ಪರಶುರಾಂಪುರ: ರಾಜ್ಯದಲ್ಲಿವಿದ್ಯುತ್ ವಿತರಣಾ ವ್ಯವಸ್ಥೆಯನ್ನು ಖಾಸಗಿ ಕಂಪನಿಗೆ ಹಸ್ತಾಂತರಿಸುವ ಪ್ರಸ್ತಾಪವನ್ನು ಸರಕಾರ ಈ ಕೂಡಲೇ ಕೈಬಿಡಬೇಕು ಎಂದು ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಚಿಕ್ಕಣ್ಣ ತಿಳಿಸಿದರು.ಗ್ರಾಮದ ಅಖಂಡ ಕರ್ನಾಟಕ ರೈತ ಸಂಘದ ಮುಖಂಡರು ಸರಕಾರ ವಿದ್ಯುತ್ ಖಾಸಗೀಕರಣಗೊಳಿಸುವುದನ್ನು ವಿರೋಧಿಸಿ ಸೊಮವಾರ ಗ್ರಾಮದಲ್ಲಿಪ್ರತಿಭಟನೆ ನಡೆಸಿ ಇಲ್ಲಿನ ಬೆಸ್ಕಾಂ ಹಾಗೂ ನಾಡ ಕಚೇರಿಗೆ ತೆರಳಿ ಮನವಿ ಸಲ್ಲಿಸಿ, ಮಾತನಾಡಿದರು.
ತಾಲೂಕು ಪ್ರಧಾನ ಕಾರ್ಯದರ್ಶಿ ಚೌಳೂರು ಎಚ್ .ಪ್ರಕಾಶ್ , ಹೋಬಳಿ ಅಧ್ಯಕ್ಷ ನವೀನ್ ಗೌಡ ಮಾತನಾಡಿದರು.