ಚಿತ್ರದುರ್ಗ: ದೇಶದ ಏಕತೆ, ಅಖಂಡತೆ ಮತ್ತು ರಾಷ್ಟ್ರಭಕ್ತಿಯ ಪ್ರತೀಕವಾಗಿದ್ದ ಮಹಾನ್ ಚಿಂತಕ ಡಾ.ಶ್ಯಾಮಪ್ರಸಾದ ಮುಖರ್ಜಿ ಅವರ ತ್ಯಾಗ ಮತ್ತು ಆದರ್ಶಗಳು ನಮ್ಮೆಲ್ಲರಿಗೂ ಪ್ರೇರಣೆ ಎಂದು ಸಂಸದ ಗೋವಿಂದ ಎಂ. ಕಾರಜೋಳ ಹೇಳಿದರು.ನಗರದ ಜಿಲ್ಲಾಬಿಜೆಪಿ ಕಚೇರಿಯಲ್ಲಿಮಂಗಳವಾರ ಆಯೋಜಿಸಿದ್ದ ಭಾರತೀಯ ಜನಸಂಘದ ಸಂಸ್ಥಾಪಕ ಡಾ.ಶ್ಯಾಮ್ ಪ್ರಸಾದ ಮುಖರ್ಜಿ ಅವರ ಬಲಿದಾನ ದಿನಾಚರಣೆಯಲ್ಲಿಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಮಾತನಾಡಿದರು.
ಬಿಜೆಪಿ ಅಧ್ಯಕ್ಷ ಕೆ.ಟಿ.ಕುಮಾರಸ್ವಾಮಿ, ಜಿಲ್ಲಾಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಯಾದವ್ , ಉಪಾಧ್ಯಕ್ಷರಾದ ಡಾ.ಸಿದ್ದಾರ್ಥ ಗುಂಡಾರ್ಪಿ, ಎಚ್ .ಎನ್ .ಲೋಕೇಶ್ ಕುಮಾರ್ , ನಾಗರಾಜ್ , ಪರಶುರಾಮ್ , ರಜನಿ ಲೇಪಾಕ್ಷ, ಶಂಭು, ಶಿವು, ಬಸಮ್ಮ, ಬಸಣ್ಣ, ಸತೀಶ್ ಆಚಾರ್ , ವೀರೇಶ್ , ಕಿರಣ್ , ತಿಪ್ಪೇಸ್ವಾಮಿ, ಕವಿತಾ, ಶಿಲ್ಪ, ಯಶೋಧ ಇದ್ದರು.
ಫೋಟೊ ಕ್ಯಾಪ್ಷನ್ /23ಸಿಟಿಡಿ34
ಚಿತ್ರದುರ್ಗ ಜಿಲ್ಲಾಬಿಜೆಪಿ ಕಚೇರಿಯಲ್ಲಿಆಯೋಜಿಸಿದ್ದ ಭಾರತೀಯ ಜನಸಂಘದ ಸಂಸ್ಥಾಪಕ ಡಾ.ಶ್ಯಾಮ್ ಪ್ರಸಾದ ಮುಖರ್ಜಿ ಅವರ ಬಲಿದಾನ ದಿನಾಚರಣೆಯಲ್ಲಿಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.