ದಿನಭವಿಷ್ಯ 24 ಜೂನ್ 2026

Contributed bynetravati.krishnamurthy@timesgroup.com|Vijaya Karnataka
june 24 2026 horoscope know about your days future
ದಿನಭವಿಷ್ಯ 24 ಜೂನ್ 2026

ಶ್ರೀಪತಿ ಭಟ್ | ಬೆಂಗಳೂರು
(ತುಲಾ, ಮಕರ-ಈ ರಾಶಿಯವರಿಗೆ ಶಶಯೋಗ)

-------------

ಮೇಷ : ಸರಕಾರಿ ಕಚೇರಿಗಳಿಗೆ ಅಲೆದಾಟವಾದರೂ ಕಾರ್ಯಗಳು ಉತ್ತಮ ರೀತಿಯಲ್ಲಿಸಾಗಲಿವೆ. ತೆಗೆದುಕೊಂಡ ನಿರ್ಧಾರ ಸರಿಯಾದುದೆಂದು ಮನವರಿಕೆ ಆಗುವುದು. ಜೀವನದಲ್ಲಿಹೊಸ ಅಧ್ಯಾಯ ಸೃಷ್ಟಿಯಾಗುತ್ತದೆ.

(ಶುಭ ಸಂಖ್ಯೆ: 6, ಅದೃಷ್ಟ ಬಣ್ಣ : ಬೂದು)

------------

ವೃಷಭ : ಮೀನುಗಾರರು ಉದ್ಯೋಗದಲ್ಲಿಅಗತ್ಯವಾಗಿ ಜಾಗರೂಕತೆ ವಹಿಸಲಿದ್ದೀರಿ. ಮಿತ್ರರ ಭೇಟಿಯಿಂದ ಅಚ್ಚರಿಯ ವಿಚಾರ ತಿಳಿಯುವುದು. ಸಿದ್ಧ ಉಡುಪುಗಳ ವ್ಯಾಪಾರದಿಂದ ಹೇರಳ ಲಾಭ ಹೊಂದುವರಿ.

(ಶುಭ ಸಂಖ್ಯೆ : 3, ಅದೃಷ್ಟ ಬಣ್ಣ : ಕಪ್ಪು)

---------------

ಮಿಥುನ : ನಿವೇಶನಗಳ ಖರೀದಿಯ ಆಲೋಚನೆಗಳಿಗೆ ಪೂರಕ ವಾತಾವರಣ ಸ್ನೇಹಿತರಿಂದ ಸಿಗಲಿದೆ. ಸಂಗಾತಿಯು ಇಲ್ಲದಿರುವುದು ಒಂದು ರೀತಿಯ ಜಾಡ್ಯವನ್ನು ತರಬಹುದು.

(ಶುಭ ಸಂಖ್ಯೆ : 8, ಅದೃಷ್ಟ ಬಣ್ಣ : ಪಾಚಿ ಹಸಿರು)

-------------

ಕಟಕ: ರಿಯಲ್ ಎಸ್ಟೇಟ್ ಕಸುಬುದಾರರು ಬಂಡವಾಳ ತೊಡಗಿಸುವುದು ಸಮಂಜಸವಲ್ಲ. ದೈಹಿಕ ಶಕ್ತಿ ಹೆಚ್ಚುವುದರಿಂದ ಉತ್ತಮ ಅಭಿವೃದ್ಧಿಯನ್ನು ಕಾಣುವಿರಿ. ನಾನಾ ರೀತಿಯಲ್ಲಿಹಣ ಕೈ ಸೇರಲಿದೆ.

(ಶುಭ ಸಂಖ್ಯೆ : 2, ಅದೃಷ್ಟ ಬಣ್ಣ : ಬಿಳಿ)

---------------

ಸಿಂಹ : ರಾಜಕಾರಣದ ರಹಸ್ಯ ಬಯಲಾಗುವುದರಿಂದ ಪರಿಣಾಮ ಬೀರಲಿದೆ. ಯಂತ್ರೋಪಕರಣದ ಕ್ರಿಯೆಯಲ್ಲಿಅತೀವ ಆಸಕ್ತಿ ಮೂಡುವುದು. ಮನೆ ಖರೀದಿ ಅಥವಾ ನಿವೇಶನ ಖರೀದಿಯ ನಿಮ್ಮ ಯೋಜನೆ ಈಡೇರುವುದು.

(ಶುಭ ಸಂಖ್ಯೆ : 1, ಅದೃಷ್ಟ ಬಣ್ಣ : ಕೇಸರಿ)

---------------

ಕನ್ಯಾ : ಗೃಹಿಣಿಯರಿಗೆ ಸಮಸ್ಯೆಯಾದರೆ ಮನೆಯ ಸಂಪೂರ್ಣ ಜವಾಬ್ದಾರಿಯನ್ನು ಪುರುಷರು ತೆಗೆದುಕೊಳ್ಳುವುದು ಉತ್ತಮ. ಅಗತ್ಯದ ಹಣ ಕೈ ಸೇರುವುದರಿಂದ ಮಾಡಿದ ಸಾಲವನ್ನು ತೀರಿಸಲಿದ್ದೀರಿ.

(ಶುಭ ಸಂಖ್ಯೆ : 7, ಅದೃಷ್ಟ ಬಣ್ಣ : ಗುಲಾಬಿ)

-------------

ತುಲಾ : ಯಾರ ಸಹಾಯವೂ ಇಲ್ಲದೇ ಒಂದೊಳ್ಳೆ ಉದ್ಯೋಗ ಪಡೆಯುವ ಸಾಮರ್ಥ್ಯ ನಿಮ್ಮಲ್ಲಿಇದೆ. ಅನುಮಾನ ಪಡದೇ ಮುಂದುವರಿಯಿರಿ. ಜಾಹೀರಾತು ಕ್ಷೇತ್ರದಲ್ಲಿಇರುವವರಿಗೆ ಹೇರಳ ಅವಕಾಶಗಳು ಸಿಗಲಿವೆ.

(ಶುಭ ಸಂಖ್ಯೆ : 4, ಅದೃಷ್ಟ ಬಣ್ಣ : ಬೂದು)

-------------------

ವೃಶ್ಚಿಕ : ಗೃಹಿಣಿಯರಿಗೆ ವಿಶೇಷ ದಿನವಾಗಿದ್ದು, ಆಕಸ್ಮಿಕ ಧನಲಾಭ ಅಥವಾ ತವರು ಮನೆಯವರಿಂದ ಉಡುಗೊರೆ ಸಿಗಲಿದೆ. ಮಾತಿನಿಂದ ಸಂಬಂಧಗಳು ಒಡೆದು ಹೋಗುವ ಸಂಭವವಿದೆ.

(ಶುಭ ಸಂಖ್ಯೆ :9, ಅದೃಷ್ಟ ಬಣ್ಣ : ಹಳದಿ)

---------

ಧನು : ಉದ್ಯೋಗದಲ್ಲಿನ ಬದಲಾವಣೆ ಬಯಸಿದ ನಿಮಗೆ ನಿಮ್ಮಿಚ್ಛೆಯಂತೆ ಉತ್ತಮ ಆದಾಯ ದೊರೆಯುವ ಕೆಲಸ ಸಿಗಲಿದೆ. ಕಾರ್ಯದ ಸಮಯ ಒತ್ತಡಗಳು ಸುಖ-ಶಾಂತಿಯನ್ನು ಕಡಿಮೆ ಮಾಡಬಹುದು.

(ಶುಭ ಸಂಖ್ಯೆ 5, ಅದೃಷ್ಟ ಬಣ್ಣ :ಕೆಂಪು)

--------------------

ಮಕರ : ಪ್ರತಿ ಹೆಜ್ಜೆಯನ್ನು ನಿಮ್ಮ ಎದುರಾಳಿಗಳು ಗಮನಿಸುತ್ತಿರುವ ಕಾರಣ ಬಹಳಷ್ಟು ಎಚ್ಚರದಿಂದ ವ್ಯವಹರಿಸಿ. ಮಾಡುತ್ತಿರುವ ಪರೋಪಕಾರದ ಕೆಲಸಗಳಿಗೆ ಸಕಾರಾತ್ಮಕ ಪ್ರತಿಫಲ ಕಟ್ಟಿಟ್ಟ ಬುತ್ತಿ.

(ಶುಭ ಸಂಖ್ಯೆ :8, ಅದೃಷ್ಟ ಬಣ್ಣ : ಖಾಕಿ)

---------------

ಕುಂಭ : ಕುಟುಂಬದಲ್ಲಿಶುಭ ಕಾರ್ಯಗಳ ಸಂಭ್ರಮದಿಂದಾಗಿ ಹಿರಿಯರ ಮನಸ್ಸಿಗೆ ನೆಮ್ಮದಿ ಸಿಗಲಿದೆ. ಸಜ್ಜನರ ಭೇಟಿಯಿಂದ ಜ್ಞಾನಾರ್ಜನೆ ಮತ್ತು ಸಂತೋಷ ಉಂಟಾಗಲಿದೆ. ತಾಂತ್ರಿಕ ಸಲಹೆಗಾರರಿಗೆ ಮನ್ನಣೆ ಸಿಗಲಿದೆ.

(ಶುಭ ಸಂಖ್ಯೆ : 4, ಅದೃಷ್ಟ ಬಣ್ಣ : ನೀಲಿ)

----------

ಮೀನ : ದಾಂಪತ್ಯ ಜೀವನದಲ್ಲಿತಾಳ್ಮೆ, ಸಮಾಧಾನದಿಂದ ಮುಂದುವರೆಯಿರಿ. ಯಂತ್ರೋಪಕರಣಗಳ ರಿಪೇರಿ ಮತ್ತು ಮಾರಾಟದಿಂದ ಹಾಗೂ ಪಶುಸಂಗೋಪನೆಯಿಂದ ಲಾಭ ಇರುವುದು.

(ಶುಭ ಸಂಖ್ಯೆ 3 , ಅದೃಷ್ಟ ಬಣ್ಣ : ಕಂಚು)