ವಿಕ ಸುದ್ದಿಲೋಕ ಹನುಮಸಾಗರ ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ಮನ್ನೇರಾಳ, ಮುದುಟಗಿ ಗ್ರಾಮಗಳ ರೈತರು ಜೆಸ್ಕಾಂ ಕಚೇರಿಗೆ ಮನವಿ ಸಲ್ಲಿಸಿದರು.
‘‘ಕಳೆದ 8 ದಿನದಿಂದ ಸಮರ್ಪಕ ವಿದ್ಯುತ್ ಪೂರೈಕೆಯಾಗುತ್ತಿಲ್ಲ. 10 ರಿಂದ 15 ನಿಮಿಷಕ್ಕೊಮ್ಮೆ ಲೈನ್ ಟ್ರಿಪ್ ಆಗುತ್ತಿದೆ. ದಿನಕ್ಕೆ 5-6 ಬಾರಿ ವಿದ್ಯುತ್ ಕಡಿತ ಮಾಡಲಾಗುತ್ತಿದ್ದು, ಕೃಷಿ ಚಟುವಟಿಕೆ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಶೀಘ್ರ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು,’’ ಎಂದು ರೈತರು ಆಗ್ರಹಿಸಿದರು.
ಜೆಸ್ಕಾಂ ಶಾಖಾಧಿಕಾರಿ ಮೌಲಾಸಾಬ್ ಮಾತನಾಡಿ, ‘‘ಈ ಭಾಗದಲ್ಲಿಕೃಷಿ ಪಂಪ್ ಸೆಟ್ ಗಳು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಈ ಸಮಸ್ಯೆಯಾಗುತ್ತಿದೆ. ಶೀಘ್ರ ಸಮಸ್ಯೆ ಬಗೆಹರಿಸಲಾಗುವುದು,’’ ಎಂದರು.