ಮತದಾರರ ಪಟ್ಟಿಯ ಲೋಪದೋಷ ಸರಿಪಡಿಸಿಕೊಳ್ಳಿ

Contributed bymadhugirinews@gmail.com|Vijaya Karnataka
correcting voter list errors is extremely necessary
ತುಮಕೂರು: ಮತದಾರರ ಪಟ್ಟಿಯ ವಿಶೇಷ ಪರೀಷ್ಕರಣೆಯ ವೇಳೆ ತುಮಕೂರು ನಗರದ ಮತದಾರರು, ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳ ಮತದಾರರು, ಅಗತ್ಯ ದಾಖಲೆಗಳೊಂದಿಗೆ ಮತದಾರರ ಪಟ್ಟಿಯ ನೂತನ ನೊಂದಣಿ ಫಾರಂ ತುಂಬುವ ಮೂಲಕ ಮತದಾನದ ಹಕ್ಕನ್ನು ಕಾಪಾಡಿಕೊಳ್ಳಬೇಕು ಎಂದು ಮಾಜಿ ಶಾಸಕ ಹಾಗೂ ಎಐಸಿಸಿ ಅಲ್ಪಸಂಖ್ಯಾತರ ಘಟಕದ ಸಂಚಾಲಕ ಡಾ.ರಫೀಕ್ ಅಹಮದ್ ಪ್ರಕಟಣೆಯಲ್ಲಿತಿಳಿಸಿದ್ದಾರೆ.

ಮತದಾರರ ಪಟ್ಟಿ ಪರೀಷ್ಕರಣೆ ಚುನಾವಣಾ ಆಯೋಗದ ಪ್ರತಿ ವರ್ಷದ ಪ್ರಕ್ರಿಯೆಯಾಗಿದ್ದರೂ, ಈ ಬಾರಿ ಚುನಾವಣಾ ಆಯೋಗ ವಿಶೇಷ ಪರೀಷ್ಕರಣೆಗೆ ಮುಂದಾಗಿದೆ. ಇದರಲ್ಲಿಮತದಾರರ ಪಟ್ಟಿಯಲ್ಲಿಈಗಾಗಲೇ ಹೆಸರು ಇರುವವರು ಸಹ, ನೋಂದಣಿ ಫಾರಂ ತುಂಬುವುದು ಕಡ್ಡಾಯವಾಗಿದೆ. ಅಲ್ಲದೆ 2002ರ ಮತದಾರರ ಪಟ್ಟಿ ಮತ್ತು 2025ರ ಮತದಾರರ ಪಟ್ಟಿಯಲ್ಲಿನ ಲೋಪದೋಷಗಳನ್ನು ಸರಿಪಡಿಸಿಕೊಂಡು, ದೋಷವಿಲ್ಲದ ಮತದಾರರ ಪಟ್ಟಿಗೆ ಅವಕಾಶ ಇರುವ ಕಾರಣ, ಪ್ರತಿಯೊಬ್ಬ ಮತದಾರರು ತಮ್ಮ ಮನೆಯ ಬಳಿ ಚುನಾವಣಾ ಆಯೋಗ, ವಿಶೇಷ ಮತದಾರರ ಪಟ್ಟಿ ಪರೀಕ್ಷರಣೆಗೆ ಬಿ.ಎಲ್ .ಒ ಆಗಮಿಸುವ ವೇಳೆ ಮತದಾರರ ನೋಂದಣಿ ಅರ್ಜಿ ತುಂಬುವ ವೇಳೆ ಪ್ರತಿ ಪದವನ್ನು ಓದಿ, ಅರ್ಥೈಸಿಕೊಂಡು, ಇಲ್ಲವೇ ತಿಳಿದವರಿಂದ ಕೇಳಿ ತಿಳಿದು ಭರ್ತಿ ಮಾಡುವ ಮೂಲಕ, ಸಣ್ಣ ಪುಟ್ಟ ತಪ್ಪುಗಳಿಂದ ಮತದಾರರ ಪಟ್ಟಿಯಿಂದ ತಮ್ಮ ಹೆಸರು ಬಿಟ್ಟು ಹೋಗದಂತೆ ಎಚ್ಚರ ವಹಿಸಬೇಕು ಎಂದು ಮನವಿ ಮಾಡಿದ್ದಾರೆ.
ಫೋಟೋ 24ಕೆಜಿಎಚ್ 2: ಡಾ.ರಫೀಕ್ ಅಹಮದ್ .