ಹಳ್ಳಿ ಬ್ಯೂಟಿ ಹಿಮಶ್ರೀ ಸಿನಿಯಾನ

Contributed bybabitha.salian@timesgroup.com|Vijaya Karnataka
village beauty himashree openly shares thoughts on acting with vinod prabhakar
ಹಳ್ಳಿ ಬ್ಯೂಟಿ ಹಿಮಶ್ರೀ ಸಿನಿಯಾನ

ಇಂಟ್ರೊ
ಹಳ್ಳಿಯಿಂದ ನಗರಕ್ಕೆ ಬಂದು ಸಿನಿಮಾ, ಸೀರಿಯಲ್ ಗಳಲ್ಲಿಬಿಝಿ ಆಗಿರುವ ಹಿಮಶ್ರೀ ತಮ್ಮ ನಟನಾ ಕರಿಯರ್ ಬಗ್ಗೆ ಬಹಳ ಸ್ಪಷ್ಟತೆ ಹೊಂದಿದ್ದಾರೆ. ಚಿತ್ರರಂಗದಲ್ಲಿಅವಕಾಶಗಳಷ್ಟೇ ಪೈಪೋಟಿಯೂ ಇದೆ, ಇಲ್ಲಿನಮ್ಮ ಕೆಲಸದಿಂದಲೇ ನಮ್ಮನ್ನು ನಿರೂಪಿಸಿಕೊಳ್ಳಬೇಕೆಂದು ಅವರು ಹೇಳಿದ್ದಾರೆ.

ಮಲ್ವೀರ

ಶಿವಮೊಗ್ಗದ ಸಾಗರ ತಾಲೂಕಿನ ಕುಂಸಿ ಗ್ರಾಮದಿಂದ ಬಂದ ರೈತನ ಮಗಳು ಹಿಮಶ್ರೀ ‘ಸುಂದರಿ’ ಎಂಬ ಸೀರಿಯಲ್ ಮೂಲಕ ನಟನಾ ಕ್ಷೇತ್ರಕ್ಕೆ ಕಾಲಿಟ್ಟವರು. ನಟನೆಯ ನಡುವೆಯೇ ಓದು ಮುಂದುವರೆಸಿ ಈಗ ಅದನ್ನೇ ವೃತ್ತಿಯನ್ನಾಗಿಸಿದ್ದಾರೆ. ತಮ್ಮ ಸಿನಿಮಾ ಜರ್ನಿ ಬಗ್ಗೆ ಲವಲವಿಕೆಯೊಂದಿಗೆ ಹೇಳಿಕೊಂಡಿರುವ ಅವರು, ‘ನಾನು ‘ಸದ್ದು’ ಚಿತ್ರದ ಮೂಲಕ ಬೆಳ್ಳಿತೆರೆಗೆ ಬಂದೆ. ಅದಾದ ಬಳಿಕ ‘ಹಳ್ಳಿ ಹೈಕ್ಳ ಪ್ಯಾಟೇ ಲೈಫು’, ವಿನೋದ್ ಪ್ರಭಾಕರ್ ನಟನೆಯ ‘ಮಾದೇವ’, ‘ರಾಮನಗರ’, ‘ಮೃತ್ಯುದೇವತೆ’ ಸೇರಿದಂತೆ ಅನೇಕ ಸಿನಿಮಾಗಳಲ್ಲಿನಟಿಸಿದ್ದೇನೆ. ತೆಲುಗಿನಲ್ಲಿ‘ಖೇಲ್ ’ ಎಂಬ ಚಿತ್ರದಲ್ಲಿಕಾಣಿಸಿಕೊಂಡಿದ್ದೇನೆ. ನನ್ನ ಮೂರು ತೆಲುಗು ಸಿನಿಮಾಗಳು ರಿಲೀಸ್ ಆಗಬೇಕಿವೆ’ ಎಂದಿದ್ದಾರೆ.

‘ನಾನು 17ನೇ ವರ್ಷದಲ್ಲೇ ಚಿತ್ರೋದ್ಯಮಕ್ಕೆ ಬಂದೆ. ನಟನೆ ಆರಂಭಿಸಿ ಈಗ ಎಂಟು ವರ್ಷಗಳಾದವು. ಇಲ್ಲಿಯವರೆಗೆ ಒಂಬತ್ತು 9 ಸೀರಿಯಲ್ ಗಳಲ್ಲಿನಟಿಸಿದ್ದೇನೆ. ‘ಸುಬ್ಬುಲಕ್ಷ್ಮಿ ಸಂಸಾರ’, ‘ಮುದ್ದುಲಕ್ಷ್ಮಿ’, ‘ಆಕೃತಿ’, ‘ರಾಮಾಚಾರಿ’ ಧಾರಾವಾಹಿಗಳಲ್ಲಿವಿಲನ್ ಆಗಿ ಕಾಣಿಸಿಕೊಂಡಿದ್ದೇನೆ. ನನ್ನ ಲುಕ್ ಮತ್ತು ಆ್ಯಟಿಟ್ಯೂಡ್ ಹಾಗೇ ಇದೆ ಎಂದು ಜನರು ಹೇಳುತ್ತಾರೆ. ಈಗ ‘ಮದರ್ ’ ಸಿನಿಮಾದಲ್ಲಿನಟಿ ಶ್ರುತಿ ಅವರ ಸೊಸೆ ಪಾತ್ರದಲ್ಲಿನಟಿಸುತ್ತಿದ್ದೇನೆ. ‘ಮಾದೇವ’ದಲ್ಲಿನ ನನ್ನ ನಟನೆ ನೋಡಿ ಈ ಅವಕಾಶ ಸಿಕ್ಕಿದೆ’ ಎಂದು ಹಿಮಶ್ರೀ ವಿವರಿಸಿದ್ದಾರೆ.

ಹಳ್ಳಿ ಹೆಣ್ಣುಮಕ್ಕಳು ಹೀಗೂ ಇರುತ್ತಾರೆಯೇ, ಆವರ ಆಲೋಚನೆ ಹೀಗೂ ಇರುತ್ತದೆಯೇ ಎಂದು ತೋರಿಸುವ ಪಾತ್ರ ನನ್ನದು ಎಂದು ಹೇಳಿರುವ ಅವರು, ‘ಈ ಚಿತ್ರದಲ್ಲಿನನ್ನ ಹಾಗೂ ಶ್ರುತಿ ಪಾತ್ರ ಯಾರೂ ಊಹಿಸದ ರೀತಿಯಲ್ಲಿಇರುತ್ತದೆ. ಅತ್ತೆ ಹೇಳಿದಂತೆ ಕೇಳುವ, ಅವರ ನಂತರ ಮನೆಯ ಜವಾಬ್ದಾರಿ ನನ್ನದೇ ಎನ್ನುವ ಕಲ್ಪನೆಯಲ್ಲಿಬದುಕುವ ಹಿರಿಯ ಸೊಸೆಯ ಪಾತ್ರ ನನ್ನದು’ ಎಂದಿದ್ದಾರೆ. ‘ಒಂದೇ ಥರದ ಪಾತ್ರಗಳಲ್ಲಿಕಾಣಿಸಿಕೊಳ್ಳಲು ನನಗೆ ಇಷ್ಟವಿಲ್ಲ. ಗ್ಲಾಮರಸ್ , ಡಿ ಗ್ಲಾಮರ್ ಪಾತ್ರಗಳಲ್ಲಿನಟಿಸಲು ಇಷ್ಟ. ‘ಕೌಸ್ತುಭ’ ಎನ್ನುವ ಸಿನಿಮಾದಲ್ಲಿನಟ ಪ್ರಮೋದ್ ಶೆಟ್ಟಿಗೆ ಜೋಡಿಯಾಗಿ ಪೊಲೀಸ್ ಕಾಪ್ ಪಾತ್ರದಲ್ಲಿದ್ದೇನೆ. ಅದರ ಶೂಟಿಂಗ್ ಬಾಕಿ ಇದೆ. ‘ಕೊಹಿನೂರ್ ’ ಚಿತ್ರದಲ್ಲಿಗ್ಲಾಮರಸ್ ಸಿಟಿ ಹುಡುಗಿಯ ಪಾತ್ರವಿದೆ. ಚಾಲೆಂಜಿಂಗ್ ಆಗಿರುವ ಅದರಲ್ಲೂಪೌರಾಣಿಕ ಪಾತ್ರಗಳನ್ನು ಮಾಡಲು ಕಾಯುತಿದ್ದೇನೆ. ನಾನು ಎತ್ತರವಾಗಿರುವುದರಿಂದ ಪೊಲೀಸ್ ಪಾತ್ರಗಳು ಹೆಚ್ಚು ಸಿಗುತ್ತವೆ. ಸಿನಿಮಾ ಅವಕಾಶಗಳಿಗೆ ಇದು ಪ್ಲಸ್ , ಸೀರಿಯಲ್ ನಲ್ಲಿಮೈನಸ್ ಆಗುತ್ತಿದೆ’ ಎಂದು ಹಿಮಶ್ರೀ ತಿಳಿಸಿದ್ದಾರೆ.

ಈಗ ಪಾತ್ರಗಳನ್ನು ಪಡೆಯುವುದು ತುಂಬಾ ಚಾಲೆಂಜಿಂಗ್ , ಇದರಲ್ಲಿಅತಿ ಪೈಪೋಟಿ ಇದೆ ಎಂದಿರುವ ಅವರು, ‘ನಮ್ಮನೆಯಲ್ಲಿನನ್ನ ನಟನೆಗೆ ಸಪೋರ್ಟ್ ಇಲ್ಲ, ಈಗೆಲ್ಲಾಪೋಷಕರೇ ತಮ್ಮ ಮಕ್ಕಳ ನಟನೆಗೆ ಸಾಥ್ ನೀಡುತ್ತಾರೆ. ಈಗ ಪ್ರತಿ ಮನೆಯಲ್ಲೂನಟಿಯರಿದ್ದಾರೆ. ಅವಕಾಶಗಳು ಹೆಚ್ಚಿದ್ದರೂ ಸ್ಪರ್ಧೆ ಕೂಡ ಹೆಚ್ಚಿದೆ. ಕಾಸ್ಟಿಂಗ್ ಮ್ಯಾನೇಜರ್ ಕಾಲ್ ಒಮ್ಮೆ ರಿಸೀವ್ ಮಾಡದಿದ್ದರೆ ಆ ಪಾತ್ರ ಬೇರೆಯವರ ಪಾಲಾಗುತ್ತದೆ, ಅಷ್ಟು ಪೈಪೋಟಿ ಇದೆ’ ಎಂದು ವಾಸ್ತವ ಚಿತ್ರಣವನ್ನು ಅರುಹಿದ್ದಾರೆ.

ಕೋಟ್

ನಾನು ಹಳ್ಳಿಯಿಂದ ಬಂದವಳು. ಆದ್ದರಿಂದ ಪಾತ್ರಗಳನ್ನು ನಾಜೂಕಿನಿಂದ ಆಯ್ಕೆ ಮಾಡಿಕೊಳ್ಳಬೇಕಿದೆ. ನಾನು ಚಿತ್ರೋದ್ಯಮಕ್ಕೆ ಹೊಸಬಳಾದ ಕಾರಣ ಸಿನಿಮಾ ಮೇಕರ್ಸ್ಗೆ ನಿರ್ಬಂಧ ಹೇರಲಾಗುವುದಿಲ್ಲ. ಯಾವುದೇ ಹಿನ್ನೆಲೆ ಇಲ್ಲದೆ ಬಂದಿರುವ ನನ್ನನ್ನು ಜನರು ಸಲೀಸಾಗಿ ಜಡ್ಜ್ ಮಾಡಿಬಿಡುತ್ತಾರೆ. ಹಾಗಾಗಿ ಪಾತ್ರಗಳ ಆಯ್ಕೆ ಕೂಡ ನನಗೆ ಚಾಲೆಂಜಿಂಗ್ .

ಹಿಮಶ್ರೀ | ನಟಿ