ಅವಿನಾಭಾವ ಕಲೆಕ್ಷನ್ ಮೇಲೆ ಶೇ.0 ಮೇಕಿಂಗ್ ಚಾರ್ಜಸ್ ಆಫರ್

Contributed bygururaja.jd@gmail.com|Vijaya Karnataka
special offer of 0 making charges on avinabhava collection
ಹೊಸ ವಿಳಾಸದಲ್ಲಿಹೊಸ ಸಂಭ್ರಮ : ಶಿವಮೊಗ್ಗದ ದ ಒರಿಜಿನಲ್ ಆಭರಣ

ಅವಿನಾಭಾವ ಕಲೆಕ್ಷನ್ ಮೇಲೆ ಶೇ.0 ಮೇಕಿಂಗ್ ಚಾರ್ಜಸ್ ಆಫರ್
ವಿಕ ಸುದ್ದಿಲೋಕ ಶಿವಮೊಗ್ಗ

ನಗರದ ಕುವೆಂಪು ರಸ್ತೆಯ ಡಾ.ಬಿ.ಆರ್ .ಅಂಬೇಡ್ಕರ್ ವೃತ್ತದ ಬಳಿಯ ನೂತನ ಕಟ್ಟಡಕ್ಕೆ ಸ್ಥಳಾಂತರವಾಗಿರುವ ದ ಒರಿಜಿನಲ್ ಆಭರಣ ತನ್ನ ಗ್ರಾಹಕರಿಗೆ ಜೂ.24ರಿಂದ 26 ರ ವರೆಗೆ ವಿಶೇಷ ಕೊಡುಗೆ ಘೋಷಿಸಿದೆ.

ಅವಿನಾಭಾವ ಕಲೆಕ್ಷನ್ ಸೇರಿದಂತೆ ಸಂಪೂರ್ಣ ಚಿನ್ನ ಮತ್ತು ವಜ್ರಾಭರಣಗಳ ಶ್ರೇಣಿಯ ಮೇಲೆ ಶೇ.0 ಮೇಕಿಂಗ್ ಚಾರ್ಜಸ್ ಸೌಲಭ್ಯವನ್ನು ಗ್ರಾಹಕರು ಪಡೆಯಬಹುದು.

90 ವರ್ಷಗಳ ವಿಶ್ವಾಸ, ಪರಿಶುದ್ಧತೆ ಮತ್ತು ಅಪ್ರತಿಮ ಕರಕುಶಲತೆಯ ಪರಂಪರೆ ಹೊಂದಿರುವ ದ ಒರಿಜಿನಲ್ ಆಭರಣ ತನ್ನ ನೂತನ ಹಾಗೂ ವಿಶಾಲ ಶೋರೂಮ್ ಮೂಲಕ ಜಿಲ್ಲೆಯ ಗ್ರಾಹಕರಿಗೆ ಇನ್ನಷ್ಟು ಐಷಾರಾಮಿ ಹಾಗೂ ಸುಲಭವಾದ ಖರೀದಿ ಅನುಭವ ಒದಗಿಸುತ್ತಿದೆ.

ಮದುವೆ, ಹಬ್ಬ-ಹರಿದಿನಗಳು ಹಾಗೂ ವಿಶೇಷ ಸಂದರ್ಭಗಳಿಗೆ ಚಿನ್ನ ಮತ್ತು ವಜ್ರಾಭರಣ ಖರೀದಿಸುವ ಯೋಜನೆಯಲ್ಲಿಇರುವವರಿಗೆ ಈ ಕೊಡುಗೆಯು ಸುವರ್ಣಾವಕಾಶವಾಗಿದೆ. ಪಾರಂಪರಿಕ ವಿನ್ಯಾಸಗಳಿಂದ ಹಿಡಿದು ಅತ್ಯಾಧುನಿಕ ಆಭರಣಗಳವರೆಗೆ, ವಿಶಾಲ ಸಂಗ್ರಹವನ್ನು ಗ್ರಾಹಕರು ಈ ಸಂದರ್ಭದಲ್ಲಿವೀಕ್ಷಿಸಿ ಖರೀದಿಸಬಹುದು.

ಈ ಕುರಿತು ಮಾತನಾಡಿದ ಸಂಸ್ಥೆಯ ಪ್ರತಿನಿಧಿಧಿಗಳು, ಜಿಲ್ಲೆಯ ಗ್ರಾಹಕರು ನಮ್ಮ ಮೇಲೆ ತೋರಿರುವ ಪ್ರೀತಿ ಮತ್ತು ವಿಶ್ವಾಸಕ್ಕೆ ಕೃತಜ್ಞತೆ ಸಲ್ಲಿಸುವ ಉದ್ದೇಶದಿಂದ ಈ ವಿಶೇಷ ಕೊಡುಗೆ ಪರಿಚಯಿಸಿದ್ದೇವೆ. ನಮ್ಮ ನೂತನ ಶೋರೂಮ್ ನಲ್ಲಿಪ್ರತಿಯೊಬ್ಬ ಗ್ರಾಹಕರಿಗೂ ವಿಶಿಷ್ಟ ಖರೀದಿ ಅನುಭವ ನೀಡಲು ನಾವು ಸದಾ ಬದ್ಧರಾಗಿದ್ದೇವೆ ಎಂದು ತಿಳಿಸಿದ್ದಾರೆ.

ಈ ವಿಶೇಷ ಆಫರ್ ಜೂ.24 ರಿಂದ 26ರ ವರೆಗೆ ಮಾತ್ರ ಲಭ್ಯವಿದ್ದು, ಗ್ರಾಹಕರು ಈ ಅವಕಾಶವನ್ನು ಬಳಸಿಕೊಳ್ಳುವಂತೆ ದ ಒರಿಜಿನಲ್ ಆಭರಣ ಮನವಿ ಮಾಡಿದೆ. ನಿಯಮಗಳು ಮತ್ತು ಷರತ್ತುಗಳು ಅನ್ವಯ ಹಾಗೂ ಕಲ್ಲಿನ ಮೌಲ್ಯ ಮತ್ತು ಜಿಎಸ್ ಟಿ ಹೆಚ್ಚುವರಿಯಾಗಿ ಅನ್ವಯಿಸುತ್ತದೆ ಎಂದು ಪ್ರಕಟಣೆ ತಿಳಿಸಿದೆ.