ಪಡಿತರ ಚೀಟಿಗೂ ಬಿಜೆಪಿ ಕತ್ತರಿ: ಶಂಭುಶೆಟ್ಟಿ ಆರೋಪ ಪಡಿತರ ಚೀಟಿಗೂ ಬಿಜೆಪಿ ಕತ್ತರಿ: ಶಂಭುಶೆಟ್ಟಿ ಆರೋಪ

Contributed byhmanjunat54@gmail.com|Vijaya Karnataka
bjps axe shambhu shettys allegations on ration cards
ವಿಕ ಸುದ್ದಿಲೋಕ ಕಾರವಾರ

ಪಶ್ಚಿಮ ಬಂಗಾಳದಲ್ಲಿಚುನಾವಣಾ ಪೂರ್ವ ನಡೆದ ಮತದಾರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್ ಐಆರ್ )ಯಲ್ಲಿಮತದಾನದ ಹಕ್ಕು ಕಳಕೊಂಡ ಲಕ್ಷಾಂತರ ನಾಗರಿಕರು ಈಗ ತಮ್ಮ ಪಡಿತರ ಚೀಟಿಯನ್ನೂ ಕಳೆದುಕೊಳ್ಳುವಂತಾಗಿದೆ ಎಂದು ಕೆಪಿಸಿಸಿ ಜಿಲ್ಲಾವಕ್ತಾರ ಶಂಭು ಶೆಟ್ಟಿ ಆರೋಪಿಸಿದ್ದಾರೆ.
ನಾಗರಿಕರು ತಮಗೆ ನ್ಯಾಯ ಬೇಕು ಎಂದು ಸುಪ್ರೀಂ ಕೋರ್ಟ್ ಕದ ತಟ್ಟಿದ್ದು, ನ್ಯಾಯಾಲಯವು ರಾಜ್ಯ ಹೈಕೋರ್ಟ್ ಮೊರೆ ಹೋಗುವಂತೆ ಅರ್ಜಿದಾರರಿಗೆ ತಿಳಿಸಿದೆ. ಪಶ್ಚಿಮ ಬಂಗಾಳದಲ್ಲಿಎಸ್ ಐಆರ್ ನಿಂದ ಮತದಾನದ ಹಕ್ಕು ಕಳಕೊಂಡವರು 90 ಲಕ್ಷ್ಯ ಮಂದಿ. ಚುನಾವಣೆಯಲ್ಲಿಬಿಜೆಪಿಯು ಟಿಎಂಸಿಗಿಂತ 33 ಲಕ್ಷ ಹೆಚ್ಚು ಮತ ಪಡೆದು ಅಧಿಕಾರಕ್ಕೆ ಬಂದಿದೆ. ಬಿಜೆಪಿಗೆ ಎಸ್ ಐಆರ್ ಮೇಲೆ ಯಾಕಿಷ್ಟು ಮೋಹ ಎಂದು ಇದರಿಂದಲೇ ಗೊತ್ತಾಗುತ್ತದೆ ಎಂದು ಟೀಕಿಸಿದ್ದಾರೆ.

ಪ್ರತಿಯೊಬ್ಬ ಮತದಾನೂ ನಮ್ಮ ರಾಜ್ಯದಲ್ಲಿನಡೆಯಲಿರುವ ಎಸ್ ಐಆರ್ ಪ್ರಕ್ರಿಯೆಯಲ್ಲಿತಮ್ಮ ಮತವನ್ನು ರಕ್ಷಿಸಿಕೊಳ್ಳುವ ಜತೆಗೆ ಇತರರ ಮತಗಳನ್ನೂ ರಕ್ಷಿಸಲು ಪರಸ್ಪರ ಒಬ್ಬರಿಗೊಬ್ಬರು ಸಹಾಯ ಮಾಡಬೇಕು ಎಂದು ಆಗ್ರಹಿಸಿದ್ದಾರೆ.