Legal Action Against Rss Clear Signal From Priyank Kharge
ಕಡ್ಡಾಯ ಬಳಸಿ (ಮುಖಪುಟಕ್ಕೆ...) ಆರ್ ಎಸ್ ಎಸ್ ವಿರುದ್ಧ ಕಾನೂನು ಸಮರ ಪ್ರಿಯಾಂಕ್ ಖರ್ಗೆ ಸ್ಪಷ್ಟ ಸುಳಿವು
Contributed by: KENCHE GOWDA|Vijaya Karnataka•
ವಿಕ ಸುದ್ದಿಲೋಕ ಬೆಂಗಳೂರು
ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ ಎಸ್ ಎಸ್ ) ವಿರುದ್ಧ ಕಾನೂನು ಸಮರ ಮುಂದುವರೆಸುವ ಸುಳಿವು ನೀಡಿರುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ನೋಂದಣಿ ದಾಖಲೆ ಕೊಡದಿದ್ದರೆ ಕಾನೂನು ಕ್ರಮ ಖಚಿತ ಎಂದು ಹೇಳಿದ್ದಾರೆ.ನಗರದಲ್ಲಿಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘‘ಆರ್ ಎಸ್ ಎಸ್ ನೋಂದಣಿ ಕುರಿತು ಪತ್ರ ಬರೆದು ಸ್ಪಷ್ಟೀಕರಣ ಕೇಳಿದ್ದೇನೆ. ಆರ್ ಎಸ್ ಎಸ್ ಬಳಿ ದಾಖಲೆ ಇದ್ದಿದ್ದರೆ ಬಹುಶಃ ಇಷ್ಟೊತ್ತಿಗೆ ನನ್ನ ಮುಖಕ್ಕೆ ಎಸೆಯುತ್ತಿದ್ದರು. ಆದರೂ, ತಾಳ್ಮೆಯಿಂದ ಕಾಯುತ್ತಿದ್ದೇನೆ. ಒಂದು ವೇಳೆ ದಾಖಲೆ ಕೊಡದಿದ್ದರೆ ಕಾನೂನು ಇದ್ದೇ ಇದೆ,’’ ಎಂದು ತಿಳಿಸಿದರು.
‘‘ನೂರು ವರ್ಷದ ಹಳೆಯ ಸಂಸ್ಥೆಯಾದ ಕಾರಣ ನೋಂದಣಿ ದಾಖಲೆಯನ್ನು ಎಲ್ಲೋ ಇಟ್ಟಿರಬಹುದು. ನಾಗಪುರವೋ, ಕೇಶವಕೃಪದಲ್ಲೋ ಅಥವಾ ಯಾರೋ ಸರಸಂಚಾಲಕರ ಮನೆಯಲ್ಲಿಇಟ್ಟಿರುತ್ತಾರೆ. ದಾಖಲೆ ತರಬಹುದು ನೋಡೋಣ. ಆರ್ ಎಸ್ ಎಸ್ ನವರು ಕಾನೂನು ಚೌಕಟ್ಟು ಮೀರಲು ನಾನು ಬಿಡಲ್ಲ,’’ ಎಂದು ಸ್ಪಷ್ಟಪಡಿಸಿದರು.
‘‘ಆರ್ ಎಸ್ ಎಸ್ ಬೆಂಬಲಿಗರು ಗೃಹ ಸಚಿವನಾದ ನನಗೇ ಬೆದರಿಕೆ ಹಾಕುತ್ತಿದ್ದಾರೆ. ಅದು ಯಾವ ಮಟ್ಟಕ್ಕೆ ಬೇರು ಬಿಟ್ಟಿದೆ ಎಂಬುದು ಇದರಿಂದಲೇ ಅರ್ಥವಾಗುತ್ತದೆ,’’ ಎಂದು ಅಸಹನೆ ವ್ಯಕ್ತಪಡಿಸಿದರು.