ಮೇಷ : ಹಿಂದೆ ಕೈಗೊಂಡ ನಿರ್ಧಾರಗಳಲ್ಲಿಕೆಲ ಬದಲಾವಣೆಗಳನ್ನು ಮಾಡಿಕೊಳ್ಳುವುದರಿಂದ ವ್ಯವಹಾರಗಳಲ್ಲಿಧನಲಾಭ ಕಾಣುವಿರಿ. ನ್ಯಾಯಾಲಯದಲ್ಲಿದ್ದ ಸಮಸ್ಯೆಗಳಿಗೆ ಉತ್ತರ ಸಿಗಲಿದೆ.
(ಶುಭ ಸಂಖ್ಯೆ : 6, ಅದೃಷ್ಟ ಬಣ್ಣ : ಬೂದು)
-----------------
ವೃಷಭ : ಜೀವನದಲ್ಲಿಪರಿಸ್ಥಿತಿಗೆ ಅನುಗುಣವಾಗಿ ಹೊಂದಿಕೊಳ್ಳುವ ಅನಿವಾರ್ಯತೆ ಕಂಡುಬರಲಿದೆ. ಗಣ್ಯ ವ್ಯಕ್ತಿಗಳಿಗೆ ಸಮಾಜ ಮತ್ತು ರಾಜಕೀಯ ಕ್ಷೇತ್ರದಲ್ಲಿಸ್ಥಾನ-ಮಾನ ಲಭಿಸಲಿದೆ.
(ಶುಭ ಸಂಖ್ಯೆ : 5, ಅದೃಷ್ಟ ಬಣ್ಣ : ಕಿತ್ತಳೆ)
----------
ಮಿಥುನ : ಅತಿ ಖರ್ಚು ಮಾಡುವ ಮನಸ್ಥಿತಿಯನ್ನು ಹೊಂದಿದವರಿಗೆ ಹಣದ ಮೌಲ್ಯದ ಅರಿವಾಗುವುವು. ಈಗಾಗಲೇ ತೆಗೆದುಕೊಂಡ ನಿರ್ಧಾರದ ಬಗ್ಗೆ ಅನುಮಾನಗಳು ಎದುರಾಗಲಿವೆ. ಕಟ್ಟುಪಾಡಿಗೆ ಸಿಕ್ಕಿಕೊಳ್ಳಬೇಡಿ.
(ಶುಭ ಸಂಖ್ಯೆ : 4, ಅದೃಷ್ಟ ಬಣ್ಣ : ಗುಲಾಬಿ)
-------------
ಕರ್ಕ: ಸರಕು ಸಾಗಣೆದಾರರಿಗೆ ಆದಾಯದಲ್ಲಿಹೆಚ್ಚಳ ಕಂಡುಬಂದರೂ ಕಾರ್ಯದ ಒತ್ತಡದಿಂದ ವೃತ್ತಿಯಲ್ಲಿನಿರಾಶೆಯಾಗುವುದು. ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವ ಆಲೋಚನೆಯನ್ನು ಕಾರ್ಯರೂಪಕ್ಕೆ ತನ್ನಿರಿ.
(ಶುಭ ಸಂಖ್ಯೆ : 2, ಅದೃಷ್ಟ ಬಣ್ಣ : ಆಕಾಶ ನೀಲಿ)
------------
ಸಿಂಹ : ಸಹೋದ್ಯೋಗಿಯೊಬ್ಬರ ಸಲಹೆ ಅತಿ ಸೂಕ್ತ ಎನಿಸಿ ಅದರಂತೆ ನಡೆದು ವ್ಯವಹಾರದಲ್ಲಿಲಾಭವನ್ನು ಹೊಂದುವಿರಿ. ಸಜ್ಜನರ ಒಡನಾಟದಿಂದ ಕೆಲಸಗಳಿಗೆ ಪುಷ್ಟಿ ದೊರೆಯಲಿದೆ. ಪತ್ನಿಯ ಆರೋಗ್ಯ ಸುಧಾರಿಸುವುದು.
(ಶುಭ ಸಂಖ್ಯೆ : 1, ಅದೃಷ್ಟ ಬಣ್ಣ : ಹಸಿರು)
----------
ಕನ್ಯಾ : ಯೋಜನೆಗಳನ್ನು ಕದಿಯುವವರು ಇರುವುದರಿಂದ ಆಲೋಚನೆಯನ್ನು ಇನ್ನೊಬ್ಬರಲ್ಲಿಹಂಚಿಕೊಳ್ಳಬೇಡಿ. ಶಿಕ್ಷಣ ವೃತ್ತಿಯಲ್ಲಿರುವವರಿಗೆ ಅನುಭವ ಸಿಗಲಿದೆ. ಪ್ರವಾಹ ಪರಿಹಾರ ಧನ ಕೈ ಸೇರಲಿದೆ.
(ಶುಭ ಸಂಖ್ಯೆ : 8, ಅದೃಷ್ಟ ಬಣ್ಣ : ಹಳದಿ)
-----------
ತುಲಾ : ಮದುವೆಯ ವಿಷಯಕ್ಕೆ ಸಂಬಂಧಿಸಿದಂತೆ ತಾಯಿಯ ಮತ್ತು ಅಣ್ಣಂದಿರ ಮನ ಸೆಳೆಯುವಲ್ಲಿಯಶಸ್ವಿಯಾಗುವಿರಿ. ಅಧಿಕಾರಗಳ ಒಪ್ಪಂದದಿಂದ ಕಾರ್ಯಭಾರ ಅಧಿಕವಾಗಬಹುದು. ಧನ ಸಂಪಾದನೆ ಆಗುವುದು.
(ಶುಭ ಸಂಖ್ಯೆ : 9, ಅದೃಷ್ಟ ಬಣ್ಣ : ಕೆಂಪು)
----------
ವೃಶ್ಚಿಕ : ಅತಿಯಾಗಿ ಪ್ರೀತಿಸುವ ಮತ್ತು ಆದರಿಸುವ ಜನರೊಂದಿಗೆ ಕಾಲ ಕಳೆಯಲು ಸಕಾಲ. ಆಹಾರ ಪದಾರ್ಥದ ಬೆಳೆಯನ್ನು ಬೆಳೆದ ಕೃಷಿಕರಿಗೆ ಲಾಭ ಸಿಗುವುದು. ಸ್ವಂತ ಉದ್ಯೋಗಸ್ಥರಿಗೆ ಸಹಾಯ ಅನಿವಾರ್ಯವಾಗುತ್ತದೆ.
(ಶುಭ ಸಂಖ್ಯೆ :3, ಅದೃಷ್ಟ ಬಣ್ಣ : ಬಿಳಿ)
-----------
ಧನು : ಸಂಬಂಧಿಕರಿಗಾಗಿ ಅಥವಾ ಆಪ್ತ ಸ್ನೇಹಿತನಿಗಾಗಿ ಸಮಯ ಮತ್ತು ಹಣವನ್ನು ಖರ್ಚು ಮಾಡುವ ಪರಿಸ್ಥಿತಿ ಬರುವುದು. ಸಮಯ ಮತ್ತು ಅನುಕೂಲತೆಯ ಮೇಲೆ ಹೊಸ ಕೆಲಸಗಳನ್ನು ಒಪ್ಪಿಕೊಳ್ಳಬಹುದು.
(ಶುಭ ಸಂಖ್ಯೆ 1, ಅದೃಷ್ಟ ಬಣ್ಣ :ಕಪ್ಪು)
-------------
ಮಕರ : ಉದ್ಯೋಗಕ್ಕೆ ಸಂಬಂಧಿಸಿದಂತೆ ಹೊಸ ಜನರ ಸಂಪರ್ಕ ಧನ ಲಾಭ ತರಲಿದೆ. ವಿದ್ಯಾರ್ಜನೆಯಲ್ಲಿಉತ್ತಮ ಹಂತ ತಲುಪಲು ಸಾಧ್ಯ. ಸಂತಾನದ ಶುಭ ಸುದ್ದಿ ಕೇಳಿ ಸಂತಸ ಪಡುವಿರಿ.
(ಶುಭ ಸಂಖ್ಯೆ :2, ಅದೃಷ್ಟ ಬಣ್ಣ : ಮರೂನ್ )
----------
ಕುಂಭ : ಮನೆ ಜಾಗದ ಪಾಲುದಾರಿಕೆ ವಿಷಯದಲ್ಲಿಬದಲಾವಣೆ ಮಾಡಿಕೊಳ್ಳಬೇಕಾಗಬಹುದು. ಮುಂದೆ ಎದುರಾಗುವ ತೊಂದರೆಯನ್ನು ಮೊದಲೇ ಊಹಿಸಿಕೊಂಡು ಪರಿಹಾರ ಕಂಡುಕೊಳ್ಳಿ.
(ಶುಭ ಸಂಖ್ಯೆ :4, ಅದೃಷ್ಟ ಬಣ್ಣ : ಖಾಕಿ)
---------
ಮೀನ : ಖಾಸಗಿ ಉದ್ಯೋಗಿಗಳು ಆದಾಯ ಏರಿಕೆಯ ವಿಚಾರವನ್ನು ಮೇಲಧಿಕಾರಿಗಳಲ್ಲಿಪ್ರಸ್ತಾಪಿಸಬಹುದು. ಧೈರ್ಯದಿಂದ ಎಲ್ಲರೆದುರು ಸತ್ಯವಾದವನ್ನು ಮಂಡಿಸುವಲ್ಲಿಯಶಸ್ವಿಯಾಗುವಿರಿ. ಹಿರಿಯರ ಮಾತಿನ ಬಗ್ಗೆ ಗಮನವಿರಲಿ.