ಖಾಲಿ ಹುದ್ದೆಗಳ ನೇಮಕ್ಕೆ ಆಗ್ರಹ

Contributed bymaruthi.sunagar@timesofindia.com|Vijaya Karnataka
demand for government appointment of vacant positions
ಖಾಲಿ ಹುದ್ದೆಗಳ ನೇಮಕ್ಕೆ ಆಗ್ರಹ

ವಿಕ ಸುದ್ದಿಲೋಕ ಬಳ್ಳಾರಿ
ರಾಜ್ಯದಲ್ಲಿಖಾಲಿಯಿರುವ 56,432 ಹುದ್ದೆಗಳಿಗೆ ಕೂಡಲೇ ರಾಜ್ಯ ಸರಕಾರ ನೇಮಕಕ್ಕೆ ಅಧಿಸೂಚನೆ ಹೊರಡಿಸಬೇಕು ಎಂದು ಆಗ್ರಹಿಸಿ ಎಐಡಿಯುಒನಿಂದ ನಗರದ ಜಿಲ್ಲಾಧಿಕಾರಿಗಳ ಮೂಲಕ ಸಿಎಂಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.

ಉದ್ಯೋಗಾಕಾಂಕ್ಷಿ ಯುವಜನರ ಸತತ ಹೋರಾಟಗಳ ಫಲವಾಗಿ ಕಳೆದ ಡಿಸೆಂಬರ್ ಚಳಿಗಾಲದ ಅಧಿವೇಶನದಲ್ಲಿ56,432 ಹುದ್ದೆಗಳಿಗೆ ಅನುಮೋದನೆ ನೀಡಿದ್ದು, ಆರು ತಿಂಗಳುಗಳಾದರೂ ಕೇವಲ ಕೆಲವೇ ಹುದ್ದೆಗಳಿಗೆ ನೇಮಕಕ್ಕೆ ಅಧಿಸೂಚನೆ ಹೊರಡಿಸಲಾಗಿದೆ. ನಾನಾ ನೆಪವೊಡ್ಡಿ ನೇಮಕಾತಿ ಪ್ರಕ್ರಿಯೆ ಮುಂದೂಡಲಾಗುತ್ತಿದೆ. ರಾಜ್ಯಸರಕಾರ ನುಡಿದಂತೆ 56,432 ಹುದ್ದೆಗಳಿಗೆ ಈ ಕೂಡಲೇ ಅಧಿಸೂಚನೆ ಹೊರಡಿಸಬೇಕು. ಇತ್ತೀಚೆಗೆ ಪೊಲೀಸ್ ನೇಮಕಕ್ಕೆ ಹೊರಡಿಸಿರುವ ಅಧಿಸೂಚನೆಯಲ್ಲಿದುಬಾರಿ ಪರೀಕ್ಷಾ ಶುಲ್ಕವನ್ನು 750ರೂ.ಗೆ ನಿಗದಿಗೊಳಿಸಲಾಗಿದೆ. ಈ ಮೊದಲು 400ರೂ. ಮಾತ್ರ ಇತ್ತು. ಏಕಾಏಕಿ ಪರೀಕ್ಷಾ ಶುಲ್ಕವನ್ನು ದುಪ್ಪಟ್ಟುಗೊಳಿಸಲಾಗಿದೆ. ಪೊಲೀಸ್ ನೇಮಕಾತಿ ಅರ್ಜಿ ಶುಲ್ಕವನ್ನು ಸಂಪೂರ್ಣವಾಗಿ ಕೈಬಿಡಬೇಕು. ಈ ಮಧ್ಯೆ ಕೆಪಿಎಸ್ ಸಿ ನಡೆಸಿದ ಕೆಎಎಸ್ ಪರೀಕ್ಷೆಯಲ್ಲಿವ್ಯಾಪಕ ಭ್ರಷ್ಟಚಾರ ನಡೆದಿರುವ ಆರೋಪಗಳಿದ್ದು, ಅದರ ಬಗ್ಗೆ ಸಮಗ್ರ ತನಿಖೆಯಾಗಬೇಕು. ಪಿ.ಸಿ. ಹೋಟಾ ಸಮಿತಿಯ ವರದಿಯನ್ನು ತಕ್ಷಣವೇ ಜಾರಿಗೊಳಿಸಿ, ಮುಂದಿನ ಎಲ್ಲನೇಮಕವನ್ನು ಪಾರದರ್ಶಕವಾಗಿ ನಡೆಯುವಂತೆ ಖಾತ್ರಿಪಡಿಸಬೇಕು. ಪೊಲೀಸ್ ನೇಮಕಕ್ಕೆ ಅರ್ಜಿ ಸಲ್ಲಿಕೆಗೆ ಸರ್ವರ್ ಸಮಸ್ಯೆ ಮತ್ತು ಇನ್ನಿತರ ತಾಂತ್ರಿಕ ಸಮಸ್ಯೆ ಬಗೆಹರಿಸಿ ಹಾಗೂ ಅರ್ಜಿ ಸಲ್ಲಿಕೆಯ ಕೊನೆ ದಿನಾಂಕ (ಗಡುವು) ವಿಸ್ತರಿಸಬೇಕು ಎಂದು ಪದಾಧಿಕಾರಿಗಳು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಸಂಘಟನೆ ಜಿಲ್ಲಾಧ್ಯಕ್ಷ ಎ.ಪಂಪಾಪತಿ ಕೋಳೂರು, ಜಿಲ್ಲಾಕಾರ್ಯದರ್ಶಿ ಜಗದೀಶ್ ನೇಮಕಲ್ , ಸದಸ್ಯ ಪ್ರಮೋದ್ , ಉದ್ಯೋಗಾಕಾಂಕ್ಷಿಗಳಾದ ಮೋಹನ್ , ಶಿವಶಂಕರ್ , ಅಶೋಕ್ ಸೇರಿ ಇತರರಿದ್ದರು.

23 ಮಾರುತಿ 02

ರಾಜ್ಯದಲ್ಲಿಖಾಲಿಯಿರುವ ಹುದ್ದೆಗಳಿಗೆ ಕೂಡಲೇ ರಾಜ್ಯ ಸರಕಾರ ಅಧಿಸೂಚನೆ ಹೊರಡಿಸಬೇಕು ಎಂದು ಆಗ್ರಹಿಸಿ ಬಳ್ಳಾರಿಯಲ್ಲಿಎಐಡಿಯುಒನ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಮೂಲಕ ಸಿಎಂಗೆ ಮಂಗಳವಾರ ಮನವಿ ಸಲ್ಲಿಸಿದರು.