ವಿಕಸುದ್ದಿಲೋಕ ಕನಕಗಿರಿ‘‘ಹಿಂದೂ ಹಾಗೂ ಮುಸ್ಲಿಂ ಸೌಹಾರ್ದಕ್ಕೆ ಹೆಸರಾಗಿರುವ ಮೊಹರಂ ಹಬ್ಬವನ್ನು ತಾಲೂಕಿನಲ್ಲಿಶಾಂತಿಯುತವಾಗಿ ಆಚರಿಸಬೇಕು,’’ ಎಂದು ಪಿಐ ವಿ.ನಾರಾಯಣ ಹೇಳಿದರು.
ಪಟ್ಟಣದ ಠಾಣೆಯಲ್ಲಿಮೊಹರಂ ಹಬ್ಬದ ನಿಮತ್ತ ನಡೆದ ಸಭೆ ಅಧ್ಯಕ್ಷತೆವಹಿಸಿ ಮಾತನಾಡಿದರು. ಮೊಹರಂ ಹಬ್ಬದಲ್ಲಿಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಬೇಕು. ಅಗತ್ಯ ಪೊಲೀಸ್ ಬಂದೋಬಸ್ ್ತ ಮಾಡಲಾಗಿದೆ.
ಭಾವಕೃತೆಗೆ ಧಕ್ಕೆ ಬರುವಂತಹ ಕೆಲಸ ಮಾಡಬಾರದು ಎಂದು ಹೇಳಿದರು.
ಪಿಎಸ್ ಐ ಉಮೇಶ ಮಾತನಾಡಿ, ಸೌಹಾರ್ದಯಿಂದ ಹಬ್ಬ ಆಚರಣೆ ಮಾಡೋಣ,ಕಾನೂನು ವ್ಯವಸ್ಥೆಯಲ್ಲಿಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿಹಬ್ಬ ಆಚರಿಸಬೇಕು ಎಂದು ತಿಳಿಸಿದರು.
ಪ್ರಮುಖರಾದ ಅಯ್ಯನಗೌಡ ಮಾತನಾಡಿದರು.
ಪೋಲಿಸ್ ಇಲಾಖೆ ಸಿಬಂಧಿ ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
22ಕೆಎನ್ ಕೆಫೋಟೋ-1
ಮೊಹರಂ ನಿಮತ್ತ ಕನಕಗಿರಿ ಪೋಲಿಸ್ ಠಾಣೆಯಲ್ಲಿಸಾರ್ವಜನಿಕರ ಪೂರ್ವಭಾವಿ ಸಭೆ ನಡೆಯಿತು.