Emotional Health Through Daily Yoga Practice Celebration Of Yoga Day On June 21
4
Contributed by: Shrividya Rao|Vijaya Karnataka•
ಭಾವನಾತ್ಮಕ ಆರೋಗ್ಯಕ್ಕೆ ಬೇಕು ಯೋಗ
ಹುಬ್ಬಳ್ಳಿಯ ಜೆ.ಕೆ. ಇಂಗ್ಲಿಷ್ ಮೀಡಿಯಂ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಜೂನ್ 21ರಂದು ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು. ಕಾರ್ಯಕ್ರಮವು ಯೋಗದ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮಹತ್ವವನ್ನು ಬಿಂಬಿಸುವ ವಿಶೇಷ ಪ್ರಾರ್ಥನಾ ಸಭೆಯೊಂದಿಗೆ ಆರಂಭವಾಯಿತು.6ನೇ ತರಗತಿಯಿಂದ 10ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ತರಬೇತುದಾರರಾದ ಪ್ರಮೋದ್ ಬಂಕಾಪುರ ಹಾಗೂ ಶರಣಪ್ಪ ಬೆಳ್ಳಕ್ಕಿ ಅವರ ಮಾರ್ಗದರ್ಶನದಲ್ಲಿವಿವಿಧ ಯೋಗಾಸನಗಳನ್ನು ಪ್ರದರ್ಶಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅರುಣಾ ಕೋಟಬಾಗಿ, ಆರೋಗ್ಯಕರ ದೇಹ, ಶಾಂತ ಮನಸ್ಸು ಹಾಗೂ ಸಮತೋಲನಯುತ ಜೀವನಕ್ಕಾಗಿ ಯೋಗದ ಮಹತ್ವವನ್ನು ತಿಳಿಸಿದರು. ಯೋಗವು ಸೌಹಾರ್ದತೆ ಮತ್ತು ಸಮಗ್ರ ಆರೋಗ್ಯವನ್ನು ಉತ್ತೇಜಿಸುವಲ್ಲಿಮಹತ್ವದ ಪಾತ್ರ ವಹಿಸುತ್ತದೆ. ವಿದ್ಯಾರ್ಥಿಗಳು ನಿಯಮಿತವಾಗಿ ಯೋಗಾಭ್ಯಾಸ ಮಾಡುವ ಮೂಲಕ ದೈಹಿಕ ಕ್ಷಮತೆ, ಏಕಾಗ್ರತೆ ಹಾಗೂ ಭಾವನಾತ್ಮಕ ಆರೋಗ್ಯವನ್ನು ವೃದ್ಧಿಸಿಕೊಳ್ಳಬೇಕೆಂದು ಕರೆ ನೀಡಿದರು.
ಜೆ.ಕೆ. ಎಜುಕೇಶನ್ ಸೊಸೈಟಿ ಅಧ್ಯಕ್ಷ ಜಗದೀಶ ಕಲ್ಯಾಣಶೆಟ್ಟರ್ ಮಾತನಾಡಿದರು. ಉಪ ಪ್ರಾಂಶುಪಾಲ ಝಡ್ .ಎಸ್ . ಪೋಲು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿಉಪಸ್ಥಿತರಿದ್ದರು.
ಫೈಲ್ ನೇಮ್ - ಜಿ.ಕೆ ಸ್ಕೂಲ್
----------
ಫೋಟೊ ಕ್ಯಾಪ್ಶನ್ ಗಳು
ಹುಬ್ಬಳ್ಳಿಯ ಲಯಸ್ಸ್ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಹೊಸ ವಿದ್ಯಾರ್ಥಿ ಪರಿಷತ್ತು ಉದ್ಘಾಟನೆಗೊಂಡಿತು. ಹುಬ್ಬಳ್ಳಿಯ ಕೆಎಲ್ ಇ ತಾಂತ್ರಿಕ ವಿಶ್ವವಿದ್ಯಾಲಯದ ಸಿಬ್ಬಂದಿ ಕಲ್ಯಾಣ ವಿಭಾಗದ ಡಾ.ಸಂಜಯ್ ಕೊಟ್ ಬಾಗಿ ಮಾತನಾಡಿ, ಸಮಯ ನಿರ್ವಹಣೆ ಮತ್ತು ವಿಷಯಗಳಿಗೆ ಹೇಗೆ ಆದ್ಯತೆ ನೀಡಬೇಕು ಎಂಬುದರ ಕುರಿತು ಮಾರ್ಗದರ್ಶನ ನೀಡಿ, ವಿದ್ಯಾರ್ಥಿ ಪರಿಷತ್ತಿನ ಸದಸ್ಯರಿಗೆ ಶುಭ ಹಾರೈಸಿದರು. ಲಯನ್ ಅಧ್ಯಕ್ಷ ಜಯಪ್ರಕಾಶ್ ಟೆಂಗಿಂಕೈ, ಕಾರ್ಯದರ್ಶಿ ಲಯನ್ ಶಂಭು ಯಾವಗಲ್ , ಪ್ರಾಂಶುಪಾಲ ನೇಹಾ ಗಡ್ಗೋಲಿ, ನಿರ್ವಹಣಾ ಸಮಿತಿ ಸದಸ್ಯರು, ಶಿಕ್ಷಕರು, ಪೋಷಕರು ಮತ್ತು ವಿದ್ಯಾರ್ಥಿಗಳು ಈ ಸಂದರ್ಭದಲ್ಲಿಉಪಸ್ಥಿತರಿದ್ದರು.
ಫೈಲ್ ನೇಮ್ - ಲಯನ್ಸ್
--------------
ಹುಬ್ಬಳ್ಳಿಯ ಶ್ರೀ ಜಿಹ್ವೇಶ್ವರ ಶಿಕ್ಷಣ ಸಮಿತಿಯ, ಶ್ರೀ ಜಿಹ್ವೇಶ್ವರ ಆಂಗ್ಲಮಾಧ್ಯಮ ಶಾಲೆ ಹಾಗೂ ಶ್ರೀ ಜಿಹ್ವೇಶ್ವರ ಕೈಗಾರಿಕಾ ತರಬೇತಿ ಸಂಸ್ಥೆಯ ಸಯುಕ್ತ ಆಶ್ರಯದಲ್ಲಿ ಜೂನ್ 21ರಂದು ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು. ಶ್ರೀ ಜಿಹ್ವೇಶ್ವರ ಆಂಗ್ಲಮಾಧ್ಯಮ ಶಾಲೆಯ ಪ್ರಾಂಶುಪಾಲರಾದ ಭುವನೇಶ್ವರಿ ಅಂಗಡಿ, ಉಪ ಪ್ರಾಂಶುಪಾಲರಾದ ಸೀಮಾ ನರಗುಂದ, ಐಟಿಐ ಪ್ರಾಂಶುಪಾಲರಾದ ಬಸವರಾಜ ಚಿಲ್ಲಾಳ ಹಾಗೂ ಸಿಬ್ಬಂದಿ ವರ್ಗದವರು, ಮಕ್ಕಳು ಕಾರ್ಯಕ್ರಮದಲ್ಲಿಉಪಸ್ಥಿತರಿದ್ದರು.
ಫೈಲ್ ನೇಮ್ -ಜಿಹ್ವೇಶ್ವರ
= = =
ಬೆಂಗಳೂರಿನ ಹಿಮಾಂಶು ಜ್ಯೋತಿ ಕಲಾ ಪೀಠ ಶಾಲೆಯಲ್ಲಿಯೋಗ ದಿನವನ್ನು ಆಚರಿಸಲಾಯಿತು.
ಫೈಲ್ ನೇಮ್ - ಹಿಮಾಂಶು
-----
ಹುಬ್ಬಳ್ಳಿಯ ಸುಕೃತಿ ಪಬ್ಲಿಕ್ ಶಾಲೆಯಲ್ಲಿಜೂನ್ 21ರಂದು ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು. ಶಾಲೆಯ ಪ್ರಾಂಶುಪಾಲರಾದ ಜ್ಯೋತಿ ಹಟ್ಟಿ ಕಲ್ , ಶಿಕ್ಷಕರು ಮತ್ತು ವಿದ್ಯಾರ್ಥಿಗಳು ವಿವಿಧ ಯೋಗ ಚಟುವಟಿಕೆಗಳಲ್ಲಿಸಕ್ರಿಯವಾಗಿ ಪಾಲ್ಗೊಂಡರು.