ಕೆಂಪೇಗೌಡ ಒಕ್ಕಲಿಗ ವೇದಿಕೆಯ ಸದಸ್ಯತ್ವ ಅಭಿಯಾನ

Contributed byrahulgowdaak@gmail.com|Vijaya Karnataka
a step towards the development of the okkaliga community membership campaign of the kempegowda platform
ಕೆಂಪೇಗೌಡ ಒಕ್ಕಲಿಗ ವೇದಿಕೆಯ ಸದಸ್ಯತ್ವ ಅಭಿಯಾನ

ವಿಕ ಸುದ್ದಿಲೋಕ ಕೊಟ್ಟಿಗೆಹಾರ
ಕೆಂಪೇಗೌಡ ಒಕ್ಕಲಿಗ ವೇದಿಕೆಯ ಹೋಬಳಿ ಮಟ್ಟದ ಸದಸ್ಯತ್ವ ಅಭಿಯಾನಕ್ಕೆ ಕೊಟ್ಟಿಗೆಹಾರದಲ್ಲಿತಾಲೂಕು ಅಧ್ಯಕ್ಷ ಬ್ರಿಜೇಶ್ ಸೋಮವಾರ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು, ಸಮಾಜದ ಸಂಘಟನೆ ಮತ್ತು ಅಭಿವೃದ್ಧಿಗೆ ಸದಸ್ಯತ್ವ ಅಭಿಯಾನ ಮಹತ್ವದಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿಯುವಜನರು ಸಂಘಟನೆಯೊಂದಿಗೆ ಕೈಜೋಡಿಸಬೇಕು. ಒಕ್ಕಲಿಗ ಸಮುದಾಯದ ಹಕ್ಕುಗಳು, ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಗಾಗಿ ವೇದಿಕೆ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದು, ಸದಸ್ಯತ್ವದ ಮೂಲಕ ಸಂಘಟನೆಯನ್ನು ಇನ್ನಷ್ಟು ಬಲಪಡಿಸಬೇಕಾಗಿದೆ ಎಂದು ಹೇಳಿದರು.

ಮುಖಂಡರಾದ ಪ್ರವೀಣ್ ಗೌಡ, ಅನುಕುಮಾರ್ , ಸಂಜಯ್ ಗೌಡ, ಅಭಿಲಾಶ್ , ಶರತ್ , ಯತೀಶ್ ಪ್ರಸನ್ನ, ಮುದುಕುಮಾರ್ , ಮೋಹನ್ ಆರ್ಯ ಹಾಗೂ ಹೋಬಳಿ ಮತ್ತು ಗ್ರಾಮ ಮಟ್ಟದ ಮುಖಂಡರು, ಪದಾಧಿಕಾರಿಗಳು ಇದ್ದರು.