‘‘ವಡವಡಗಿಯ ನಂದಿ ಮಠವು ಭಕ್ತರ ಪಾಲಿನ ಶ್ರದ್ಧಾ ಕೇಂದ್ರವಾಗಿದ್ದು, ಭವ್ಯ ದಾಸೋಹ ಪರಂಪರೆಯನ್ನು ಮುಂದುವರಿಸಿಕೊಂಡು ಭಕ್ತರನ್ನು ಸನ್ಮಾರ್ಗದಲ್ಲಿನಡೆಸುತ್ತಿದೆ,’’ ಎಂದು ಚಡಚಣದ ಷಡಕ್ಷರಿ ಸ್ವಾಮೀಜಿ ಹೇಳಿದರು.
ಬಸವನಬಾಗೆವಾಡಿ ತಾಲೂಕಿನ ವಡವಡಗಿ ಗ್ರಾಮದ ನಂದಿ ಮಠದಲ್ಲಿಲಿಂ.ಮಲ್ಲಿಕಾರ್ಜುನ ಸ್ವಾಮೀಜಿಯವರ ನಾಲ್ಕನೇ ಪುಣ್ಯಾರಾಧನೆ ಹಾಗೂ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮದಲ್ಲಿಅವರು ಮಾತನಾಡಿದರು.
ಕೋರವಾರದ ಕಾಶಲಿಂಗ ಸ್ವಾಮೀಜಿ, ಶಿವಪುರದ ಸಿದ್ದಲಿಂಗ ಸ್ವಾಮೀಜಿ ಮಾತನಾಡಿದರು. ಹೆಬ್ಬಾಳದ ಮಹಾಂತಯ್ಯ ಶಿವಮೂರ್ತಿ ಹಿರೇಮಠ ಶ್ರೀಗಳ ಕರ್ತೃ ಗದ್ದುಗೆಗೆ ರುದ್ರಾಭೀಷೆಕ, ವಿಶೇಷ ಪೂಜೆ ನೆರವೇರಿಸಿದರು. ಕಲಕೇರಿಯ ಮಡಿವಾಳೇಶ್ವರ ಶಿವಾಚಾರ್ಯ ಸ್ವಾಮೀಜಿ ನೇತೃತ್ವ, ಪಡೇಕನೂರಿನ ಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯ, ಶ್ರೀಮಠದ ಗುರುವೀರಸಿದ್ಧ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿಧ್ವನಿಸುರುಳಿಯ ಸಾಹಿತ್ಯ ರಚಿಸಿದ ಭೀಮಸೂತ ಸಿದ್ದರಾಮ ಬ್ಯಾಕೋಡ ಹಾಗೂ ಧ್ವನಿಸುರುಳಿ ಹೊರತರಲು ಆರ್ಥಿಕ ಸಹಾಯ ಮಾಡಿದ ಗುರುರಾಜ ಕಮತಗಿ ಅವರನ್ನು ಗೌರವಿಸಲಾಯಿತು.