First Meteor Impact On Earth Catastrophe Before The Age Of Dinosaurs
ಪೇಜ್ 1 ಫ್ಲೈಯರ್
Contributed by: DHEERAJ K|Vijaya Karnataka•
ಡೈನೋಸಾರ್ ಗೂ ಮೊದಲೇ ಭೂಮಿಗೆ ಅಪ್ಪಳಿಸಿತ್ತು ದೈತ್ಯ ಆಕಾಶಕಾಯ!
ಭೂಮಿಯಲ್ಲಿಡೈನೋಸಾರ್ ಗಳೆಂಬ ದೈತ್ಯ ಜೀವಿಗಳು ವಾಸಿಸುತ್ತಿದ್ದವು. ಒಂದು ದಿನ ಬಾಹ್ಯಾಕಾಶದಿಂದ ಬೃಹತ್ ಉಲ್ಕಾಪಾತವಾಯಿತು. ಆಕಾಶವು ಧೂಳಿನಿಂದ ಮುಚ್ಚಿಹೋಗಿ ಡೈನೋಸಾರ್ ಗಳು ನಿರ್ವಂಶವಾಗಿಹೋದವು ಎಂಬುದು ಈಗಾಗಲೇ ತಿಳಿದಿರುವ ವಿಚಾರ. ಆದರೆ, ಹೊಸ ಸಂಶೋಧನೆಗಳ ಪ್ರಕಾರ ಭುಮಿಯ ಮೇಲೆ ಸಂಭವಿಸಿದ ಮಹಾ ದುರಂತ ಇದೇ ಮೊದಲೇನಲ್ಲ. ಡೈನೋಸಾರ್ ಗಳು ಭೂಮಿಯ ಮೇಲೆ ಕಾಣಿಸಿಕೊಳ್ಳುವುದಕ್ಕೂ ಕೋಟ್ಯಂತರ ವರ್ಷ ಮೊದಲೇ ಭೂಮಿಯಲ್ಲಿಇಂತಹದ್ದೇ ಒಂದು ಭೀಕರ ದುರಂತವೊಂದು ಸಂಭವಿಸಿತ್ತು. ಈ ಬಗ್ಗೆ ಅಧ್ಯಯನ ಮಾಡಿರುವ ಆಸ್ಪ್ರೇಲಿಯಾದ ಕರ್ಟಿನ್ ವಿಶ್ವವಿದ್ಯಾಲಯದ ಸಂಶೋಧಕರು, ವಿಶ್ವದ ಅತ್ಯಂತ ಹಳೆಯ ಉಲ್ಕಾಪಾತದ ಕುಳಿಯ ನಿಖರವಾದ ಸಮಯವನ್ನು ಪತ್ತೆಹಚ್ಚಿದ್ದಾರೆ.ಉಲ್ಕೆ ಬಡಿದದ್ದು ಯಾವಾಗ?
ವಿಜ್ಞಾನಿಗಳ ತಂಡವು ಪಶ್ಚಿಮ ಆಸ್ಪ್ರೇಲಿಯಾದ ಪಿಲ್ಬರಾ ಪ್ರದೇಶದಲ್ಲಿರುವ ‘ನಾತ್ ರ್ ಪೋಲ್ ಡೋಮ್ ’ನ ಬಂಡೆಗಳನ್ನು ಅಧ್ಯಯನ ಮಾಡಿದೆ. ಈ ಪ್ರದೇಶವು ಒಂದು ಪ್ರಾಚೀನ ಉಲ್ಕಾಪಾತ ದ ತಾಣವಾಗಿರಬಹುದು ಎಂಬ ಬಗ್ಗೆ ವರ್ಷಗಳಿಂದ ಚರ್ಚೆಗಳು ನಡೆಯುತ್ತಿದ್ದವು. ಕರ್ಟಿನ್ ನ ಅಥ್ ರ್ ಅಂಡ್ ಪ್ಲಾನೆಟರಿ ಸೈನ್ಸಸ್ ಸಂಸ್ಥೆ ಮತ್ತು ವೆಸ್ಟರ್ನ್ ಆಸ್ಪ್ರೇಲಿಯಾದ ಜಿಯೋಲಾಜಿಕಲ್ ಸರ್ವೆ (ಎಖWಅ) ಸಂಶೋಧಕರು ಸುಧಾರಿತ ಖನಿಜ ಕಾಲನಿರ್ಣಯ ಪದ್ಧತಿಯನ್ನು ಬಳಸಿ, ಈ ಬೃಹತ್ ಘರ್ಷಣೆಗೆ ಸ್ಪಷ್ಟ ಪುರಾವೆಗಳನ್ನು ಕಂಡುಕೊಂಡಿದ್ದಾರೆ. ವರದಿಯ ಪ್ರಕಾರ ಈ ಉಲ್ಕಾಪಾತ ನಡೆದಿದ್ದು 300 ಕೋಟಿ ವರ್ಷಗಳ ಹಿಂದೆ. ಅಂದರೆ, ಡೈನೋಸಾರ್ ಗಳ ಕಾಲಕ್ಕಿಂತಲೂ ಹತ್ತು ಪಟ್ಟು ಹಳೆಯ ಕುಳಿ ಇದು.
ಭೂಮಿಯೇ ಬದಲಾಯಿತು: ವಿಜ್ಞಾನಿಗಳ ಪ್ರಕಾರ, ಅಂದು ನಡೆದ ಆ ಭೀಕರ ಘಟನೆಯೇ ಮುಂದೆ ಭೂಮಿಯ ಪರಿಸರವನ್ನು ಬದಲಾಯಿಸಿತು. ಹಳೆಯ ಜೀವಿಗಳು ನಾಶವಾದ ನಂತರವೇ ಡೈನೋಸಾರ್ ಗಳು ಮತ್ತು ಸಸ್ತನಿಗಳು ಭೂಮಿಯ ಮೇಲೆ ಬೆಳೆದವು. ಅಂದರೆ, ಅಂದು ಆ ಆಕಾಶಕಾಯ ಅಪ್ಪಳಿಸದೇ ಹೋಗಿದ್ದರೆ ಬಹುಶಃ ಭೂಮಿ ಈಗ ಇರುವುದಕ್ಕಿಂತ ಸಂಪೂರ್ಣವಾಗಿ ಭಿನ್ನವಾಗಿರುತ್ತಿತ್ತು.
ಬಾಕ್ಸ್
ಉಲ್ಕೆ ಬಡಿದಾಗ ಏನಾಯಿತು?
ಉಲ್ಕೆ ಭೂಮಿಗೆ ಅಪ್ಪಳಿಸಿದಾಗ ವಾತಾವರಣದಲ್ಲಿಧೂಳು ಮತ್ತು ವಿಷಾನಿಲಗಳು ತುಂಬಿಕೊಂಡು, ಸೂರ್ಯನ ಬೆಳಕು ಭೂಮಿಗೆ ಬೀಳದಂತೆ ತಡೆದವು. ಇದರಿಂದಾಗಿ ಭೂಮಿಯ ಮೇಲೆ ಸುದೀರ್ಘ ಕಾಲದವರೆಗೆ ‘ಕತ್ತಲೆ ಮತ್ತು ಚಳಿ’ ಆವರಿಸಿತು. ಡೈನೋಸಾರ್ ಗಳ ಕಾಲಕ್ಕಿಂತ ಮುಂಚೆ ಬದುಕಿದ್ದ ಶೇಕಡಾ 70ರಿಂದ 80ರಷ್ಟು ವಿಚಿತ್ರ ಮತ್ತು ಪ್ರಾಚೀನ ಜೀವಿಗಳು ಈ ಹವಾಮಾನ ವೈಪರೀತ್ಯವನ್ನು ತಡೆದುಕೊಳ್ಳಲಾರದೆ ನಾಶವಾದವು.