ಕಾರವಾರ: ಉತ್ತರ ಕನ್ನಡ ಜಿಲ್ಲಾಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ನೌಕರರ ಒಕ್ಕೂಟದ ಅಧ್ಯಕ್ಷರಾಗಿ 6ನೇ ಅವಧಿಗೆ ಜಿ. ಡಿ. ಮನೋಜ್ . ಅವಿರೋಧವಾಗಿ ಆಯ್ಕೆಯಾಗಿದ್ದಾರೆ
ಕಾರವಾರದಲ್ಲಿನಡೆದ ಸರ್ವಸಾಧಾರಣ ಸಭೆಯಲ್ಲಿಆಯ್ಕೆ ಪ್ರಕ್ರಿಯೆ ನಡೆಯಿತು. ಒಕ್ಕೂಟದ ಗೌರವಾಧ್ಯಕ್ಷರಾಗಿ ಅರಣ್ಯ ವಿಭಾಗದ ಮಂಜುನಾಥ ನಾವಿ, ಉಪಾಧ್ಯಕ್ಷರಾಗಿ ಡಾ. ಹೇಮಗಿರಿ. ಕೆ.ಕಾರ್ಯಧ್ಯಕ್ಷರಾಗಿ ಡಾ.ವಿಜಯರಾಜ್ , ಪ್ರಧಾನ ಕಾರ್ಯದರ್ಶಿಯಾಗಿ ಸೀಬರ್ಡ್ ನೆವಲ್ ಬೇಸ್ ಅಧಿಕಾರಿ ಜಗದೀಶ ಓಲೇಕಾರ್ , ಕೋಶಾಧ್ಯಕ್ಷರಾಗಿ ಶಿಕ್ಷಣ ಸಂಯೋಜಕ ಪ್ರಕಾಶ್ ಚೌವ್ಹಾಣ, ಸಹ ಕಾರ್ಯದರ್ಶಯಾಗಿ ಎಮ್ .ಮಂಜಪ್ಪ, ಸಂಘಟನಾ ಕಾರ್ಯದರ್ಶಿಗಳಾಗಿ ಕೆಎಸ್ ಆರ್ ಟಿಸಿಯ ಎನ್ .ವೈ. ರಬಕವಿ ಸೇರಿದಂತೆ ವಿವಿಧ ಪದಾಧಿಕಾರಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.