಜಯ್ ಸ್ನೇಹ ಅತಿ ಮಧುರ

ಇಂಟ್ರೊ
ತಮಿಳುನಾಡು ಸಿಎಂ, ಸೂಪರ್ ಸ್ಟಾರ್ ಜೋಸೆಫ್ ವಿಜಯ್ ಹಾಗೂ ಅವರ ನೆಚ್ಚಿನ ಸಹನಟಿ, ಗೆಳತಿ ತ್ರಿಶಾ ನಡುವಿನ ಸಂಬಂಧಕ್ಕೆ ಹಲವರು ಹಲವು ಬಣ್ಣ ಕಟ್ಟಿದರು. ಆದರೆ ಅವರ ನಡುವಿನ ಬಾಂಧವ್ಯ ಎಂದಿಗೂ ಅತಿ ಮಧುರ ಅನುರಾಗದಂತಿದೆ.

ಮಲ್ವೀರ

ನಟಿ ತ್ರಿಶಾ ಕಳೆದ ನಾಲ್ಕು ವರ್ಷಗಳಿಂದ ನಟ ವಿಜಯ್ ಹುಟ್ಟುಹಬ್ಬಕ್ಕೆ ತಮ್ಮಿಬ್ಬರ ಅಪರೂಪದ ಫೋಟೊ ಶೇರ್ ಮಾಡಿ ಅದಕ್ಕೊಂದು ಚಂದದ ಕ್ಯಾಪ್ಷನ್ ಕೊಟ್ಟು ಪೋಸ್ಟ್ ಮಾಡುತ್ತಿದ್ದರು. ಆದರೆ ಈ ಬಾರಿ ಅವರು ದಳಪತಿ ಬತ್ ರ್ ಡೇಯಂದು ವಿಶ್ ಮಾಡದಿದ್ದನ್ನು ನೋಡಿದವರು ಅವರಿಬ್ಬರ ಮಧ್ಯೆ ಭಿನ್ನಾಭಿಪ್ರಾಯ ಮೂಡಿದೆ ಎನ್ನುವ ವದಂತಿ ಹಬ್ಬಿತ್ತು. ಇದಕ್ಕೆ ತೆರೆ ಎಳೆದಿರುವ ತ್ರಿಶಾ, ವಿಜಯ್ ಹುಟ್ಟುಹಬ್ಬದ ಮರುದಿನ ಎಂದಿನಂತೆ ತಮ್ಮಿಬ್ಬರ ಸುಂದರ ಫೋಟೊ ಶೇರ್ ಮಾಡಿ ವಿಶ್ ಮಾಡಿದ್ದಾರೆ.

2026

ಈ ಬಾರಿ ತ್ರಿಶಾ ಅವರು ಸಿಎಂ ವಿಜಯ್ ರೊಂದಿಗೆ ಮಧ್ಯರಾತ್ರಿ ಕೇಕ್ ಕತ್ತರಿಸಿದ ಫೋಟೊ ಶೇರ್ ಮಾಡಿ ‘ಎಲ್ಲದಕ್ಕೂ ಒಂದು ಅರ್ಥ ಕೊಡುವ ನಿನಗೆ ಹುಟ್ಟುಹಬ್ಬದ ಶುಭಾಶಯಗಳು’ ಎಂದು ಬರೆದಿದ್ದಾರೆ. ಈ ಮೂಲಕ ತಮ್ಮಿಬ್ಬರ ನಡುವಿನ ಸ್ಪೇಸ್ ಮೊದಲಿಗಿಂತಲೂ ಹತ್ತಿರ ಎನ್ನುವುದನ್ನು ಹೇಳಿಕೊಂಡಿದ್ದಾರೆ.

2025

ಅಪ್ಪಟ ಪ್ರಾಣಿ ಪ್ರೇಮಿಯಾಗಿರುವ ತ್ರಿಶಾ ಕಳೆದ ವರ್ಷ ತಮ್ಮ ನೆಚ್ಚಿನ ಶ್ವಾನ ಇಝ್ಝಿಯನ್ನು ವಿಜಯ್ ಮುದ್ದು ಮಾಡುತ್ತಿರುವ ಫೋಟೊ ಶೇರ್ ಮಾಡಿ, ‘ನನ್ನ ಬೆಸ್ಟ್ ಫ್ರೆಂಡ್ ಗೆ ಹುಟ್ಟುಹಬ್ಬದ ಶುಭಾಶಯ’ ಎಂದು ಬರೆದಿದ್ದಾರೆ. ಈ ಸಾಕುನಾಯಿಗೆ ತ್ರಿಶಾಗಿಂತ ವಿಜಯ್ ರನ್ನು ಕಂಡರೆ ಹೆಚ್ಚು ಅಕ್ಕರೆ ಎನ್ನುವುದನ್ನು ಅವರು ಹಲವು ಬಾರಿ ಹೇಳಿದ್ದರು.

2024

ನಟಿ ತ್ರಿಶಾ 2024ರಲ್ಲಿತಾವಿಬ್ಬರು ಲಿಫ್ಟ್ ಒಂದರಲ್ಲಿತೆಗೆದುಕೊಂಡ ಚಂದದ ಸೆಲ್ಫಿಯನ್ನು ಸೋಶಿಯಲ್ ಮೀಡಿಯಾದಲ್ಲಿಹಂಚಿಕೊಂಡು, ‘ಬಿರುಗಾಳಿಯನ್ನೇ ಶಾಂತಗೊಳಿಸುವವನು, ಶಾಂತತೆಯನ್ನೇ ಕದಲಿಸುವವನು, ಜೊತೆಯಾಗಿ ಮುನ್ನಡೆಯುವ ಮುಂದಿನ ನೂರಾರು ಮೈಲಿಗಲ್ಲುಗಳಿಗೆ’ ಎಂದು ಬರೆದಿದ್ದಾರೆ. ಈ ಸಾಲುಗಳು ವಿಜಯ್ ಮಾಸ್ ಅಭಿಮಾನಿಗಳಿಗೆ ಇಷ್ಟವಾಗುವ ಶೈಲಿಯ ವಿಶ್ ನಂತಿದ್ದವು.

2023

ವಿಜಯ್ ಮತ್ತು ತ್ರಿಶಾ 2023ರಲ್ಲಿ‘ಲಿಯೋ’ ಸಿನಿಮಾದ ಕಾಶ್ಮೀರ ಶೂಟಿಂಗ್ ವೇಳೆಯಲ್ಲಿತೆಗೆಸಿಕೊಂಡಿದ್ದ ಸುಂದರ ಫೋಟೊ ಶೇರ್ ಮಾಡಿ ಬತ್ ರ್ ಡೇ ವಿಶ್ ಮಾಡಿದ್ದರು.

ಹೀಗೆ ವಿಜಯ್ ಡಿವೋರ್ಸ್ ಕೇಸ್ ನಲ್ಲಿತ್ರಿಶಾ ಹೆಸರು ಕೇಳಿಬಂದರೂ ಅವರಿಬ್ಬರ ನಡುವಿನ ಸ್ನೇಹಕ್ಕೆ ಧಕ್ಕೆಯಾಗಲಿಲ್ಲ. ಇದರ ಮುಂದುವರಿದ ಭಾಗವಾಗಿ ತ್ರಿಶಾ ರಾಜಕೀಯಕ್ಕೆ ಬರುತ್ತಾರೆ, ಅವರಿಗೆ ಟಿಕೆಟ್ ಸಿಗುತ್ತದೆ ಎನ್ನಲಾಗಿತ್ತು. ಆದರೆ ಆ ಅವಕಾಶ ವಿಜಯ್ ಆಪ್ತ ರಾಘವ ಲಾರೆನ್ಸ್ ಗೆ ಹೋಗಿದೆ. ಈ ಕಾರಣ ತ್ರಿಶಾ ಹಾಗೂ ವಿಜಯ್ ನಡುವೆ ವೈಮನಸ್ಸು ಮೂಡಿದೆ, ಸೋಶಿಯಲ್ ಮೀಡಿಯಾದಲ್ಲಿತ್ರಿಶಾ ಅವರು ವಿಜಯ್ ರನ್ನು ಅನ್ ಫಾಲೊ ಮಾಡಿದ್ದಾರೆ ಎಂಬ ಸುದ್ದಿ ಹರಡಿತ್ತು. ಆದರೆ ನಟಿಯು ಅದಕ್ಕೆ ಒಂದೇ ಒಂದು ಫೋಟೊ ಮೂಲಕ ಉತ್ತರಿಸಿದ್ದಾರೆ.