ಆವಾಸ್ ಯೋಜನೆ ಅವಧಿ ವಿಸ್ತರಣೆಅಣ್ಣಿಗೇರಿ: ಪ್ರಧಾನ ಮಂತ್ರಿ ಆವಾಸ್ ಯೋಜನೆ 2. 0 ನಗರ ಅಡಿ ಕಚ್ಚಾ ಮನೆ ಹೂಂದಿರುವ ವಸತಿ ರಹಿತ ಮತ್ತು ನಿವೇಶನ ರಹಿತ ಕುಟುಂಬಗಳಿಗೆ ಅರ್ಜಿ ಸಲ್ಲಿಸುವ ಅವಧಿಯನ್ನು ಜೂ.30ರ ವರೆಗೆ ವಿಸ್ತರಿಸಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ವೈ.ಜಿ.ಗದ್ದಿಗೌಡರ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಯನ್ನು ಕಚೇರಿ ವೇಳೆ ಅರ್ಜಿ ನಮೂನೆ ಪಡೆದು ಭರ್ತಿ ಮಾಡಿ ಆನ್ ಲೈನ್ ಸೇವಾಕೇಂದ್ರ ಅಥವಾ ತಾವೇ ಖುದ್ದಾಗಿ ವೆಬ್ ಸೈಟ್ ನಲ್ಲಿಅರ್ಜಿ ಹಾಗೂ ದಾಖಲೆ ಸಲ್ಲಿಸಬೇಕು ಎಂದಿದ್ದಾರೆ.