*ವಿಜಯಶಾಲೆಯಲ್ಲಿಅಂತಾರಾಷ್ಟ್ರೀಯ ಯೋಗ ದಿನಾಚರಣೆವಿಕ ಸುದ್ದಿಲೋಕ ಹಾಸನ
ಆರೋಗ್ಯವೇ ನಿಜವಾದ ಸಂಪತ್ತು. ಯೋಗವನ್ನು ಜೀವನದ ಭಾಗವಾಗಿಸಿಕೊಂಡರೆ ದೈಹಿಕ ಆರೋಗ್ಯ, ಮಾನಸಿಕ ಶಾಂತಿ ಹಾಗೂ ಸಂತೋಷವನ್ನು ಪಡೆಯಬಹುದು ಎಂದು ವಿಜಯ ಶಾಲೆ ಸಂಸ್ಥಾಪಕ ನಿರ್ದೇಶಕಿ ತಾರ ಎಸ್ .ಸ್ವಾಮಿ ತಿಳಿಸಿದರು.
ನಗರದ ವಿಜಯಶಾಲೆಯಲ್ಲಿನಡೆದ 12ನೇ ಅಂತಾರಾಷ್ಟ್ರೀಯ ಯೋಗ ದಿನದ ಕಾರ ್ಯಕ್ರಮದಲ್ಲಿಮಾತನಾಡಿ,‘‘ಇಂದಿನ ವೇಗದ ಜೀವನಶೈಲಿಯಲ್ಲಿಒತ್ತಡ, ಆತಂಕ ಹಾಗೂ ಅನಾರೋಗ್ಯದ ಸಮಸ್ಯೆಗಳು ಹೆಚ್ಚುತ್ತಿದೆ. ಯೋಗ ಮತ್ತು ಪ್ರಾಣಾಯಾಮಗಳು ಆರೋಗ್ಯಕರ ಜೀವನಕ್ಕೆ ಉತ್ತಮ ಪರಿಹಾರಗಳಾಗಿವೆ,’’ ಎಂದು ಹೇಳಿದರು.
‘‘ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರು ಯೋಗವನ್ನು ತಮ್ಮ ದಿನಚರಿಯ ಅವಿಭಾಜ್ಯ ಅಂಗವನ್ನಾಗಿ ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ಜತೆಗೆ ಪ್ರತಿದಿನ ಯೋಗಾಭ್ಯಾಸ ಮಾಡುವ ಮೂಲಕ ಏಕಾಗ್ರತೆ, ಆತ್ಮವಿಶ್ವಾಸ ಹಾಗೂ ಮಾನಸಿಕ ಸ್ಥೈರ್ಯವನ್ನು ಬೆಳೆಸಿಕೊಳ್ಳಬೇಕು,’’ ಎಂದರು.
‘‘ಪೋಷಕರು ಮಕ್ಕಳಿಗೆ ಆರೋಗ್ಯಕರ ಜೀವನ ಶೈಲಿಯ ಮಹತ್ವವನ್ನು ತಿಳಿಸಿ ಯೋಗಾಭ್ಯಾಸಕ್ಕೆ ಪ್ರೋತ್ಸಾಹ ನೀಡಬೇಕು. ಪರಿಸರ ಮಾಲಿನ್ಯ ಜತೆಗೆ ನಾವು ಸೇವಿಸುವ ಆಹಾರ ಪದಾರ್ಥಗಳಲ್ಲಿವಿವಿಧ ರೀತಿಯ ಕಲಬೆರಕೆಗಳು ಕಂಡುಬರುತ್ತವೆ. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರತಿದಿನ ಒಂದು ತಾಸು ಯೋಗ, ಪ್ರಾಣಾಯಾಮ, ಧ್ಯಾನ ಮಾಡುವುದು ಅಗತ್ಯವಾಗಿದೆ,’’ ಎಂದು ತಿಳಿಸಿದರು.
ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಸುಬ್ಬಸ್ವಾಮಿ ವಿಶ್ವ ಯೋಗ ದಿನದ ಶುಭಾಶಯ ತಿಳಿಸಿದರು.
ಅಭ್ಯಾಗತರನ್ನು ಕಾರ ್ಯಕ್ರಮದ ವೇದಿಕೆಗೆ ಮಕ್ಕಳು ಸೂರ್ಯ ನಮಸ್ಕಾರದ ಮೂಲಕ ಬರ ಮಾಡಿಕೊಂಡಿದ್ದು ವಿಶೇಷವಾಗಿತ್ತು. ವಿಶ್ವ ಯೋಗ ದಿನದ ಪ್ರಾತ್ಯಕ್ಷಿಕೆಯಲ್ಲಿಆರನೇ ತರಗತಿಯ ವಿದ್ಯಾರ್ಥಿಗಳೊಂದಿಗೆ ಶಾಲಾ ಶೈಕ್ಷಣಿಕ ಮುಖ್ಯಸ್ಥೆ ಡಾ.ಶ್ರೀಲಕ್ಷ್ಮಿ ಎಸ್ . ಯೋಗ ಪ್ರಾತ್ಯಕ್ಷಿಕೆಯಲ್ಲಿಭಾಗವಹಿಸಿ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ, ಪೋಷಕರಿಗೆ ಸ್ಫೂರ್ತಿಯಾದರು.
ಸಂಪೂರ್ಣ ಕಾರ್ಯಕ್ರಮವನ್ನು ಆರನೇ ತರಗತಿಯ ವಿದ್ಯಾರ್ಥಿಗಳು ನಡೆಸಿಕೊಟ್ಟರು.
ಕಾರ ್ಯಕ್ರಮದಲ್ಲಿಪ್ರಾಂಶುಪಾಲ ನಂದೀಶ ಕೆ.ಎಸ್ ., ಶಿಕ್ಷಕರು, ಪೋಷಕರು, ಶಾಲಾ ಸಿಬ್ಬಂದಿ ಹಾಜರಿದ್ದರು.
*ಫೋಟೊ ಇದೆ
ಹಾಸನ ನಗರದ ವಿಜಯ ಶಾಲೆಯಲ್ಲಿನಡೆದ 12ನೇ ಅಂತಾರಾಷ್ಟ್ರೀಯ ಯೋಗ ದಿನದ ಕಾರ ್ಯಕ್ರಮದಲ್ಲಿವಿದ್ಯಾರ್ಥಿಗಳು ಯೋಗ ಪ್ರದರ್ಶನ ಮಾಡಿದರು.