ಕಾಸರಗೋಡು ಜಿಲ್ಲೆಯಲ್ಲಿಖಾಸಗಿ ಬಸ್ ಸೇವೆ ಸ್ಥಗಿತಕ್ಕೆ ನಿರ್ಧಾರ ?

Contributed bycrastalp19@gmail.com|Vijaya Karnataka
private bus services in kasaragod set to halt due to womens free travel and fuel prices impact
ವಿಕ ಸುದ್ದಿಲೋಕ ಕಾಸರಗೋಡು

ಕೆಎಸ್ ಆರ್ ಟಿಸಿ ಬಸ್ ಗಳಲ್ಲಿಮಹಿಳೆಯರಿಗಾಗಿ ಪ್ರಿಯದರ್ಶಿನಿ ಉಚಿತ ಪ್ರಯಾಣ ಆರಂಭ ಹಾಗೂ ಡೀಸೆಲ್ ಬೆಲೆ ಹೆಚ್ಚಳ ಕಾರಣದಿಂದ ಕಾಸರಗೋಡು ಜಿಲ್ಲೆಯಲ್ಲಿಖಾಸಗಿ ಬಸ್ ಗಳು ಸೇವೆಯನ್ನು ಸ್ಥಗಿತಗೊಳಿಸಲು ಮುಂದಾಗಿವೆ.
ಕಾಸರಗೋಡು ಹಾಗೂ ಹೊಸದುರ್ಗ ತಾಲೂಕುಗಳಲ್ಲಿಈಗಾಗಲೇ 15 ಬಸ್ ಗಳು ಸೇವೆ ನಿಲ್ಲಿಸಲು ಆರ್ ಟಿಒ ಕಚೇರಿಯಲ್ಲಿಜಿ-ಫಾಮ್ ರ್ (ರಸ್ತೆ ತೆರಿಗೆ ವಿನಾಯಿತಿ ಪಡೆಯಲು ಸಾರಿಗೆ ಇಲಾಖೆಗೆ ಸಲ್ಲಿಸುವ ಅರ್ಜಿ) ನೀಡಿವೆ. ಜೂನ್ ಅಂತ್ಯಕ್ಕೆ ಇನ್ನಷ್ಟು ಬಸ್ ಗಳು ಜಿ-ಫಾಮ್ ರ್ ನೀಡಲಿದ್ದು, ಪರಿಣಾಮ ಜು.1ರಿಂದ ಜಿಲ್ಲೆಯ 200ರಷ್ಟು ಖಾಸಗಿ ಬಸ್ ಗಳ ಸೇವೆಗಳು ನಿಲ್ಲಲಿವೆ. ಜಿ-ಫಾಮ್ ರ್ ನ್ನು ಭರ್ತಿಗೊಳಿಸಿ ಆರ್ ಟಿಒಗೆ ನೀಡಿದರೆ ಬಸ್ ಬಳಸದ ದಿನಗಳಿಗೆ ತೆರಿಗೆ ಪಾವತಿಸಬೇಕಾಗಿಲ್ಲ.

ಪಾವತಿಸಿದ ತ್ರೈಮಾಸಿಕ ತೆರಿಗೆಯ ಕಾಲಾವಧಿಯು ಜೂನ್ 30ರಂದು ಕೊನೆಗೊಳ್ಳುತ್ತಿದೆ. ಇದರಿಂದ ಜುಲೈ 1ರ ಬಳಿಕ ಸರ್ವಿಸ್ ನಿಲ್ಲಿಸಲು ಈ ಬಸ್ ಮಾಲೀಕರು ತೀರ್ಮಾನಿಸಿದ್ದಾರೆ. ಮೋಟಾರು ವಾಹನ ಇಲಾಖೆಯ ನಿಯಮ ಪ್ರಕಾರ ರಸ್ತೆ ತೆರಿಗೆಯಿಂದ ವಿನಾಯಿತಿ ಲಭಿಸಲು ಖಾಸಗಿ ಬಸ್ ಗಳು ಜಿ- ಫಾಮ್ ರ್ ಸಲ್ಲಿಸಿವೆ. ಆರ್ಥಿಕ ನಷ್ಟ ಹಾಗೂ ಇತರ ಕಾರಣಗಳಿಂದ ನಿರ್ದಿಷ್ಟ ಕಾಲಾವಧಿಗೆ ಸರ್ವಿಸ್ ನ್ನು ಸಂಪೂರ್ಣವಾಗಿ ನಿಲ್ಲಿಸುವಂತಾಗಲಿದ್ದು, ಬಸ್ ಮಾಲೀಕರು ಈ ದಾರಿಯನ್ನು ಆಯ್ಕೆ ಮಾಡಿದ್ದಾರೆ. ಮೊದಲೇ ನಷ್ಟದಲ್ಲಿದ್ದ ಖಾಸಗಿ ಬಸ್ ಗಳು, ಪ್ರಿಯದರ್ಶಿನಿ ಉಚಿತ ಪ್ರಯಾಣ ಆರಂಭ, ಡೀಸೆಲ್ ಬೆಲೆ ಏರಿಕೆ ಬಳಿಕ ಇನ್ನಷ್ಟು ನಷ್ಟದತ್ತ ವಾಲಿರುವುದಾಗಿ ಕೇರಳ ರಾಜ್ಯ ಖಾಸಗಿ ಬಸ್ ಆಪರೇಟರ್ ಗಳ ಫೆಡರೇಶನ್ ಜಿಲ್ಲಾಅಧ್ಯಕ್ಷ ಕೆ.ಗಿರೀಶ್ ಹೇಳಿದ್ದಾರೆ.

ಅಂತಾರಾಜ್ಯ ಸರ್ವಿಸ್ ಗಳಲ್ಲೂಉಚಿತ ಪ್ರಯಾಣ ಮಂಜೂರುಗೊಳಿಸುವುದು ಖಾಸಗಿ ವಲಯವನ್ನು ಗಂಭೀರವಾಗಿ ಬಾಧಿಸಿದೆ. ಇದರಿಂದ ಜಿ-ಫಾಮ್ ರ್ ನೀಡಿ ಸರ್ವಿಸ್ ನೀಡಲು ತೀರ್ಮಾನಿಸಲಾಗಿದೆ. ಕಾಸರಗೋಡು ಜಿಲ್ಲೆಯಲ್ಲಿ480 ಖಾಸಗಿ ಬಸ್ ಗಳಿವೆ. ಮುಂದಿನ ತ್ರೈಮಾಸಿಕ ತೆರಿಗೆ ಪಾವತಿಸಬೇಕಾದ ಅಂತಿಮ ದಿನವಾದ ಜೂನ್ 30ರ ವರೆಗೆ ಜಿ- ಫಾಮ್ ರ್ ನೀಡಲು ಸಮಯವಕಾಶ ಇದೆ. ಇದರಿಂದ ಮುಂದಿನ ದಿನಗಳಲ್ಲಿ200ರಷ್ಟು ಬಸ್ ಗಳು ಜಿ-ಫಾಮ್ ರ್ ನೀಡಲು ಸಿದ್ಧತೆ ನಡೆಸುತ್ತಿವೆ ಎಂದು ಕೆ.ಗಿರೀಶ್ ಹೇಳಿದ್ದಾರೆ.

ಕಣ್ಣೂರು- ಕಾಸರಗೋಡು ರೂಟ್ ನಲ್ಲಿಸರ್ವಿಸ್ ನಡೆಸುವ ಬಸ್ ಗಳು ಈಗ ಬೆಳಗ್ಗೆ ಬಂದು ಸಂಜೆ ಹಿಂತಿರುಗುತ್ತವೆ. ನಷ್ಟದ ಕಾರಣ ಕೆಲವೊಂದು ಸರ್ವಿಸ್ ಗಳನ್ನು ನಿಲ್ಲಿಸಲಾಗಿದೆ. ಈ ಹಿಂದೆ 4 ಸಾವಿರ ರೂ.ನಷ್ಟು ಲಾಭ ಇದ್ದ ಸರ್ವಿಸ್ ಗಳಿಗೆ ಈಗ 100ರಿಂದ ನೂರೈವತ್ತರಷ್ಟು ರೂ. ನಷ್ಟವಾಗುತ್ತದೆ ಎಂದು ಅವರು ಹೇಳಿದ್ದಾರೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿಕಚ್ಚಾ ತೈಲ ಬೆಲೆ ಕುಸಿದರೂ ಇಲ್ಲಿಇಂಧನ ಬೆಲೆ ಕಡಿಮೆ ಮಾಡಿಲ್ಲ. ಮಹಿಳೆಯರಿಗೆ ಉಚಿತ ಪ್ರಯಾಣ ಮಂಜೂರುಗೊಳಿಸುವ ವಿಷಯದಲ್ಲಿವಿರೋಧವಿಲ್ಲ. ಆದರೆ ಖಾಸಗಿ ಬಸ್ ಉದ್ಯಮವನ್ನು ಸಂರಕ್ಷಿಸಬೇಕು ಎಂದು ಬಸ್ ಮಾಲೀಕರು ಆಗ್ರಹಿಸಿದ್ದಾರೆ.

ಚಿತ್ರ: 24ಕೆಎಸ್ ಎಲ್ ಪ್ರೆತ್ರೖವೆಟ್