ವಾಹನ ಮಾಲೀಕರ, ಚಾಲಕರ ಪ್ರತಿಭಟನೆ

Contributed byKashappa.Karadin@timesgroup.com|Vijaya Karnataka
protest by vehicle owners and drivers against fuel price hike and the congress government
ಇಂಧನ ಬೆಲೆ ಏರಿಕೆಗೆ ಖಂಡನೆ* ರಾಜ್ಯ,ಕೇಂದ್ರ ಸರಕಾರದ ವಿರುದ್ಧ ಆಕ್ರೋಶ (ಕಿಕ್ಕರ್ )

ವಾಹನ ಮಾಲೀಕರ, ಚಾಲಕರ ಪ್ರತಿಭಟನೆ (ಹೆಡ್ )
ವಿಕ ಸುದ್ದಿಲೋಕ ಹುಬ್ಬಳ್ಳಿ

ಪೆಟ್ರೋಲ…, ಡೀಸೆಲ…, ಸಿಎನ್ ಜಿ, ಎಲ್ ಪಿಜಿ ಸೇರಿದಂತೆ ಅಡುಗೆ ಅನಿಲದ ಬೆಲೆ ಏರಿಕೆ ಖಂಡಿಸಿ ಸತ್ಯಸಾಯಿಬಾಬಾ ಟ್ಯಾಕ್ಸಿ ಮಾಲೀಕರ, ಚಾಲಕರ ಸೇವಾ ಅಸೋಸಿಯೇಶನ್ ಮತ್ತು ಕರ್ನಾಟಕ ಚಾಲಕರ ಒಕ್ಕೂಟ ಹುಬ್ಬಳ್ಳಿ ತಾಲೂಕು ಘಟಕದಿಂದ ಬುಧವಾರ ನಗರದಲ್ಲಿಪ್ರತಿಭಟನೆ ನಡೆಸಲಾಯಿತು.

ಮೆರವಣಿಗೆ ಮೂಲಕ ತಹಸೀಲ್ದಾರ್ ಕಚೇರಿಗೆ ಆಗಮಿಸಿದ ಪ್ರತಿಭಟನಾಕಾರರು, ಎಲ್ಲಬಗೆಯ ಇಂಧನಗಳ ಬೆಲೆ ಹೆಚ್ಚಳ ಮಾಡಿ ಜನಸಾಮಾನ್ಯರ ಜೀವನದ ಮೇಲೆ ಬರೆ ಎಳೆದ ಕೇಂದ್ರ ಹಾಗೂ ರಾಜ್ಯ ಸರಕಾರದ ವಿರುದ್ಧ ಘೋಷಣೆ ಕೂಗಿದರು. ಇತ್ತೀಚಿನ ದಿನಗಳಲ್ಲಿಇಂಧನ ಬೆಲೆಗಳ ನಿರಂತರ ಏರಿಕೆಯಿಂದ ಟ್ಯಾಕ್ಸಿ, ಗೂಡ್ಸ್ ವಾಹನ, ಟ್ರ್ಯಾಕ್ಟರ್ , ಕಾರು ಮತ್ತು ಆಟೋ ಚಾಲಕರಿಗೆ ತೀವ್ರ ಅನ್ಯಾಯವಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಬೆಲೆ ಏರಿಕೆಯಿಂದ ಸಾಮಾನ್ಯ ಜನರು, ಕಾರ್ಮಿಕರು ಮತ್ತು ಮಧ್ಯಮ ವರ್ಗದ ಕುಟುಂಬಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿವೆ. ದಿನನಿತ್ಯದ ಅಗತ್ಯ ವಸ್ತುಗಳ ಬೆಲೆಯೂ ಗಗನಕ್ಕೇರಿದೆ. ಇದರಿಂದ ಜನರು ಜೀವನ ನಡೆಸುವುದು ಕಷ್ಟವಾಗಿದೆ ಎಂದು ನೋವು ತೋಡಿಕೊಂಡರು.

ಬೆಲೆ ಕಡಿಮೆ ಮಾಡದಿದ್ದರೆ ಸರಕಾರದ ವಿರುದ್ಧ ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ದಾರೆ. ಇದೇ ಸಂದರ್ಭದಲ್ಲಿತಹಸೀಲ್ದಾರ್ ಮೂಲಕ ಸಿಎಂಗೆ ಮನವಿ ಸಲ್ಲಿಸಲಾಯಿತು.

ಮಾಲೀಕರು ಸರಕಾರದ ವಿರುದ್ಧ ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ದಾರೆ. ಶ್ರೀ ಸತ್ಯ ಸಾಯಿಬಾಬಾ ಟ್ಯಾಕ್ಸಿ ಮಾಲೀಕರ ಮತ್ತು ಚಾಲಕರ ಸೇವಾ ಅಸೋಸಿಯೇಶನ್ ಹಾಗೂ ಕರ್ನಾಟಕ ಚಾಲಕರ ಒಕ್ಕೂಟದ ಪದಾಧಿಕಾರಿಗಳು ಹಾಗೂ ವಾಹನಗಳ ಮಾಲೀಕರು, ಚಾಲಕರು ಪ್ರತಿಭಟನೆಯಲ್ಲಿಪಾಲ್ಗೊಂಡಿದ್ದರು.

ಫೊಟೊ: ಸಂತೋಷ ಚಾಲಕರ ಪ್ರೋಟೆಸ್ಟ್

ಪೆಟ್ರೋಲ…, ಡೀಸೆಲ…, ಸಿಎನ್ ಜಿ, ಅಡುಗೆ ಅನಿಲದ ಬೆಲೆ ಏರಿಕೆ ಖಂಡಿಸಿ ಸತ್ಯಸಾಯಿಬಾಬಾ ಟ್ಯಾಕ್ಸಿ ಮಾಲೀಕರ, ಚಾಲಕರ ಸೇವಾ ಅಸೋಸಿಯೇಶನ್ ಮತ್ತು ಕರ್ನಾಟಕ ಚಾಲಕರ ಒಕ್ಕೂಟದ ಸದಸ್ಯರು ಹುಬ್ಬಳ್ಳಿಯಲ್ಲಿಪ್ರತಿಭಟನೆ ನಡೆಸಿದರು.