Suspected Terrorist Arrested In Harihar Another Arrest Within 18 Days
ಹರಿಹರದಲ್ಲಿಶಂಕಿತ ಉಗ್ರನ ಸೆರೆ
Contributed by: BASAVARAJU KG|Vijaya Karnataka•
ಮಹತ್ವದ ಸುದ್ದಿ
ಕಿಕ್ಕರ್ : 18 ದಿನಗಳ ಅಂತರದಲ್ಲಿಮೂವರ ಬಂಧನ * ಎನ್ ಐಎ ಸೂಚನೆ ಮೇರೆಗೆ ಜಿಲ್ಲಾಪೊಲೀಸ್ ಕಾರ್ಯಾಚರಣೆಹರಿಹರದಲ್ಲಿಶಂಕಿತ ಉಗ್ರನ ಸೆರೆ
ವಿಕ ಸುದ್ದಿಲೋಕ ದಾವಣಗೆರೆ
ಜಿಲ್ಲೆಯ ಹರಿಹರ ತಾಲೂಕು ವ್ಯಾಪ್ತಿಯ ಕಾರ್ಖಾನೆಯೊಂದರಲ್ಲಿಕೆಲಸ ಮಾಡುತ್ತಿದ್ದ ಉತ್ತರ ಪ್ರದೇಶ ಮೂಲದ ಶಂಕಿತ ಉಗ್ರನನ್ನು ಜಿಲ್ಲಾಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಕೇವಲ 18 ದಿನಗಳ ಅಂತರದಲ್ಲಿಜಿಲ್ಲೆಯಲ್ಲಿಶಂಕಿತ ಉಗ್ರನನ್ನು ಪತ್ತೆ ಹಚ್ಚಿದ ಎರಡನೇ ಪ್ರಕರಣ ಇದಾಗಿದ್ದು, ರಾಜ್ಯದಲ್ಲಿಇದು ಮೂರನೆಯ ಪ್ರಕರಣ. ಉತ್ತರಪ್ರದೇಶದ ಶಹಜಾನ್ ಪುರ ಮೂಲದ ಹಾಗೂ ಹರಿಹರ ತಾಲೂಕು ಬನ್ನಿಕೋಡು ಗ್ರಾಮದಲ್ಲಿವಾಸವಿದ್ದ ಎನ್ನಲಾದ ಸುಹೇಲ್ (20) ಬಂಧಿತ ಆರೋಪಿ ಎಂದು ತಿಳಿದು ಬಂದಿದೆ. ಹರಿಹರ ತಾಲೂಕಿನ ಕಾರ್ಖಾನೆ ಒಂದರಲ್ಲಿಸುಹೇಲ್ ಪೇಂಟಿಂಗ್ ಕೆಲಸ ಮಾಡಿಕೊಂಡಿದ್ದ. ದಾವಣಗೆರೆ ಹಾಗೂ ತುಮಕೂರು ನಗರಗಳಲ್ಲಿಜೂ.4ರಂದು ಬಂಧನಕ್ಕೊಳಗಾದ ಶಂಕಿತ ಉಗ್ರರು ನೀಡಿದ ಸುಳಿವಿನ ಮೇರೆಗೆ ಕಾರ್ಯಾಚರಣೆ ನಡೆಸಿ ಸೊಹೇಲ್ ನನ್ನು ಬಂಧಿಸಲಾಗಿದೆ.
ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್ ಐಎ) ಸೂಚನೆಯ ಮೇರೆಗೆ ದಾವಣಗೆರೆ ಗ್ರಾಮಾಂತರ ವಿಭಾಗದ ಡಿವೈಎಸ್ ಪಿ ಬಿ.ಎಸ್ . ಬಸವರಾಜ್ ನೇತೃತ್ವದ ಪೊಲೀಸರ ತಂಡ, ಮಂಗಳವಾರ ನಸುಕಿನಲ್ಲಿಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಬಂಧಿತ ಸುಹೇಲ್ , ವಾಟ್ಸ್ ಆಪ್ , ಇನ್ ಸ್ಟಾಗ್ರಾಮ್ ಹಾಗೂ ಇತರೆ ಸಾಮಾಜಿಕ ಮಾಧ್ಯಮ, ಜಾಲತಾಣಗಳ ಮೂಲಕ ಪೊಕಿಸ್ಥಾನದ ಕೆಲವರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದ. ಶಂಕಿತ ಉಗ್ರನ ವಾಟ್ಸ್ ಆಪ್ ನಲ್ಲಿಭಯೋತ್ಪಾದಕ ಚಟುವಟಿಕೆಗಳಿಗೆ ಸಂಬಂಧಿಸಿದ ಮಾಹಿತಿ ಪತ್ತೆಯಾಗಿದೆ. ಬಂಧಿತನ ವಿಚಾರಣೆ ಪೂರ್ಣಗೊಳಿಸಿ ತುಮಕೂರು ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ದಾವಣಗೆರೆ ರೈಲು ನಿಲ್ದಾಣದಲ್ಲಿಜೂ.4ರಂದು ನಗರದ ಬಿಡಿ ಲೇಔಟ್ ನಿವಾಸಿಯಾಗಿದ್ದ ಜಮೀರ್ ಖಾನ್ (22) ಎಂಬ ಶಂಕಿತ ಉಗ್ರನನ್ನು ತುಮಕೂರು ಪೊಲೀಸರು ಬಂಧಿಸಿದ್ದರು. ಇದೇ ವೇಳೆ ತುಮಕೂರಿನಲ್ಲಿಅಲ್ಲಾಬಕ್ ್ಷ (24) ಎಂಬ ಮತ್ತೊಬ್ಬ ಶಂಕಿತ ಉಗ್ರನನ್ನು ಬಂಧಿಸಲಾಗಿತ್ತು. ಈ ಇಬ್ಬರೂ ಶಂಕಿತ ಉಗ್ರರ ವಿಚಾರಣೆ ನಡೆಸಿದಾಗ ಹರಿಹರ ನಗರದಲ್ಲಿಅಡಗಿದ್ದ ಸುಹೇಲ್ ಬಗ್ಗೆ ಮಾಹಿತಿ ನೀಡಿದ್ದರು. ಜಮೀರ್ ಖಾನ್ ಉಗ್ರರಾದ ಶಾಬಾಸ್ ಭುಟ್ಟಿ ಹಾಗೂ ರಾಣಾ ಉನೇನ್ ಜತೆ ನಿರಂತರ ಸಂಪರ್ಕದಲ್ಲಿದ್ದ.