ಲೀಡ್

Contributed bybabitha.salian@timesgroup.com|Vijaya Karnataka
mood kavidha vaataavarana new romantic comedy film
ಸಿಂಪಲ್ ಪ್ರೇಮಕಾವ್ಯದ ವಾತಾವರಣ

ಇಂಟ್ರೊ
ಸೈನ್ಸ್ ಫಿಕ್ಷನ್ ಕಥಾಹಂದರದ ರೊಮ್ಯಾಂಟಿಕ್ ಸಿನಿಮಾ ‘ ಮೋಡ ಕವಿದ ವಾತಾವರಣ ’ ಈ ವಾರ ತೆರೆಗೆ ಬರಲಿದ್ದು, ಈ ಬಗ್ಗೆ ನಿರ್ದೇಶಕ ಸಿಂಪಲ್ ಸುನಿ ಲವಲವಿಕೆಯೊಂದಿಗೆ ಮಾತನಾಡಿದ್ದಾರೆ.

-ಕಿರಣ್ ಚಂದ್ರ

ನಿರ್ದೇಶಕ ಸಿಂಪಲ್ ಸುನಿಯ ‘ಮೋಡ ಕವಿದ ವಾತಾವರಣ’ ಸಿನಿಮಾ ಹಾಡುಗಳು ಹಾಗೂ ಟೀಸರ್ ಈಗಾಗಲೇ ಗಮನ ಸೆಳೆದಿವೆ. ಅವರ ಚೊಚ್ಚಲ ನಿರ್ದೇಶನದ ‘ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ’ ಚಿತ್ರದಂತೆಯೇ ಕಾವ್ಯಾತ್ಮಕವಾಗಿ ಪ್ರಕೃತಿಗೆ ಹತ್ತಿರವಾಗಿ ಸಾಗುವ ಪ್ರೇಮ್ ಕಹಾನಿ ಇರುವ ಕಾರಣ ತಮ್ಮ ಹೊಸ ಸಿನಿಮಾದ ಟೈಟಲನ್ನೂ ಅವರು ಕಾವ್ಯಾತ್ಮಕವಾಗಿ ಇಟ್ಟಿದ್ದಾರೆ.

ಹೊಸ ಪ್ರತಿಭೆ ಲಾಂಚ್

ಅನೇಕ ನಟರನ್ನು ಚಿತ್ರೋದ್ಯಮಕ್ಕೆ ಲಾಂಚ್ ಮಾಡಿಸಿ ಸ್ಟಾರ್ ಮಾಡಿರುವ ಸಿಂಪಲ್ ಸುನಿ ಈ ಬಾರಿ ಶೀಲಮ್ ಎಂಬ ಯುವಕನನ್ನು ತೆರೆಗೆ ತರುತ್ತಿದ್ದಾರೆ. ಈ ಬಗ್ಗೆ ಅವರು, ‘ಚಿತ್ರೋದ್ಯಮದ ಸದ್ಯದ ಪರಿಸ್ಥಿತಿಯಲ್ಲಿಸ್ಟಾರ್ ಸಿನಿಮಾಗಳನ್ನೇ ಮಾಡಬೇಕೆಂದರೆ ಅವರ ಡೇಟ್ಸ್ ಪಡೆದು ಸರಳವಾದರೂ ಅದ್ಭುತ ಎಂದನಿಸುವ ಕಥೆಗಳನ್ನು ಹೇಳುವುದು ಕಷ್ಟ. ಹಾಗಾಗಿ ಪ್ರತಿಭೆಯಿರುವ ಹೊಸಬರನ್ನೇ ನನ್ನ ಸಿನಿಮಾಗಳಿಗೆ ಆಯ್ಕೆ ಮಾಡುತ್ತೇನೆ. ನಾನು ‘ಮೋಡ ಕವಿದ ವಾತಾವರಣ’ ಸಿನಿಮಾ ಎಡಿಟ್ ಮಾಡುವಾಗ ಶೀಲಮ್ ನಟನೆ ಚೆನ್ನಾಗಿದೆ ಅನಿಸಿತು. ಈ ಚಿತ್ರದ ಪ್ರೀಮಿಯರ್ ಸಿಂಗಾಪುರದಲ್ಲಿನಡೆದಾಗ ಅಲ್ಲಿನ ಜನರ ಪ್ರತಿಕ್ರಿಯೆ ನೋಡಿ ಶೀಲಮ್ ರಲ್ಲಿರುವ ಪ್ರೇಕ್ಷಕರ ಮನಸಂತೋಷ ಪಡಿಸುವ ಪ್ರತಿಭೆಯ ಅರಿವಾಯಿತು. ಅಲ್ಲಿಹೊಸಬರಿಗೆ ಸಿಗುವ ರೆಸ್ಪಾನ್ಸ್ ಗಿಂತ ಉತ್ತಮ ಪ್ರತಿಕ್ರಿಯೆನೇ ಸಿಕ್ಕಿದೆ. ಶೀಲಮ್ ನಮ್ಮ ಮನೆಯ ಹುಡುಗ ಇದ್ದಂತೆ. ನಟನೆ ಜತೆಗೆ ಸಿನಿಮಾ ಪ್ರಚಾರದಲ್ಲೂಅವರು ಫೀಲ್ಡಿಗೆ ಇಳಿದು ಎಲ್ಲಾಜವಾಬ್ದಾರಿ ಹೊತ್ತು ಕೆಲಸ ಮಾಡುತ್ತಿದ್ದಾರೆ’ ಎಂದು ಹೇಳಿದ್ದಾರೆ.

ಇಬ್ಬರು ನಾಯಕಿಯರು

‘ಈ ಸಿನಿಮಾ ನಾಯಕಿ ಮೋಕ್ಷಾ ತಮ್ಮ ಪಾತ್ರಕ್ಕೆ ಮೊದಲೇ ತುಂಬಾ ತಯಾರಿ ನಡೆಸುತ್ತಿದ್ದರು. ಈ ವಿಷಯದಲ್ಲಿಅವರ ಡೆಡಿಕೇಷನ್ ಮೆಚ್ಚಬೇಕು. ಇನ್ನು ನಟಿ ಸಾತ್ವಿಕಾ ಥಟ್ ಎಂದು ಮಾಡುವ ಬದಲಾವಣೆಗೆ ಬೇಗನೆ ಹೊಂದಿಕೊಳ್ಳುತ್ತಿದ್ದರು ಮತ್ತು ಅದನ್ನು ನಟಿಸಿ ತೋರಿಸುತ್ತಿದ್ದರು. ಅವರ ಪ್ರತಿಭೆಗೆ ಸಾಕಷ್ಟು ಸಿನಿಮಾ ಸಿಗಬೇಕಿತ್ತು ಎಂದು ಅನಿಸುತ್ತದೆ. ಇಬ್ಬರು ನಾಯಕಿಯರದೂ ಗ್ಲಾಮರಸ್ ಪಾತ್ರವಾದರೂ ಪಕ್ಕದ ಮನೆ ಹುಡುಗಿಯರ ಫೀಲ… ಕೊಡುತ್ತದೆ’ ಎಂದು ಸಿಂಪಲ್ ಸುನಿ ವಿವರಿಸಿದ್ದಾರೆ.

ಹೊಸ ಅನುಭವ

ಈ ಸಿನಿಮಾದ ಮೊದಲರ್ಧ ನನ್ನ ಫ್ಲೇವರ್ ನಂತೆಯೇ ಇದೆ ಎಂದು ಸ್ಪಷ್ಟಪಡಿಸಿರುವ ನಿರ್ದೇಶಕರು, ‘ಭಾರತೀಯ ಚಿತ್ರ ನಿರ್ದೇಶಕರಿಗೆ ಒಂದು ವರ ಕಮ್ ಶಾಪವಿದೆ. ಅದೇನೆಂದರೆ ಇಂಟರ್ವಲ್ ನಲ್ಲಿಒಂದು ಟ್ವಿಸ್ಟ್ ಕೊಡಬೇಕು ಎಂದು. ಬೇರೆ ದೇಶದ ಸಿನಿಮಾಗಳನ್ನು ಪೂರ್ತಿ ನೋಡಿ ಕೊನೆಯಲ್ಲಿರಿವ್ಯೂ ಮಾಡುತ್ತಾರೆ, ಆದರೆ ನಮ್ಮಲ್ಲಿಮೊದಲರ್ಧಕ್ಕೆ ಒಮ್ಮೆ, ದ್ವಿತೀಯಾರ್ಧಕ್ಕೊಮ್ಮೆ ರಿವ್ಯೂ ನೀಡುತ್ತಾರೆ. ಇದರಿಂದ ಒಂದೇ ಚಿತ್ರಕ್ಕೆ ಎರಡು ರಿವ್ಯೂ ಸಿಗುತ್ತವೆ. ನನ್ನ ಅದೃಷ್ಟಕ್ಕೆ ‘ಮೋಡ ಕವಿದ ವಾತಾವರಣ’ ಸಿನಿಮಾದಲ್ಲಿಇಂಟರ್ವಲ್ ಆದ ನಂತರ ಇಡೀ ಕಥೆಯ ಟ್ರ್ಯಾಕ್ ಮತ್ತು ಜಾನರೇ ಬದಲಾಗುತ್ತದೆ. ಮೋಡ ಕವಿದ ವಾತಾವರಣ ಖುಷಿಯಾಗಿದ್ದಾಗ ಒಂದು ಹಿತಾನುಭವ ನೀಡುತ್ತದೆ, ಅದೇ ನಾವು ಬೇಜಾರಿನಲ್ಲಿದ್ದಾಗ ಪ್ರಕೃತಿ ಕೂಡ ನಮ್ಮ ಥರನೇ ಡಿಪ್ರೆಶನ್ ನಲ್ಲಿದೆ ಎಂದು ಅನಿಸುತ್ತದೆ. ಮಳೆ ಬರುತ್ತದೋ, ಇಲ್ಲವೋ ಎನ್ನುವ ಗೊಂದಲವೂ ಇರುತ್ತದೆ. ಇದೇ ಥರ ಸಿನಿಮಾದ ಪ್ರತಿ ಪಾತ್ರದ ಜತೆಗೆ ಪ್ರೇಕ್ಷಕ ಕನೆಕ್ಟ್ ಆದಾಗ ಅದು ಬೇರೆಯದ್ದೇ ಅನುಭವ ನೀಡುತ್ತಾ ಹೋಗುತ್ತದೆ’ ಎಂದು ತಿಳಿಸಿದ್ದಾರೆ.

ಕೋಟ್

ಈ ವಾರ ಮಾಸ್ ಪ್ರೇಕ್ಷಕರಿಗೆಂದೇ ‘ಮೋಡ ಕವಿದ ವಾತಾವರಣ’ ಸಿನಿಮಾ ಬರಲಿದೆ. ಇದು ಕ್ಲಾಸ್ ಪ್ರೇಕ್ಷಕರಿಗೆ ಮತ್ತು ಹೊಸತನ ಬಯಸುವವರಿಗೆ ಫೀಲ್ ಗುಡ್ ಅನಿಸಲಿದೆ. ರೆಗ್ಯುಲರ್ ಕಥೆ ಇರದ ಈ ಚಿತ್ರದ ಫ್ಲ್ಯಾಶ್ ಬ್ಯಾಕ್ ಹೊರತುಪಡಿಸಿ ಶೇ. 70ರಷ್ಟು ದೃಶ್ಯಗಳನ್ನು ಮೋಡ ಕವಿದ ವಾತಾವರಣದಲ್ಲೇ ಶೂಟಿಂಗ್ ಮಾಡಿರುವುದು ವಿಶೇಷ.

-ಸಿಂಪಲ್ ಸುನಿ | ನಿರ್ದೇಶಕ