(ಮುಂಗಾರು ಹಂಗಾಮಿನ ಅನಿಶ್ಚಿತತೆಯ ನಡುವೆ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ರೈತರಿಗೆ ಭದ್ರತೆಯ ಭರವಸೆಯಾಗಿದೆ. ಕಡಿಮೆ ವೆಚ್ಚದಲ್ಲಿಹೆಚ್ಚಿನ ವಿಮಾ ರಕ್ಷಣೆ ಒದಗಿಸುವ ಈ ಯೋಜನೆ ಬೆಳೆ ನಷ್ಟದ ಆತಂಕವನ್ನು ಕಡಿಮೆ ಮಾಡಬಲ್ಲದು. ಹೀಗಾಗಿ ತುಮಕೂರು ಜಿಲ್ಲೆಯ ರೈತರು ಕೊನೆಯ ದಿನಾಂಕದೊಳಗೆ ನೋಂದಾಯಿಸಿಕೊಂಡು ಯೋಜನೆಯ ಲಾಭ ಪಡೆಯಬಹುದು. ಈ ಬಗ್ಗೆ ಸಂಪೂರ್ಣ ಮಾಹಿತಿ ಈ ವರದಿಯಲ್ಲಿದೆ.)
ಮುಂಗಾರು ಹಂಗಾಮಿನಲ್ಲಿವಿಮೆ ಮಾಡಿಸಲು ಕರೆ | ಊ್ಕಖಿಐTಖ ಊಐಈ ಕಡ್ಡಾಯ | ಬಿತ್ತನೆ ವಿಫಲವಾದರೆ ಶೇ.25ರಷ್ಟು ಪರಿಹಾರವಿಕ ವಿಶೇಷ, ತುಮಕೂರು
ಅನಿಶ್ಚಿತ ಹವಾಮಾನ, ಮಳೆಯ ಕೊರತೆ, ಅತಿವೃಷ್ಟಿ ಹಾಗೂ ಪ್ರಕೃತಿ ವಿಕೋಪಗಳಿಂದ ಕೃಷಿ ದಿನೇ ದಿನೆ ಸವಾಲಿನ ಕ್ಷೇತ್ರವಾಗುತ್ತಿದೆ. ಇಂತಹ ಸಂದರ್ಭದಲ್ಲಿರೈತರ ಆರ್ಥಿಕ ಭದ್ರತೆಗೆ ನೆರವಾಗುವ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ 2026-27ರ ಮುಂಗಾರು ಹಂಗಾಮಿನಲ್ಲಿತುಮಕೂರು ಜಿಲ್ಲೆಯಲ್ಲಿಜಾರಿಯಾಗಿದೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳ ಸಹಭಾಗಿತ್ವದಲ್ಲಿಇಫ್ಕೊ ಟೋಕಿಯೋ ಜನರಲ್ ಇನ್ಸೂರೆನ್ಸ್ $ ಕಂಪನಿ ಮೂಲಕ ಯೋಜನೆ ಅನುಷ್ಠಾನಗೊಳ್ಳುತ್ತಿದೆ.
ಕೃಷಿ ಸಂಪೂರ್ಣವಾಗಿ ಪ್ರಕೃತಿಯ ಮೇಲೆ ಅವಲಂಬಿತವಾಗಿರುವುದರಿಂದ ಒಂದು ಬಾರಿ ಬೆಳೆ ಕೈಕೊಟ್ಟರೆ ರೈತರು ಸಾಲದ ಸುಳಿಗೆ ಸಿಲುಕುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಈ ಹಿನ್ನೆಲೆಯಲ್ಲಿಬೆಳೆ ನಷ್ಟದಿಂದ ಉಂಟಾಗುವ ಆರ್ಥಿಕ ಹೊಡೆತವನ್ನು ತಗ್ಗಿಸುವ ಉದ್ದೇಶದಿಂದ ವಿಮಾ ಯೋಜನೆ ರೂಪಿಸಲಾಗಿದೆ. ಬೆಳೆ ಸಾಲ ಪಡೆದ ಹಾಗೂ ಪಡೆಯದ ಎಲ್ಲರೈತರು ಯೋಜನೆಯಲ್ಲಿಭಾಗವಹಿಸಬಹುದಾಗಿದೆ. ಯೋಜನೆಯಡಿ ಅಧಿಸೂಚಿತ ಪ್ರದೇಶದಲ್ಲಿಶೇ.75ಕ್ಕಿಂತ ಹೆಚ್ಚು ಬಿತ್ತನೆ ವಿಫಲವಾದರೆ ವಿಮಾ ಮೊತ್ತದ ಶೇ.25ರಷ್ಟು ಪರಿಹಾರ ನೀಡಲಾಗುತ್ತದೆ. ಮಧ್ಯ ಹಂಗಾಮಿನಲ್ಲಿಬೆಳೆ ಇಳುವರಿ ಶೇ.50ಕ್ಕಿಂತ ಕಡಿಮೆಯಾಗುವ ಸಾಧ್ಯತೆ ಕಂಡುಬಂದರೂ ಮುಂಗಡ ಪರಿಹಾರ ದೊರೆಯುತ್ತದೆ. ಕಟಾವಿನ ನಂತರ 14 ದಿನಗಳೊಳಗೆ ಮಳೆ ಅಥವಾ ಪ್ರಕೃತಿ ವಿಕೋಪದಿಂದ ಬೆಳೆ ಹಾನಿಯಾದರೆ ವೈಯಕ್ತಿಕ ಪರಿಹಾರ ಪಡೆಯಲು ಅವಕಾಶವಿದೆ.
ಬಾಕ್ಸ್ $
ಪ್ರಮುಖಾಂಶಗಳು...
* ಬೆಳೆ ಸಾಲ ಪಡೆದ ಮತ್ತು ಪಡೆಯದ ಎಲ್ಲರೈತರಿಗೆ ಅವಕಾಶ
* ಫ್ರೂಟ್ಸ್ ಎಫ್ ಐಡಿ ಹೊಂದಿರುವುದು ಕಡ್ಡಾಯ
* ಬಿತ್ತನೆ ವಿಫಲವಾದರೆ ವಿಮಾ ಮೊತ್ತದ ಶೇ.25ರಷ್ಟು ಪರಿಹಾರ
* ಮಧ್ಯ ಹಂಗಾಮಿನ ಬೆಳೆ ಹಾನಿಗೂ ಮುಂಗಡ ಪರಿಹಾರ
* ಕಟಾವಿನ ನಂತರದ ನಷ್ಟಕ್ಕೂ ವಿಮಾ ರಕ್ಷಣೆ
* ಬ್ಯಾಂಕ್ , ಗ್ರಾಮ ಒನ್ ಹಾಗೂ ಸಿಎಸ್ ಸಿ ಕೇಂದ್ರಗಳಲ್ಲಿನೋಂದಣಿ ಸೌಲಭ್ಯ
ಬಾಕ್ಸ್
ಯೋಜನೆಯ ಪ್ರಮುಖ ಲಾಭಗಳೇನು?
* ಪ್ರಧಾನ ಮಂತ್ರಿಫಸಲ್ ಬಿಮಾ ಯೋಜನೆಯ ವಿಶೇಷತೆ ಎಂದರೆ ಕೇವಲ ಸಂಪೂರ್ಣ ಬೆಳೆ ನಷ್ಟಕ್ಕಷ್ಟೇ ಅಲ್ಲ, ವಿವಿಧ ಹಂತಗಳಲ್ಲಿಉಂಟಾಗುವ ಹಾನಿಗೂ ಪರಿಹಾರ ದೊರೆಯುತ್ತದೆ.
* ಬಿತ್ತನೆ ವಿಫಲವಾದರೆ : ಮಳೆ ಕೊರತೆ ಅಥವಾ ಪ್ರತಿಕೂಲ ಹವಾಮಾನದಿಂದ ಅಧಿಸೂಚಿತ ಪ್ರದೇಶದಲ್ಲಿಶೇ.75ಕ್ಕಿಂತ ಹೆಚ್ಚು ಬಿತ್ತನೆ ವಿಫಲವಾದರೆ ಪರಿಹಾರ.
* ಮಧ್ಯ ಹಂಗಾಮಿನ ಹಾನಿ : ನಿರೀಕ್ಷಿತ ಇಳುವರಿ ಶೇ.50ಕ್ಕಿಂತ ಕಡಿಮೆಯಾಗುವ ಸಾಧ್ಯತೆ ಇದ್ದರೆ ಅಂದಾಜು ಪರಿಹಾರದ ಶೇ.25ರಷ್ಟು ಮೊತ್ತ ಮುಂಗಡವಾಗಿ ಲಭ್ಯ.
* ಕಟಾವಿನ ನಂತರದ ಹಾನಿ : ಬೆಳೆಯನ್ನು ಒಣಗಲು ಬಿಟ್ಟಿರುವಾಗ ಎರಡು ವಾರಗಳೊಳಗೆ ಮಳೆ ಅಥವಾ ಪ್ರಕೃತಿ ವಿಕೋಪದಿಂದ ಹಾನಿಯಾದರೆ ವೈಯಕ್ತಿಕ ಪರಿಹಾರ.
* ಸ್ಥಳ ನಿರ್ದಿಷ್ಟ ಪ್ರಕೃತಿ ವಿಕೋಪ : ಗಾಳಿ ಮಳೆ, ಮಿಂಚು, ಪ್ರವಾಹ ಮುಂತಾದ ಸ್ಥಳೀಯ ವಿಕೋಪಗಳಿಂದ ಹಾನಿಯಾದರೂ ಪರಿಹಾರಕ್ಕೆ ಅವಕಾಶ.
ಬಾಕ್ಸ್
ವಿಮೆ ನೋಂದಣಿಗೆ ಏನೆಲ್ಲಾಅಗತ್ಯ ?
* ಫ್ರೂಟ್ಸ್ ಎಫ್ ಐಡಿ ಸಂಖ್ಯೆ
* ಆಧಾರ್ ಕಾರ್ಡ್
* ಬ್ಯಾಂಕ್ ಖಾತೆ ವಿವರ
* ಜಮೀನು ದಾಖಲೆಗಳು ಬೆಳೆ ವಿವರ
ಬಾಕ್ಸ…
ಎಲ್ಲಿನೋಂದಣಿ?:
ಬ್ಯಾಂಕ್ ಗಳು, ಗ್ರಾಮ ಒನ್ ಕೇಂದ್ರಗಳು, ಕಾಮನ್ ಸರ್ವಿಸ್ ಸೆಂಟರ್ ಗಳು (ಸಿಎಸ್ ಸಿ)
ಬಾಕ್ಸ್
ಪ್ರಮುಖ ಬೆಳೆಗಳ ವಿಮಾ ಕಂತು (ಪ್ರತಿ ಎಕರೆಗೆ)
ಬೆಳೆ ವಿಮಾ ಕಂತು
ಉದ್ದು 314 ರೂ.
ಹೆಸರು 321 ರೂ.
ಅಲಸಂದೆ 283 ರೂ.
ತೊಗರಿ 466 ರೂ.
ಶೇಂಗಾ (ನೀರಾವರಿ) 630 ರೂ.
ಹತ್ತಿ (ಮಳೆಆಶ್ರಿತ) 1,208 ರೂ.
ಹತ್ತಿ (ನೀರಾವರಿ) 1,748 ರೂ.
ಈರುಳ್ಳಿ 1,900 ರೂ.
ಕೆಂಪು ಮೆಣಸಿನಕಾಯಿ 2,519 ರೂ.
ಟೊಮೊಟೊ 3,436 ರೂ.
ಭತ್ತ 879 ರೂ.
ಕೊನೆಯ ದಿನಾಂಕಗಳು...
ಜೂನ್ 30 : ಉದ್ದು, ಹೆಸರು, ಎಳ್ಳು, ಹತ್ತಿ
ಜುಲೈ 15 : ತೊಗರಿ, ಶೇಂಗಾ, ಅಲಸಂದೆ, ಟೊಮೆಟೊ, ಮೆಣಸಿನಕಾಯಿ
ಜುಲೈ 31 : ಈರುಳ್ಳಿ, ಮುಸುಕಿನ ಜೋಳ
ಆಗಸ್ಟ್ 14 : ರಾಗಿ, ಸಾಮೆ, ಹುರುಳಿ, ಭತ್ತ
ಕೋಚ್ :
ಹವಾಮಾನ ವೈಪರೀತ್ಯಗಳು ಹೆಚ್ಚುತ್ತಿರುವ ಇಂದಿನ ಪರಿಸ್ಥಿತಿಯಲ್ಲಿರೈತರು ಬೆಳೆ ವಿಮೆಯನ್ನು ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು. ಕಡಿಮೆ ಕಂತಿನಲ್ಲಿಹೆಚ್ಚಿನ ಆರ್ಥಿಕ ಭದ್ರತೆ ದೊರೆಯುತ್ತದೆ. ಜಿಲ್ಲೆಯ ಎಲ್ಲಅರ್ಹ ರೈತರು ಯೋಜನೆಯ ಸೌಲಭ್ಯ ಪಡೆಯಬೇಕು.
- ಲಕ್ಷ್ಮಣ ಎಸ್ . ಕಳ್ಳೆನ್ನವರ, ಜಂಟಿ ನಿರ್ದೇಶಕ, ಕೃಷಿ ಇಲಾಖೆ
ಫೋಟೋ
23ಟಿಯುಎಂ1 : ಎಐ ಚಿತ್ರ
23ಟಿಯುಎಂ2 : ಲಕ್ಷ್ಮಣ ಎಸ್ . ಕಳ್ಳೆನ್ನವರ, ಜಂಟಿ ನಿರ್ದೇಶಕ, ಕೃಷಿ ಇಲಾಖೆ.