ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆ

Contributed bygvittalslb@gmail.com|Vijaya Karnataka
guarantee scheme implementation committee meeting to be held in the district
ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆ

ಕೊಪ್ಪಳ: ಜಿಲ್ಲಾಪಂಚಾಯಿತಿಯ ಜೆ.ಎಚ್ . ಪಟೇಲ್ ಸಭಾಂಗಣದಲ್ಲಿರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್ .ಎಂ.ರೇವಣ್ಣ ಅಧ್ಯಕ್ಷತೆಯಲ್ಲಿಜಿಲ್ಲಾಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆ ಜೂ.26 ರಂದು ಮಧ್ಯಾಹ್ನ 12 ಗಂಟೆಗೆ ನಡೆಯಲಿದೆ. ಜಿಲ್ಲಾಉಪಾಧ್ಯಕ್ಷ, ಸದಸ್ಯರು, ತಾಲೂಕು ಅಧ್ಯಕ್ಷರು, ಪದಾಧಿಕಾರಿಗಳು ಸಭೆಯಲ್ಲಿಪಾಲ್ಗೊಳ್ಳಬೇಕು ಎಂದು ಜಿಲ್ಲಾಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ರೆಡ್ಡಿ ಶ್ರೀನಿವಾಸ ಪ್ರಕಟಣೆಯಲ್ಲಿತಿಳಿಸಿದ್ದಾರೆ.
========

ಸಂಸ್ಥೆಗಳ ನವೀಕರಣಕ್ಕೆ ಸೂಚನೆ

ಕೊಪ್ಪಳ: ಜಿಲ್ಲೆಯ ನೋಂದಾಯಿತ ಕ್ರೀಡಾ ಸಂಘ ಸಂಸ್ಥೆಗಳನ್ನು ನವೀಕರಣ ಮಾಡಿಕೊಳ್ಳುವಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವಿಠ್ಠಲ್ ಜಾಬಗೌಡರ್ ತಿಳಿಸಿದ್ದಾರೆ. ಜಿಲ್ಲಾಹಾಗೂ ತಾಲೂಕು ಕ್ರೀಡಾ ಸಂಸ್ಥೆಗಳು ನೋಂದಣಿ ಪ್ರಮಾಣ ಪತ್ರ ಪಡೆದಿವೆ. ಆದರೆ ಇಲಾಖೆಯಲ್ಲಿನವೀಕರಣಗೊಂಡಿರುವುದಿಲ್ಲ. ನವೀಕರಣ ಮಾಡಿಕೊಳ್ಳದಿದ್ದರೆ ಕ್ರೀಡಾ ಇಲಾಖೆಯಿಂದ ಚಟುವಟಿಕೆಗಳಿಗೆ ಸಿಗುವ ಸೌಲಭ್ಯ ರದ್ದುಗೊಳಿಸಲಾಗುವುದು. ಸೇವಾಸಿಂಧು ಪೋರ್ಟಲ್ ಮೂಲಕ ನವೀಕರಿಸಿ ಪ್ರತಿಯನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕಚೇರಿಗೆ ಸಲ್ಲಿಸಬೇಕು.

ಮಾಹಿತಿಗೆ ಸಹಾಯಕ ನಿರ್ದೇಶಕರ ಕಚೇರಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ದೂರವಾಣಿ ಸಂಖ್ಯೆ: 08539-230121ಗೆ ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.