ಚಿಲ್ಲರೆ ಮಾರಾಟ ಕೇಂದ್ರಗಳಿಂದ ರಸಗೊಬ್ಬರ ಖರೀದಿಸಲು ನೆರವು

Contributed byahobalapathy.narayanappa@timesofindia.com|Vijaya Karnataka
new software for easy fertilizer purchase from retail outlets launching on june 25
ಜೂ.25ರಿಂದ ರಸಗೊಬ್ಬರ ಮಾರಾಟ ಅಪ್ಲಿಕೇಶನ್ ವ್ಯವಸ್ಥೆ ಜಾರಿ

ಚಿಲ್ಲರೆ ಮಾರಾಟ ಕೇಂದ್ರಗಳಿಂದ ರಸಗೊಬ್ಬರ ಖರೀದಿಸಲು ನೆರವು
---

ವಿಕ ಸುದ್ದಿಲೋಕ ಚಿತ್ರದುರ್ಗ

ಸುಲಭವಾಗಿ ರಸಗೊಬ್ಬರ ವಿತರಣೆ ಮಾಡುವ ನಿಟ್ಟಿನಲ್ಲಿಕೇಂದ್ರ ಸರಕಾರದಿಂದ ಅನುಷ್ಠಾನಗೊಳಿಸಲು ಉದ್ದೇಶಿಸಿರುವ ‘ಫರ್ಟಿಲೈಸರ್ ಸೇಲ್ಸ್ ಅಪ್ಲಿಕೇಶನ್ ಸಿಸ್ಟಮ್ ’ ತಂತ್ರಾಂಶ ಆಧಾರಿತ ರಸಗೊಬ್ಬರ ವಿತರಣಾ ವ್ಯವಸ್ಥೆಯು ಜೂ.25ರಿಂದ ಚಿತ್ರದುರ್ಗ ಜಿಲ್ಲೆಯಲ್ಲಿಪ್ರಾಯೋಗಿಕವಾಗಿ ಅನುಷ್ಠಾನಕ್ಕೆ ಬರಲಿದೆ ಎಂದು ಜಂಟಿ ಕೃಷಿ ನಿರ್ದೇಶಕ ಬಿ.ಮಂಜುನಾಥ್ ತಿಳಿಸಿದ್ದಾರೆ.

ರಾಷ್ಟ್ರಮಟ್ಟದ ‘ಫ್ರೇಮ್ ವರ್ಕ್ ಫಾರ್ ಫರ್ಟಿಲೈಸರ್ ಸೇಲ್ ’ ಯೋಜನೆಯಡಿ ಈ ಹೊಸ ಡಿಜಿಟಲ್ ವ್ಯವಸ್ಥೆ ತರಲಾಗುತ್ತಿದ್ದು, ರೈತರು ತಮಗೆ ಅಗತ್ಯವಿರುವ ರಸಗೊಬ್ಬರವನ್ನು ಎರಡು ದಿನ ಮುಂಗಡವಾಗಿ ತಂತ್ರಾಂಶದ ಮೂಲಕ ಕಾಯ್ದಿರಿಸಬಹುದು. ಇದರಿಂದ ಅಗತ್ಯ ಪ್ರಮಾಣದ ದಾಸ್ತಾನು ಮುಂಚಿತವಾಗಿಯೇ ವ್ಯವಸ್ಥೆಗೊಳ್ಳುತ್ತದೆ. ರೈತರಿಗೆ ಸುಗಮ ಹಾಗೂ ನಿರೀಕ್ಷಿತ ಸೇವೆ ಸಕಾಲದಲ್ಲಿದೊರೆಯುತ್ತದೆ. ರಸಗೊಬ್ಬರ ಮಾರಾಟ ಚೌಕಟ್ಟು ರೈತರ ಸ್ನೇಹಿ ಮತ್ತು ಸರಳ ವಿಧಾನವನ್ನು ಪರಿಚಯಿಸುತ್ತದೆ ಎಂದಿದ್ದಾರೆ.

ಜಿಲ್ಲೆಯಲ್ಲಿಅಧಿಕೃತವಾಗಿ ರಸಗೊಬ್ಬರ ಪರವಾನಗಿ ಹೊಂದಿರುವ 434 ಖಾಸಗಿ ರಸಗೊಬ್ಬರ ಮಾರಾಟಗಾರರು, 67 ಸಹಕಾರ ಸಂಘಗಳು ಹಾಗೂ 27 ರೈತ ಉತ್ಪಾದಕ ಸಂಸ್ಥೆಗಳ ಸಿಬ್ಬಂದಿಗೆ ಈಗಾಗಲೇ ಈ ತಂತ್ರಾಂಶದ ಕುರಿತು ತರಬೇತಿ ನೀಡಲಾಗಿದ್ದು, ರೈತರು ರಸಗೊಬ್ಬರ ಮಾರಾಟಗಾರರ ಸೇವೆಯನ್ನು ತಂತ್ರಾಂಶದ ಮೂಲಕ ರಸಗೊಬ್ಬರ ಮುಂಗಡವಾಗಿ ಕಾಯ್ದಿರಿಸಲು ಉಪಯೋಗಿಸಿಕೊಳ್ಳಬಹುದಾಗಿದೆ. ಇದಲ್ಲದೇ, ಕೃಷಿ ಇಲಾಖೆಯ ವಿಸ್ತರಣಾಧಿಕಾರಿಗಳು, ಸಾಮಾನ್ಯ ಸೇವಾ ಕೇಂದ್ರ ಮತ್ತು ಕೃಷಿ ಸಖಿಯರ ಮೂಲಕವು ಸಹ ರೈತರು ಮುಂಗಡವಾಗಿ ರಸಗೊಬ್ಬರಗಳನ್ನು ತಂತ್ರಾಂಶದ ಮೂಲಕ ಕಾಯ್ದಿರಿಸಿಕೊಳ್ಳಬಹುದು ಮಾಹಿತಿ ನೀಡಿದ್ದಾರೆ.

ರೈತರು ತಮ್ಮ ಭೂ ಹಿಡುವಳಿಗಳನ್ನು ಫ್ರೂಟ್ಸ್ ತಂತ್ರಾಂಶದಲ್ಲಿಸೇರಿಸಲು ಮತ್ತು ಈಗಾಗಲೇ ಎಫ್ ಐಡಿ ಹೊಂದಿರುವ ರೈತರು ಕೇಂದ್ರಿಯ ಎಫ್ ಐಡಿಯೊಂದಿಗೆ ಸಂಯೋಜನೆ ಮಾಡಿಸಲು ಹತ್ತಿರದ ರೈತ ಸಂಪರ್ಕ ಕೇಂದ್ರ, ಕಂದಾಯ ಇಲಾಖೆ, ತೋಟಗಾರಿಕೆ ಇಲಾಖೆ ಮತ್ತು ರೇಷ್ಮೆ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ ಪ್ರಕ್ರಿಯೆ ಪೂರ್ಣಗೊಳಿಸಿಕೊಳ್ಳಬೇಕು ಎಂದು ಕೋರಿದ್ದಾರೆ.

**

ಬಾಕ್ಸ್ /

4,78,730 ಭೂ ಹಿಡುವಳಿ ದಾಖಲು

ರಸಗೊಬ್ಬರ ಕಾಯ್ದಿರಿಸಲು ರೈತರು ಆಧಾರ್ ಜೋಡಣೆ ಹೊಂದಿರುವ ‘ಕೇಂದ್ರೀಯ ಎಫ್ ಐಡಿ’ ಹೊಂದಿರುವುದು ಕಡ್ಡಾಯವಾಗಿದೆ. ಜಿಲ್ಲೆಯಲ್ಲಿಕೇಂದ್ರಿಯ ಎಫ್ ಐಡಿ ಹೊಂದಿರುವ ಮತ್ತು ಎಫ್ ಐಡಿಯೊಂದಿಗೆ ಸರ್ವೆ ನಂಬರ್ ಸೇರಿಸಲು ಬಾಕಿ ಇರುವ ರೈತರ ಭೂ ಹಿಡುವಳಿ ವಿವರ ಇಂತಿದೆ. ಮೊಳಕಾಲ್ಮುರು ತಾಲೂಕಿನಲ್ಲಿ18,723, ಚಳ್ಳಕೆರೆಯಲ್ಲಿ50,277, ಚಿತ್ರದುರ್ಗದಲ್ಲಿ49,882, ಹೊಳಲ್ಕೆರೆಯಲ್ಲಿ36,235, ಹೊಸದುರ್ಗದಲ್ಲಿ36,134 ಮತ್ತು ಹಿರಿಯೂರಿನಲ್ಲಿ39,255 ಸೇರಿದಂತೆ ಜಿಲ್ಲಾದ್ಯಂತ ಒಟ್ಟು 2,30,506 ಕೇಂದ್ರೀಯ ಎಫ್ ಐಡಿಗಳು ಸೃಜನೆಯಾಗಿವೆ. ಆದರೆ ಇನ್ನು ಕೂಡ ಜಿಲ್ಲಾದ್ಯಂತ 30,346 ಎಫ್ .ಐ.ಡಿಗಳು ಸಿಂಕ್ ಆಗಲು ಬಾಕಿ ಇವೆ. ಹಾಗೆಯೇ ಫ್ರೂಟ್ಸ್ ತಂತ್ರಾಂಶದಲ್ಲಿಜಿಲ್ಲೆಯ ಒಟ್ಟು 4,78,730 ಭೂ ಹಿಡುವಳಿಗಳು ದಾಖಲಾಗಿದ್ದು, ಇನ್ನೂ 1,58,721 ಹಿಡುವಳಿಗಳನ್ನು ಸೇರಿಸುವುದು ಬಾಕಿ ಉಳಿದಿದೆ.

**

ಕಾರ್ಯಕ್ರಮಕ್ಕೆ ಚಾಲನೆ

ರಾಜ್ಯದಲ್ಲಿಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳನ್ನು ಪ್ರಾಯೋಗಿಕ ಜಾರಿಗೆ ಆಯ್ಕೆ ಮಾಡಿಕೊಳ್ಳಲಾಗಿದೆ. ಜೂ.25ರ ಮಧ್ಯಾಹ್ನ 3ಕ್ಕೆ ಚಿತ್ರದುರ್ಗ ನಗರದ ಟಿಪಿಎಂಎಸ್ ಆವರಣದಲ್ಲಿಜಿಲ್ಲಾಧಿಕಾರಿ ಟಿ.ವೆಂಕಟೇಶ್ , ಜಿಪಂ ಸಿಇಒ ಡಾ.ಎಸ್ .ಆಕಾಶ್ ಅವರ ಸಮ್ಮುಖದಲ್ಲಿ‘ಫರ್ಟಿಲೈಸರ್ ಸೇಲ್ಸ್ ಅಪ್ಲಿಕೇಶನ್ ಸಿಸ್ಟಮ್ ’ ತಂತ್ರಾಂಶದ ಮೂಲಕ ರಸಗೊಬ್ಬರ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ.

**

ಫೊಟೋ ಕ್ಯಾಪ್ಷನ್ /24ಸಿಟಿಡಿ40/ ಜಂಟಿ ಕೃಷಿ ನಿರ್ದೇಶಕ ಬಿ.ಮಂಜುನಾಥ್

**