Awareness Of The Art Of Rock Stacking Rocks And Environmental Conservation
ಪೇಜ್ 8 ಲೀಡ್
Contributed by: DHEERAJ K|Vijaya Karnataka•
ಕಲ್ಲಿನ ಗೋಪುರ
ಇಂಟ್ರೋನೀವು ಎಂದಾದರೂ ನದಿ ತೀರದಲ್ಲೋ, ಸಮುದ್ರದ ದಂಡೆಯಲ್ಲೋ ಅಥವಾ ಟ್ರೆಕ್ಕಿಂಗ್ ಮಾಡುವಾಗ ಬೆಟ್ಟದ ಮೇಲೋ ಕಲ್ಲುಗಳನ್ನು ಒಂದರ ಮೇಲೊಂದು ಆಕರ್ಷಕವಾಗಿ ಜೋಡಿಸಿರುವುದನ್ನು ನೋಡಿರುತ್ತೀರಿ. ಇದನ್ನು ರಾಕ್ ಸ್ಟ್ಯಾಕಿಂಗ್ ಅಥವಾ ರಾಕ್ ಬ್ಯಾಲೆನ್ಸಿಂಗ್ ಎಂದು ಕರೆಯಲಾಗುತ್ತದೆ. ಕೇವಲ ಗುರುತ್ವಾಕರ್ಷಣೆಯ ಬಲದಿಂದ ಕಲ್ಲುಗಳನ್ನು ಒಂದರ ಮೇಲೊಂದು ನಿಲ್ಲಿಸುವ ಈ ಕಲೆ ಇತ್ತೀಚಿನ ದಿನಗಳಲ್ಲಿಜಗತ್ತಿನಾದ್ಯಂತ ಭಾರಿ ಟ್ರೆಂಡ್ ಸೃಷ್ಟಿಸಿದೆ. ಈ ರಾಕ್ ಸ್ಟ್ಯಾಕಿಂಗ್ ಕುರಿತ ಆಸಕ್ತಿದಾಯಕ ಸಂಗತಿಗಳು ಇಲ್ಲಿವೆ.
= = =
ಮಾನವ ಇತಿಹಾಸದಲ್ಲಿಕಲ್ಲುಗಳನ್ನು ಜೋಡಿಸುವ ಅಭ್ಯಾಸವು ಸಾವಿರಾರು ವರ್ಷಗಳಷ್ಟು ಹಳೆಯದಾಗಿದೆ. ಪ್ರಾಚೀನ ಕಾಲದಲ್ಲಿಕಾಡುಗಳಲ್ಲಿಅಥವಾ ಹಿಮಾವೃತ ಪ್ರದೇಶಗಳಲ್ಲಿದಾರಿ ತಪ್ಪದಂತೆ ಮಾರ್ಗಸೂಚಿಯಾಗಿ ಕಲ್ಲಿನ ಗೋಪುರಗಳನ್ನು ನಿರ್ಮಿಸಲಾಗುತ್ತಿತ್ತು. ಇವುಗಳನ್ನು ಕ್ಯಾನ್ಸ್ (ಇaಜ್ಟ್ಞಿs) ಎಂದು ಕರೆಯುತ್ತಾರೆ. ಕ್ಯಾನ್ಸ್ ಪದ ಸ್ಕಾಟಿಷ್ ಭಾಷೆಯ ‘ಗ್ಯಾಲಿಕ್ ’ ಪದದಿಂದ ಬಂದಿದೆ. ಇದರರ್ಥ ಕಲ್ಲುಗಳ ರಾಶಿ. ಉತ್ತರ ಅಮೆರಿಕದ ಆರ್ಕ್ಟಿಕ್ ಪ್ರದೇಶದ ಇನಿಯೂಟ್ ಬುಡಕಟ್ಟು ಜನರು ಮನುಷ್ಯನ ಆಕಾರದಲ್ಲಿಕಲ್ಲುಗಳನ್ನು ಜೋಡಿಸುತ್ತಿದ್ದರು. ಇವುಗಳನ್ನು ಬೇಟೆಯಾಡುವ ಜಾಗ ಗುರುತಿಸಲು ಮತ್ತು ಅಪಾಯದ ಮುನ್ಸೂಚನೆ ನೀಡಲು ಬಳಸಲಾಗುತ್ತಿತ್ತು. ಅನೇಕ ಸಂಸ್ಕೃತಿಗಳಲ್ಲಿಸತ್ತವರ ನೆನಪಿಗಾಗಿ ಅಥವಾ ಪೂಜಾ ಸ್ಥಳಗಳ ಸಂಕೇತವಾಗಿ ಕಲ್ಲುಗಳನ್ನು ಜೋಡಿಸುವ ಸಂಪ್ರದಾಯ ಇಂದಿಗೂ ಇದೆ.
ಕಲ್ಲುಗಳನ್ನು ಬ್ಯಾಲೆಸ್ಸ್ ಮಾಡುವುದು ಅಷ್ಟು ಸುಲಭವಲ್ಲ. ಅದಕ್ಕೆ ಅದ್ಭುತವಾದ ತಾಳ್ಮೆ ಮತ್ತು ಏಕಾಗ್ರತೆ ಬೇಕು. ರಾಕ್ ಬ್ಯಾಲೆನ್ಸಿಂಗ್ ಕಲೆಯು ಜೆನ್ ಬುದ್ಧಿಸಂ ತತ್ವಕ್ಕೆ ಹತ್ತಿರವಾಗಿದೆ. ಕಲ್ಲುಗಳನ್ನು ಜೋಡಿಸುವಾಗ ಮನಸ್ಸು ಸಂಪೂರ್ಣವಾಗಿ ಪ್ರಸ್ತುತ ಕ್ಷಣದಲ್ಲಿಲೀನವಾಗುತ್ತದೆ. ಇದು ಒತ್ತಡವನ್ನು ಕಡಿಮೆ ಮಾಡಿ, ಮನಸ್ಸಿಗೆ ನೆಮ್ಮದಿ ನೀಡುವ ಒಂದು ಥೆರಪಿಯಂತೆ ಕೆಲಸ ಮಾಡುತ್ತದೆ ಎನ್ನುತ್ತಾರೆ ತಜ್ಞರು.
ಇತ್ತೀಚಿನ ದಿನಗಳಲ್ಲಿಬೆಟ್ಟ ಹತ್ತುವವರು ಅಥವಾ ಚಾರಣ ಮಾಡುವವರು ದಾರಿಯಲ್ಲಿಸಿಗುವ ಕಲ್ಲುಗಳನ್ನು ಒಂದರ ಮೇಲೊಂದು ಜೋಡಿಸಿ ಗೋಪುರದಂತೆ ಮಾಡುವುದು ಒಂದು ದೊಡ್ಡ ಟ್ರೆಂಡ್ ಆಗಿದೆ. ಆದರೆ, ವಿಜ್ಞಾನಿಗಳು ಮತ್ತು ಪರಿಸರ ಪ್ರೇಮಿಗಳ ಪ್ರಕಾರ ಈ ರೀತಿ ಮಾಡುವುದು ಪ್ರಕೃತಿಗೆ ತೀವ್ರ ಹಾನಿ ಉಂಟುಮಾಡುತ್ತದೆ. ಅಷ್ಟೇ ಅಲ್ಲ, ದಾರಿಯಲ್ಲಿಕಾಣುವ ಇಂತಹ ಕಲ್ಲಿನ ಗೋಪುರಗಳನ್ನು ಮುಟ್ಟುವುದು ಅಥವಾ ಕೆಡವುವುದು ಕೂಡ ತಪ್ಪು ಎಂದು ತಜ್ಞರು ಎಚ್ಚರಿಸಿದ್ದಾರೆ.
ವನ್ಯಜೀವಿಗಳ ಆವಾಸಸ್ಥಾನಕ್ಕೆ ಧಕ್ಕೆ
ನಾವು ಸಾಧಾರಣವಾಗಿ ಕಾಣುವ ಪ್ರತಿಯೊಂದು ಕಲ್ಲಿನ ಕೆಳಗೂ ಒಂದು ಪುಟ್ಟ ಪ್ರಪಂಚವೇ ಅಡಗಿರುತ್ತದೆ. ಸಣ್ಣ ಕೀಟಗಳು, ಕಪ್ಪೆಗಳು ಮತ್ತು ಹಲ್ಲಿಗಳು ಈ ಕಲ್ಲುಗಳ ಕೆಳಗೆ ತಮ್ಮ ಮನೆಗಳನ್ನು ಮಾಡಿಕೊಂಡಿರುತ್ತವೆ. ಕೆಲವು ಅಪರೂಪದ ಸಸ್ಯಗಳು ಮತ್ತು ಪಾಚಿಗಳು ಕಲ್ಲುಗಳ ನೆರಳಿನಲ್ಲಿಬೆಳೆಯುತ್ತವೆ. ನಾವು ಕಲ್ಲನ್ನು ಕದಲಿಸಿದ ತಕ್ಷಣ ಇಡೀ ಸಂತತಿಯೇ ನಾಶವಾಗಬಹುದು. ಅಮೆರಿಕದ ರಾಷ್ಟ್ರೀಯ ಉದ್ಯಾನವನವೊಂದರಲ್ಲಿಪ್ರವಾಸಿಗರು ಕಲ್ಲುಗಳನ್ನು ಸ್ಥಳಾಂತರಿಸಿದ ಕಾರಣ, ಅಪರೂಪದ ಹೆಲ್ ಬೆಂಡರ್ (ಏಛ್ಝ್ಝಿಚಿಛ್ಞಿdಛ್ಟಿ) ಎಂಬ ದೊಡ್ಡ ಜಾತಿಯ ಸಾಲಮ್ಯಾಂಡರ್ (ಒಂದು ರೀತಿಯ ಹಲ್ಲಿ/ಕಪ್ಪೆ ಜಾತಿಗೆ ಸೇರಿದ ಪ್ರಾಣಿ) ಕಲ್ಲಿನ ಅಡಿಗೆ ಸಿಲುಕಿ ಮೃತಪಟ್ಟಿತ್ತು.
ಬಾಕ್ಸ್
ಏಕೆ ಕೆಡವಬಾರದು ?
ಎಲ್ಲೆಂದರಲ್ಲಿಕಲ್ಲುಗಳನ್ನು ಜೋಡಿಸುವುದು ಎಷ್ಟು ತಪ್ಪೋ, ದಾರಿಯಲ್ಲಿಸಿಗುವ ಕಲ್ಲಿನ ಗೋಪುರಗಳನ್ನು ಕೋಪದಿಂದ ಕೆಡವುದು ಅಥವಾ ಮುಟ್ಟುವುದು ಅಷ್ಟೇ ತಪ್ಪು. ಏಕೆಂದರೆ ಅವುಗಳಲ್ಲಿಕೆಲವು ನಿಜವಾಗಿಯೂ ದಾರಿ ತೋರಿಸಲು ಇಟ್ಟ ಅಧಿಧಿಕೃತ ಸಂಕೇತಗಳಾಗಿರಬಹುದು ಅಥವಾ ಐತಿಹಾಸಿಕ ಮಹತ್ವವುಳ್ಳ ಕಲ್ಲುಗಳಾಗಿರಬಹುದು. ಅವುಗಳನ್ನು ಧ್ವಂಸಗೊಳಿಸುವುದು ಕಾನೂನುಬಾಹಿರ ಆಗಿರುತ್ತದೆ. ಒಬ್ಬರು ಕಲ್ಲುಜೋಡಿಸುವುದು ದೊಡ್ಡ ವಿಷಯವಲ್ಲಅನಿಸಬಹುದು. ಆದರೆ ಲಕ್ಷಾಂತರ ಪ್ರವಾಸಿಗರು ಇದೇ ರೀತಿ ಮಾಡಿದರೆ ಇಡೀ ಪ್ರಕೃತಿಯ ಸಮತೋಲನ ತಪ್ಪಬಹುದು.
ಅಮೆರಿಕದ ಮೇನ್ ಪ್ರಾಂತ್ಯದಲ್ಲಿರುವ ಪ್ರಸಿದ್ಧ ಅಕಾಡಿಯಾ ರಾಷ್ಟ್ರೀಯ ಉದ್ಯಾನವನಕ್ಕಾಗಿ 1890ರ ದಶಕದ ಕೊನೆಯಲ್ಲಿಖ್ಯಾತ ಹಾದಿ ನಿರ್ಮಾಪಕ ವಾಲ್ಡ್ರನ್ ಬೇಟ್ಸ್ ಒಂದು ವಿಶಿಷ್ಟ ಶೈಲಿಯ ಚಾರಣ ಮಾರ್ಗಸೂಚಿಯನ್ನು ವಿನ್ಯಾಸಗೊಳಿಸಿದರು. ಇದನ್ನೇ ಇಂದು ಬೇಟ್ಸ್ ಶೈಲಿಯ ಕ್ಯಾನ್ಸ್ ಎಂದು ಕರೆಯಲಾಗುತ್ತದೆ. ಕೆಲವು ರಾಷ್ಟ್ರೀಯ ಉದ್ಯಾನವನಗಳಲ್ಲಿಇಂದಿಗೂ ಅಧಿಧಿಧಿಧಿಕಾರಿಗಳೇ ಇದನ್ನು ಅಧಿಧಿಧಿಧಿಕೃತ ಮಾರ್ಗಸೂಚಿಯಾಗಿ ನಿರ್ಮಿಸಿ ನಿರ್ವಹಿಸುತ್ತಾರೆ.