ಟೆಹ್ರಾನ್ : ಅಮೆರಿಕ ನಡೆಸಿದ ದಾಳಿಯಲ್ಲಿಹತರಾದ ಇರಾನ್ ನ ಮಾಜಿ ಪರಮೋಚ್ಚ ನಾಯಕ, ಆಯತೊಲ್ಲಾಅಲಿ ಖಮೇನಿ ಅವರ ಅಂತ್ಯಸಂಸ್ಕಾರದ ವಿಧಿವಿಧಾನಗಳು ಜುಲೈ 5ರಿಂದ 9ರವರೆಗೆ ನಡೆಯಲಿದ್ದು, ಇರಾನ್ ಅಧ್ಯಕ್ಷ ಮಸೂದ್ ಪಜೆಶ್ಕಿಯಾನ್ ಅವರು ಪ್ರಧಾನಿ ಮೋದಿ ಅವರನ್ನು ಅಂತ್ಯಕ್ರಿಯೆಯಲ್ಲಿಭಾಗವಹಿಸಲು ಆಹ್ವಾನಿಸಿದ್ದಾರೆ ಎಂದು ರಾಜತಾಂತ್ರಿಕ ಮೂಲಗಳು ಹೇಳಿವೆ.
ಆದರೆ, ಪ್ರಧಾನಿ ಮೋದಿ ಅವರಿಗೆ ಅಂತ್ಯಸಂಸ್ಕಾರದಲ್ಲಿಭಾಗವಹಿಸಲು ಆಹ್ವಾನ ಬಂದಿರುವುದನ್ನು ಪ್ರಧಾನಿ ಕಚೇರಿ ಖಚಿತಪಡಿಸಿಲ್ಲ.ಅಮೆರಿಕ ಮತ್ತು ಇಸ್ರೇಲ್ ಪಡೆಗಳು ಕಳೆದ ಫೆ.28ರಂದು ಟೆಹ್ರಾನ್ ಮೇಲೆ ನಡೆಸಿದ ವೈಮಾನಿಕ ದಾಳಿಯಲ್ಲಿಖಮೇನಿ ಹತರಾಗಿದ್ದರು. ಇದರ ಬೆನ್ನಲ್ಲೇ ಪಶ್ಚಿಮ ಏಷ್ಯಾ ಸಂಘರ್ಷ ತೀವ್ರಗೊಂಡಿದ್ದರಿಂದ ಅವರ ಅಂತ್ಯಕ್ರಿಯೆಯನ್ನು ಮುಂದೂಡಲಾಗಿತ್ತು. ಟೆಹ್ರಾನ್ ಮತ್ತು ಕೋಮ್ ನಗರದಲ್ಲಿಜುಲೈ 5, 6 ಮತ್ತು 7ರಂದು ಅಂತ್ಯಕ್ರಿಯೆಯ ವಿಧಿಗಳು ನಡೆಯಲಿವೆ. ಖಮೇನಿ ಅವರ ತವರು ಮಶಾದ್ ನಲ್ಲಿಜುಲೈ 9ರಂದು ಅಂತ್ಯಕ್ರಿಯೆ ನಡೆಯಲಿದೆ.