ಕಾಡಾನೆಗೆ ಕಾಫಿ ತೋಟವೇ ನೆಲೆ!

Contributed byvinaykudrasthe13@gmail.com|Vijaya Karnataka
the havoc of wild elephants on coffee plantations
ಕಾಡಾನೆಗೆ ಕಾಫಿ ತೋಟವೇ ನೆಲೆ!

*ಜನವಸತಿ ಪ್ರದೇಶದಲ್ಲಿಹೆಚ್ಚಿದ ಉಪಟಳ | ಎಸ್ಟೇಟ್ ಗಳಲ್ಲೇ ಬೀಡುಬಿಟ್ಟ ಹಿಂಡು | ಬೆಳೆಗಾರರಿಗೆ ತಪ್ಪದ ಆತಂಕ
ವಿನಯ್ ಕೂಡುರಸ್ತೆ ಸಕಲೇಶಪುರ

ಘ್ಕಿvಜ್ಞಿayk್ಠd್ಟasಠಿhಛಿಃಜಞaಜ್ಝಿ.್ಚಟಞ

ಮಲೆನಾಡಿನಲ್ಲಿಕಾಡಾನೆಗಳ ಉಪಟಳ ಇತ್ತೀಚೆಗೆ ವಿಪರೀತವಾಗಿದ್ದು ಜನವಸತಿ ಪ್ರದೇಶ ಹಾಗೂ ಕಾಫಿ ತೋಟಗಳಲ್ಲಿಬೀಡು ಬಿಟ್ಟಿರುವುದು ಕಾಫಿ ಬೆಳೆಗಾರರು ಹಾಗೂ ಜನಸಾಮಾನ್ಯರಲ್ಲಿಭೀತಿ ಹೆಚ್ಚಿಸಿದೆ.

ಸಕಲೇಶಪುರ, ಬೇಲೂರು, ಆಲೂರು ತಾಲೂಕಿನಲ್ಲಿ387ಕ್ಕೂ ಹೆಚ್ಚು ಕಾಡಾನೆಗಳಿದ್ದು, ಇದರಲ್ಲಿ242ಕ್ಕೂ ಹೆಚ್ಚು ಕಾಡಾನೆಗಳು ಜನವಸತಿ ಪ್ರದೇಶಗಳಲ್ಲಿನೆಲೆಸಿವೆ. ಇದರಿಂದ ರೈತ ಮತ್ತು ಕಾರ್ಮಿಕರ ಜೀವಹಾನಿಗೂ ಕಾರಣವಾಗುತ್ತಿವೆ ಎಂದು ಬೆಳೆಗಾರರು ಆರೋಪಿಸಿದ್ದಾರೆ.

ಅರಣ್ಯ ನಾಶವೇ ಕಾರಣ: ಸಕಲೇಶಪುರ ತಾಲೂಕಿನ ಆರಣ್ಯ ಪ್ರದೇಶದ ಆಜುಬಾಜಿನಲ್ಲಿಹೋಂಸ್ಟೇ, ರೆಸಾರ್ಟ್ ಗಳು ತಲೆ ಎತ್ತಿವೆ. ಎತ್ತಿನಹೊಳೆಯಂತಹ ಅಭಿವೃದ್ಧಿ ಯೋಜನೆ ಸೇರಿದಂತೆ ನಾನಾ ಕಾರಣಕ್ಕೆ ಅರಣ್ಯ ನಾಶವಾಗುತ್ತಿದ್ದು, ಮಾನವನ ಹಸ್ತಕ್ಷೇಪ ಹೆಚ್ಚಾಗುತ್ತಿದೆ. ಹಾಗಾಗಿ ಕಾಡಾನೆಗಳ ಸಂತತಿ ಹೆಚ್ಚಾದಂತೆ ಅರಣ್ಯದಲ್ಲಿಆಹಾರ, ನೀರು ಸಿಗದೆ ಜನವಸತಿ ಪ್ರದೇಶಕ್ಕೆ ಆಗಮಿಸುತ್ತಿವೆ ಎನ್ನುತ್ತಾರೆ ಪರಿಸರ ಪ್ರಿಯರು.

ಕಾಫಿ ಎಸ್ಟೇಟ್ ಗಳೇ ಪ್ರಿಯ: ಕಾಡಿನೊಳಗೆ ಆಹಾರ ಮತ್ತು ನೀರಿನ ಕೊರತೆ ಉಂಟಾದಾಗ ಕಾಡಾನೆಗಳು ಕಾಫಿ ತೋಟಕ್ಕೆ ಆಗಮಿಸುತ್ತವೆ. ಇಲ್ಲಿಹಲಸಿನ ಹಣ್ಣು, ಬಾಳೆ ಸೇರಿದಂತೆ ವೈವಿಧ್ಯಮಯ ಆಹಾರ ಸಿಗುವುದರಿಂದ ಕಾಡಾನೆಗಳು ಎಸ್ಟೇಟ್ ಆನೆಗಳಾಗಿ ಪರಿವರ್ತನೆ ಆಗುತ್ತಿವೆ. ಇವು ಒಮ್ಮೆ ಎಸ್ಟೇಟ್ ಗಳಲ್ಲಿರುಚಿಯಾದ ಆಹಾರ ಸೇವಿಸಿದ ನಂತರ ಕಾಡಿಗೆ ಹಿಂದಿರುಗಲು ಹಿಂದೇಟು ಹಾಕುವ ಪ್ರಕರಣಗಳು ಹೆಚ್ಚುತ್ತಿವೆ. ಕಾಡಾನೆ ಉಪಟಳ ತಪ್ಪಿಸಲು ಸರಕಾರ ಕೋಟ್ಯಂತರ ರೂ. ವೆಚ್ಚ ಮಾಡುತ್ತಿದೆ. ರೈಲ್ವೆ ಬ್ಯಾರಿಕೇಡ್ , ಬೃಹತ್ ಕಂದಕಗಳು, ಸೌರಬೇಲಿಗಳನ್ನು ನಿರ್ಮಿಸಿದರೂ ಕಾಡಾನೆಗಳ ಹಾವಳಿ ತಡೆಯಲು ಸಾಧ್ಯವಾಗುತ್ತಿಲ್ಲ.

ಆನೆ ಕಾರಿಡಾರ್ ವಿಳಂಬ: ಜಿಲ್ಲೆಯಲ್ಲಿಕಾಡಾನೆಗಳ ಉಪಟಳ ತಡೆಗೆ ಆನೆ ಕಾರಿಡಾರ್ ನಿರ್ಮಿಸಲು ಅರಣ್ಯ ಇಲಾಖೆ ಸಿದ್ಧತೆ ನಡೆಸಿದೆ. ಆದರೆ ಸೂಕ್ತ ಸ್ಥಳ ಸಿಗದೆ ಇರುವುದರಿಂದ ಇದು ವಿಳಂಬವಾಗಿದೆ. ಅಲ್ಲದೆ ಈ ಯೋಜನೆಗೆ ಕೆಲ ರೈತರು ಜಮೀನು ಕೊಡಲು ನಿರಾಕರಿಸಿರುವುದರಿಂದ ಕಳೆದ ಒಂದು ದಶಕದಿಂದ ಆನೆ ಕಾರಿಡಾರ್ ಕನಸು ಸಾಕಾರಗೊಂಡಿಲ್ಲ. ಇದು ಕಾಡಾನೆ ಉಪಟಳ ಹೆಚ್ಚಲು ಕಾರಣವಾಗಿದೆ ಎಂದೇ ಹೇಳಲಾಗುತ್ತಿದೆ.

ಹಳೆ ತಂತ್ರಗಳು ವಿಫಲ: ಕಾಡಾನೆಗಳು ರೈತರ ಜಮೀನಿಗೆ ಬರುವುದನ್ನು ತಡೆಯಲು ಅರಣ್ಯ ಇಲಾಖೆ ಎಟಿಎಫ್ ಸಿಬ್ಬಂದಿಯನ್ನು ನೇಮಿಸಿದೆ. ಆದರೆ ಇದು ರೈತರಿಗೆ ಯಾವುದೇ ಅನುಕೂಲವಾಗುತ್ತಿಲ್ಲ. ಪಟಾಕಿ ಸಿಡಿಸುವುದರಿಂದ ಒಂದು ಎಸ್ಟೇಟ್ ನಿಂದ ಮತ್ತೊಂದು ಎಸ್ಟೇಟ್ ಗೆ ಹೋಗಿ ನೆಲೆ ನಿಲ್ಲುತ್ತಿದ್ದು, ಕಾಡಿಗೆ ಓಡಿಸಲು ಅರಣ್ಯ ಇಲಾಖೆ ವಿಫಲವಾಗಿದೆ ಎಂದು ಬೆಳೆಗಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಕಲೇಶಪುರ ಭಾಗದಲ್ಲಿ

ಕಾಡಾನೆ ದಾಂದಲೆ ಹೆಚ್ಚು

ಅತಿಹೆಚ್ಚು ಕಾಫಿ ಎಸ್ಟೇಟ್ ಗಳನ್ನು ಹೊಂದಿರುವ ಸಕಲೇಶಪುರ ಭಾಗದಲ್ಲಿಕಾಡಾನೆಗಳ ಉಪಟಳ ಹೆಚ್ಚಿದೆ. ಹೆತ್ತೂರು ಹೋಬಳಿಯ ಹೊಸಹಳ್ಳಿ, ಬೊಮ್ಮನಕೆರೆ, ವಡೋರು, ಬಾಳುಪೇಟೆ, ಮರಜನಹಳ್ಳಿ, ಚಿನ್ನಹಳ್ಳಿ, ಚಿಕ್ಕುಂದೂರು, ಐಗೂರು ಸುತ್ತಮುತ್ತ ಕಾಡಾನೆಗಳ ಹಾವಳಿಯಿಂದ ರೈತರ ಕೃಷಿ ಕೆಲಸಕ್ಕೆ ತೀವ್ರ ಹಿನ್ನಡೆಯಾಗಿದೆ. ಕಾಡಾನೆ ಭಯದಿಂದ ಕಾರ್ಮಿಕರು ತೋಟಕ್ಕೆ ಬರದೆ ಕಾಫಿ ಬೆಳೆಗಾರರು ಸಂಕಷ್ಟ ಅನುಭವಿಸುವ ಪರಿಸ್ಥಿತಿ ಉಂಟಾಗಿದೆ.

ಹೇಳಿಕೆ...

ಜಿಲ್ಲೆಯಲ್ಲಿಕಾಡಾನೆಗಳು ಜನವಸತಿ ಪ್ರದೇಶಕ್ಕೆ ಬರದಂತೆ ಅರಣ್ಯ ಇಲಾಖೆ 2000 ಎಕರೆಯಲ್ಲಿರುವ ಸಿಲ್ವರ್ ಮತ್ತು ಅಕೇಶಿಯಾ ಫಾರೆಸ್ಟ್ ಅನ್ನು ತೆರವುಗೊಳಿಸಿ ಕಾಡು ಜಾತಿ ಮತ್ತು ಹಣ್ಣಿನ ಮರಗಳನ್ನು ನೆಡಲು ಸಿದ್ಧತೆ ನಡೆಸಿದೆ. ಇದು ಭವಿಷ್ಯದಲ್ಲಿಕಾಡಾನೆಗಳಿಗೆ ಅರಣ್ಯ ಭಾಗದಲ್ಲಿಆಹಾರ ಸಿಗುವಂತೆ ಮಾಡುತ್ತದೆ.

ಧಿಧಿ-ರೇವಣ್ಣ ಸಿದ್ದಯ್ಯ ಹಿರೇಮಠ್ , ಆರ್ ಎಫ್ ಒ, ಯಸಳೂರು ಉಪ ಅರಣ್ಯ ವಲಯ.

ಜಿಲ್ಲೆಯಲ್ಲಿದಿನದಿಂದ ದಿನಕ್ಕೆ ಕಾಡಾನೆಗಳ ಉಪಟಳ ಹೆಚ್ಚುತ್ತಿದ್ದು, ಭಾರಿ ಪ್ರಮಾಣದಲ್ಲಿಬೆಳೆ ನಾಶವಾಗುತ್ತಿದೆ. ಜಿಲ್ಲೆಯಲ್ಲಿಕಾಡಾನೆ ಹಾವಳಿ ಹೆಚ್ಚು ಇರುವ ಪ್ರದೇಶದಲ್ಲಿಆನೆ ಕಾರಿಡಾರ್ ನಿರ್ಮಿಸಬೇಕು ಎಂಬುದು ನಮ್ಮ ಬಹುದಿನದ ಬೇಡಿಕೆ. ಈ ಬಗ್ಗೆ ಅರಣ್ಯ ಇಲಾಖೆ ಕ್ರಮಕೈಗೊಳ್ಳಬೇಕು.

-ಯಡೆಹಳ್ಳಿ ಮಂಜುನಾಥ್ , ಮಾನವ ಮತ್ತು ಕಾಡಾನೆ ಸಂಘರ್ಷ ಸಮಿತಿ ರಾಜ್ಯ ಅಧ್ಯಕ್ಷ, ಸಕಲೇಶಪುರ.

*ಫೋಟೊ ಇದೆ