ಭಕ್ತಿ ಸಮಾಜದ ಏಳ್ಗೆಗೆ ಬಳಕೆಯಾಗಲಿ

Contributed byadarshkodi15@gmail.com|Vijaya Karnataka
the rise of devotion society communalism class disparity and civil rights
ಭಕ್ತಿ ಸಮಾಜದ ಏಳ್ಗೆಗೆ ಬಳಕೆಯಾಗಲಿ

ವಿಚಾರ ಸಂಕಿರಣ ಉದ್ಘಾಟಿಸಿದ ಅಧ್ಯಕ್ಷ ಕಾ.ತ.ಚಿಕ್ಕಣ್ಣ ಸಲಹೆ
ವಿಕ ಸುದ್ದಿಲೋಕ ದೊಡ್ಡಬಳ್ಳಾಪುರ

ಭಕ್ತಿಯು ಸಮಾಜದ ಏಳಿಗೆಗಾಗಿ ಬಳಕೆಯಾಗಬೇಕು. ಆದರೆ ಇಂದು ಕೋಮುವಾದ, ಶ್ರೇಣಿವಾದಗಳಿಗೆ ಭಕ್ತಿ ಬಳಕೆಯಾಗುತ್ತಿರುವುದು ವಿಷಾದಕರ ಎಂದು ಸಂತಕವಿ ಕನಕದಾಸ ಮತ್ತು ತತ್ವ ಪದಕಾರರ ಅಧ್ಯಯನ ಕೇಂದ್ರದ ಅಧ್ಯಕ್ಷ ಕಾ.ತ.ಚಿಕ್ಕಣ್ಣ ಹೇಳಿದರು.

ನಗರದ ಕನ್ನಡ ಜಾಗೃತ ಪರಿಷತ್ , ಸಂತಕವಿ ಕನಕದಾಸ ಮತ್ತು ತತ್ವ ಪದಕಾರರ ಅಧ್ಯಯನ ಕೇಂದ್ರದಿಂದ ಕನ್ನಡ ಜಾಗೃತ ಭವನದಲ್ಲಿನಡೆದ ’ವಚನ ಮತ್ತು ದಾಸ ಸಾಹಿತ್ಯ ಬಹುಶಿಸ್ತೀಯ ನೋಟ’ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

ಕನಕದಾಸರ ನಾಲ್ಕು ಕೃತಿಗಳ ಪೈಕಿ ’ರಾಮಧಾನ್ಯ ಚರಿತೆ’ ಪ್ರಸ್ತುತವಾಗಿದೆ. ಸಮಾಜದಲ್ಲಿಅಸಮಾನತೆ, ಮೇಲು ಕೀಳು, ಜಾತಿ ವ್ಯವಸ್ಥೆಯ ಬಗ್ಗೆ ಬೆಳಕು ಚೆಲ್ಲಿಸಮ ಸಮಾಜ ನಿರ್ಮಾಣದ ಅಗತ್ಯ ಒತ್ತಿ ಹೇಳುತ್ತದೆ. ಸಮಾಜದ ದಳ್ಳುರಿಗಳನ್ನು ಎತ್ತಿ ತೋರಿಸುವ ಮೂಲಕ ಮಾನವೀಯ ಅಂತಃಕರಣದ ಮಹತ್ವ ಪ್ರತಿಪಾದಿಸುವ ಕನಕದಾಸರು ಶ್ರೇಷ್ಠ ಕವಿಯಾಗುತ್ತಾರೆ. ಸಮಾಜದ ಅನಿಷ್ಟ ಪದ್ಧತಿಗಳನ್ನು ಹೋಗಲಾಡಿಸಲು ಬುದ್ಧ, ಬಸವ, ಕನಕ ಹಾಗೂ ಅಂಬೇಡ್ಕರ್ ಅವರಂತಹ ಮಹನೀಯರ ಮಾರ್ಗದರ್ಶನ ಬೇಕಿದೆ ಎಂದರು.

ಶಾಸ್ತ್ರಗಳು ಅರಿವಿನ ವಿಸ್ತಾರಕ್ಕೆ ಬುನಾದಿ: ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿವಚನ ಮತ್ತು ದಾಸ ಪರಂಪರೆ ಎರಡು ಪ್ರಮುಖ ಘಟ್ಟ. ಬಹುಶಿಸ್ತೀಯ ಅಧ್ಯಯನಕ್ಕೆ ವಿಫುಲ ಅವಕಾಶಗಳಿವೆ. ಅಧ್ಯಯನದಲ್ಲಿಎಲ್ಲಾಶಾಸ್ತ್ರಗಳು ನಮ್ಮ ಅರಿವಿನ ವಿಸ್ತಾರಕ್ಕೆ ಬುನಾದಿಯಾಗಲಿದೆ ಎಂದರು. ವಚನ ಸಾಹಿತ್ಯ ಕನ್ನಡ ಸಾಹಿತ್ಯದ ಮುಕುಟಪ್ರಾಯ. ದಾಸ ಸಾಹಿತ್ಯ ಭಕ್ತಿಯ ನೆಲೆಗಟ್ಟಿನಲ್ಲಿತನ್ನದೇ ಆದ ಅಸ್ತಿತ್ವ ಹೊಂದಿದೆ. ದಾಸ ಸಾಹಿತ್ಯದಲ್ಲಿ150 ದಾಸರು ಬಂದು ಹೋದರೂ ನಮಗೆ ಪ್ರಮುಖವಾಗಿ ಕಾಣುವುದು ಕನಕದಾಸರು ಹಾಗೂ ಪುರಂದರದಾಸರು. ಕನಕದಾಸರು ಕವಿಯಾಗಿ ಮಾನವೀಯ ತಲ್ಲಣಗಳನ್ನು ಪ್ರತಿಪಾದಿಸುತ್ತಾರೆ ಎಂದು ಸ್ಮರಿಸಿದರು.

ಬದುಕಿನ ಕಾಲದ ಪ್ರಜ್ಞೆ : ಕನಕ ಸೇರಿದಂತೆ ಅನುಭವಿ ದಾಸರ ದೇಸಿ ಪ್ರಜ್ಞೆ, ನುಡಿ ಪ್ರೇಮ’ ಕುರಿತು ಮಾತನಾಡಿದ ಶಾಸ್ತಿ್ರೕಯ ಭಾಷೆಯ ಅಧ್ಯಯನ ಕೇಂದ್ರದ ನಿವೃತ್ತ ಪ್ರಾಧ್ಯಾಪಕ ಡಾ.ಆರ್ .ಚಲಪತಿ, ’ಕನಕದಾಸರು ಸೇರಿದಂತೆ ಹಲವಾರು ದಾಸವೇಣ್ಯರು ತಮ್ಮ ಸಾಹಿತ್ಯದಲ್ಲಿದೇಸಿ ಪ್ರಜ್ಞೆಯನ್ನು ಬಿಂಬಿಸಿದ್ದಾರೆ. ಇಲ್ಲಿದೇಸಿ ಎನ್ನುವುದು ತಮ್ಮತನ ಎನಿಸಿಕೊಳ್ಳುತ್ತದೆ ಆದರೂ ನಮಗೆ ಅರಿವಿಲ್ಲದಂತೆ ನಮ್ಮದಲ್ಲದ್ದು ನುಸುಳುತ್ತದೆ. ನಮಗೆ ಯಾವ ಅರಿವುಬೇಕು ಎನ್ನುವ ನಮ್ಮ ಆಯ್ಕೆಯೇ ಕಗ್ಗಂಟಾಗಲಿದೆ. ಕನಕದಾಸರು ಕುಲ ಕುಲವೆಂದು ಹೊಡೆದಾಡದಿರಿ ಎಂದು ಅಸ್ಪೃಶ್ಯತೆ, ಅಸಮಾನತೆ, ಮೇಲು ಕೀಳುಗಳ ಭಾವನೆ ತೊಡೆಯಲು ಯತ್ನಿಸಿದರು ಎಂದರು.

ಹಿರಿಯ ಪತ್ರಕರ್ತ ಕೆ.ನರಸಿಂಹಮೂರ್ತಿ ‘ಕೆಳವರ್ಗದ ವಚನಕಾರರು ಮತ್ತು ಕೀರ್ತನಕಾರರ ಅರಿವಿನ ಹಾದಿಗಳು’ ಕುರಿತು, ಪ್ರಾಧ್ಯಾಪಕಿ ಎ.ಶ್ರೀಲತಾ ’ವಚನಕಾರ್ತಿಯರ ಜೀವನ ನೋಟ’ ಕುರಿತು ಮಾತನಾಡಿದರು.

ಈ ವೇಳೆಯಲ್ಲಿಕನ್ನಡ ಜಾಗೃತ ಪರಿಷತ್ ಅಧ್ಯಕ್ಷ ವೆಂಕಟೇಶ್ , ಪ್ರಧಾನ ಕಾರ್ಯದರ್ಶಿ ಡಿ.ಪಿ.ಆಂಜನೇಯ, ಕಾರ್ಯಕಾರಿ ಸಮಿತಿಯ ವೆಂಕಟರಾಜು, ಜಿ.ಸಿ.ಶಿವಕುಮಾರ್ , ಅಧ್ಯಯನ ಕೇಂದ್ರದ ಸದಸ್ಯ ಕಾರ್ಯದರ್ಶಿ ಕರಿಯಪ್ಪ, ನಗರಸಭೆ ಸದಸ್ಯ ಟಿ.ಎನ್ .ಪ್ರಭುದೇವ್ ಹಾಜರಿದ್ದರು.

ಫೋಟೋ:2306ವಿಕೆ2: ದೊಡ್ಡಬಳ್ಳಾಪುರದ ಕನ್ನಡ ಜಾಗೃತ ಭವನದಲ್ಲಿಸಂತಕವಿ ಕನಕದಾಸ ಮತ್ತು ತತ್ತ್ವ ಪದಕಾರರ ಅಧ್ಯಯನ ಕೇಂದ್ರದಿಂದ ನಡೆದ ವಿಚಾರ ಸಂಕಿರಣವನ್ನು ಅಧ್ಯಯನ ಕೇಂದ್ರದ ಅಧ್ಯಕ್ಷ ಕಾ.ತ.ಚಿಕ್ಕಣ್ಣ ಉದ್ಘಾಟಿಸಿದರು.