ಹಿರೇಕೆರೂರು: ಸ್ಪರ್ಧಾತ್ಮಕ ಯುಗದಲ್ಲಿಗ್ರಾಮೀಣ ಮಕ್ಕಳು ಡಿಜಿಟಲ್ ಶಿಕ್ಷಣದಿಂದ ವಂಚಿತರಾಗಬಾರದು ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ಹೇಳಿದರು.
ತಾಲೂಕಿನ ಕಳಗೊಂಡ ಶಾಲೆಯಲ್ಲಿ‘ ಸ್ಮಾರ್ಟ್ ಕ್ಲಾಸ್ ಪ್ರಾಜೆಕ್ಟರ್ ’ ಲೋಕಾರ್ಪಣೆಗೊಳಿಸಿ ಮಾತನಾಡಿದರು. ಗ್ರಾಮೀಣ ವಿದ್ಯಾರ್ಥಿಗಳಿಗೆ ತಂತ್ರಜ್ಞಾನದ ಗುಣಮಟ್ಟದ ಶಿಕ್ಷಣ ಒದಗಿಸುವುದು ಅಗತ್ಯವಾಗಿದೆ. ಇದು ನಗರ-ಗ್ರಾಮೀಣ ಪ್ರದೇಶಗಳ ನಡುವಿನ ಶೈಕ್ಷಣಿಕ ಅಂತರ ಕಡಿಮೆ ಮಾಡುತ್ತದೆ ಎಂದರು.ಎಂಸಿಎಫ್ ಕಂಪನಿ ಶಾಲೆಗಳಿಗೆ ಅತ್ಯಾಧುನಿಕ ಸ್ಮಾರ್ಟ್ ಕ್ಲಾಸ್ ಪ್ರಾಜೆಕ್ಟರ್ ಗಳನ್ನು ಕೊಡುಗೆಯಾಗಿ ನೀಡಿತು. ಎಸ್ ಡಿಎಂಸಿ ಅಧ್ಯಕ್ಷ ಮಹಾದೇವಪ್ಪ ಯಡಚಿ, ಕೆಸಿಸಿ ಬ್ಯಾಂಕ್ ನಿರ್ದೇಶಕ ರವಿಶಂಕರ ಬಾಳಿಕಾಯಿ, ಮುಖ್ಯ ಶಿಕ್ಷಕ ಆರ್ . ಎಚ್ . ಹೂವಿನಮಡ, ಮಾಲಾತೇಶ ಮೂದಿಗೌಡ್ರ ಸಿಬ್ಬಂದಿ, ಗ್ರಾಮಸ್ಥರು ಇನ್ನಿತರರಿದ್ದರು.
24 ಹೆಚ್ ಕೆಆರ್ ಬಿ ಸಿ ಪಾಟೀಲ
ಹಿರೇಕೆರೂರ ತಾಲೂಕಿನ ಕಳಗೊಂಡ ಸರಕಾರಿ ಶಾಲೆಯಲ್ಲಿಸ್ಮಾರ್ಟ್ ಕ್ಲಾಸ್ ಪ್ರಾಜೆಕ್ಟರ್ ಗಳನ್ನು ಮಾಜಿ ಸಚಿವ ಬಿ.ಸಿ.ಪಾಟೀಲ ಲೋಕಾರ್ಪಣೆಗೊಳಿಸಿದರು.