ಪ್ರತಿದಿನ ಅನೇಕ ವಾಹನಗಳು ರೈಲ್ವೆ ಹಳಿಯ ಮೇಲೆಯೇ ಸಂಚರಿಸುವುದನ್ನು ನೋಡುತ್ತಿದ್ದೇವೆ. ಇದುವರೆಗೆ ಯಾವುದೇ ಅನಾಹುತ ಸಂಭವಿಸಿಲ್ಲಎಂಬುದು ಸಮಾಧಾನದ ವಿಷಯವಾದರೂ, ಮುಂದೆಯೂ ಹಾಗೆಯೇ ಇರುತ್ತದೆ ಎನ್ನಲು ಸಾಧ್ಯವಿಲ್ಲ. ಅಪಘಾತ ಸಂಭವಿಸುವ ಮೊದಲೇ ಸಂಬಂಧಿಸಿದ ಅಧಿಕಾರಿಗಳು ಎಚ್ಚೆತ್ತುಕೊಂಡು ಬ್ಯಾರಿಕೇಡ್ ಅಳವಡಿಸಿ ಅಕ್ರಮ ಸಂಚಾರವನ್ನು ಸಂಪೂರ್ಣ ತಡೆಯಬೇಕು. ಸಾರ್ವಜನಿಕರ ಸುರಕ್ಷತೆಗಾಗಿ ಕೋಟ್ಯಂತರ ರೂ. ವೆಚ್ಚದಲ್ಲಿನಿರ್ಮಿಸಿರುವ ಅಂಡರ್ ಪಾಸ್ ನ್ನು ಬಳಸದೆ ನಿಯಮ ಉಲ್ಲಂಘಿಘಿಸುವುದು ಬೇಜವಾಬ್ದಾರಿತನದ ನಡೆ.
- ಜಗದೀಶ್ , ತುಪ್ಪೆಕಲ್ ಫರಂಗಿಪೇಟೆ23ವೈಎ ಜಗದೀಶ್
ಅಂಡರ್ ಪಾಸ್ ರಸ್ತೆ ಹಾಗೂ ಕುಂಪನಮಜಲು ಸಂಪರ್ಕ ರಸ್ತೆ ನಿರ್ಮಾಣಕ್ಕಾಗಿ ಕಳೆದ ಎಂಟು ವರ್ಷಗಳಿಂದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳೊಂದಿಗೆ ನಿರಂತರವಾಗಿ ಚರ್ಚೆ ನಡೆಸಿದ್ದೇವೆ. ಅದರ ಫಲವಾಗಿ ಕುಂಪನಮಜಲು ಭಾಗದಲ್ಲಿಸುಸಜ್ಜಿತ ಗೇಟ್ ಹೊಂದಿದ ರೈಲ್ವೇ ಕ್ರಾಸಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ರಸ್ತೆಗಳು ಕಾಂಕ್ರಿಟೀಕರಣಗೊಂಡಿರುವುದರಿಂದ ಈಗ ಈ ಭಾಗದಲ್ಲಿಸಂಚಾರಕ್ಕೆ ಯಾವುದೇ ತೊಂದರೆ ಇಲ್ಲ. ಫರಂಗಿಪೇಟೆಯಲ್ಲಿಹಲವು ವರ್ಷಗಳಿಂದ ರೈಲಯ ಹಳಿ ಮೇಲಿನ ಅಕ್ರಮ ವಾಹನ ಸಂಚಾರ ನಡೆಯುತ್ತಿದ್ದು, ಅಂಡರ್ ಪಾಸ್ ಲಭ್ಯವಿದ್ದರೂ ಅದನ್ನು ಬಳಸದೆ ಹಳಿ ದಾಟುವುದು ಕಾನೂನು ಉಲ್ಲಂಘನೆಯಷ್ಟೇ ಅಲ್ಲ, ಜೀವಕ್ಕೆ ಅಪಾಯವನ್ನು ಆಹ್ವಾನಿಸುವಂತದ್ದಾಗಿದೆ.
- ದಿನೇಶ್ ಶೆಟ್ಟಿ ಕೊಟ್ಟಿಂಜ
23ವೈಎ ದಿನೇಶ್
ರೈಲ್ವೆ ಇಲಾಖೆ ನಿರ್ಮಿಸಿರುವ ನೂತನ ಅಂಡರ್ ಪಾಸ್ ರಸ್ತೆ ಈ ಭಾಗದ ಜನರಿಗೆ ಉತ್ತಮ ಸೌಲಭ್ಯವಾಗಿದೆ. ಆರಂಭದಲ್ಲಿಮಳೆನೀರು ಶೇಖರಣೆಯಾಗುವ ಸಮಸ್ಯೆ ಇದ್ದರೂ, ಬಳಿಕ ಅಭಿವೃದ್ಧಿ ಕಾಮಗಾರಿ ನಡೆಸಿ ಕಾಂಕ್ರೀಟ್ ರಸ್ತೆ ನಿರ್ಮಿಸಿರುವುದರಿಂದ ಸಂಚಾರ ಸುಗಮವಾಗಿದೆ. ಇಂತಹ ಸುರಕ್ಷಿತ ವ್ಯವಸ್ಥೆ ಲಭ್ಯವಿರುವಾಗ ವಾಹನ ಸವಾರರು ರೈಲ್ವೇ ಹಳಿಯ ಮೇಲೆ ಸಂಚರಿಸುವುದನ್ನು ತಪ್ಪಿಸಿ ಅಂಡರ್ ಪಾಸ್ ಬಳಸುವುದು ಅಗತ್ಯ.
- ಪ್ರಕಾಶ್ ಮಡಿವಾಳ, ಫರಂಗಿಪೇಟೆ
23ವೈಎ ಪ್ರಕಾಶ್
ಧಿ-
ಕ್ಯಾಪ್ಶನ್
ಅಂಡರ್ ಪಾಸ್ ರಸ್ತೆಯ ಸನಿಹದಲ್ಲೇ ಮಾರ್ಗ ಮತ್ತು ರೈಲು ಮಾರ್ಗ ಸಮಾನಾಂತರವಾಗಿರುವುದರಿಂದ ಗೇಟ್ ಸಹಿತ ರೈಲ್ವೆ ಕ್ರಾಸಿಂಗ್ ವ್ಯವಸ್ಥೆ.