ಮೊಹರಂ ಹಬ್ಬಕ್ಕೆ ಸಕಲ ಸಿದ್ಧತೆ
Contributed by: nagarajvk43@gmail.com|Vijaya Karnataka•
ಮೊಹರಂ ಹಬ್ಬಕ್ಕೆ ಸಕಲ ಸಿದ್ಧತೆ
ವಿಕ ಸುದ್ದಿಲೋಕ ಕುಕನೂರುಕುದರಿಮೋತಿ ಗ್ರಾಮದಲ್ಲಿನಡೆಯಲಿರುವ ಮೊಹರಂ ಹಬ್ಬವನ್ನು ಎಲ್ಲ ಸಮಾಜದವರಕೊಡಿಕೊಂಡು ಆಚರಣೆ ಮಾಡಬೇಕೆಂದು ಪಿಎಸ್ ಐ ಗುರುರಾಜ ಹೇಳಿದರು.
ತಾಲೂಕಿನ ಕುದರಿಮೋತಿ ಗ್ರಾಮದಲ್ಲಿಮೊಹರಂ ಹಬ್ಬದ ನಡೆದ ಶಾಂತಿಸಭೆಯಲ್ಲಿಮಾತನಾಡಿದರು. ಸಾರ್ವಜನಿಕರು ಕಾನೂನು ಸುವ್ಯವಸ್ಥೆ ಕಾಪಾಡಲು ಸಹಕರಿಸಬೇಕು.
ವದಂತಿಗಳಿಗೆ ಕಿವಿಗೊಡದೆ ಪರಸ್ಪರ ಸಹಬಾಳ್ವೆ ಮತ್ತು ಸಹೋದರತ್ವದ ಮನೋಭಾವದಿಂದ ಹಬ್ಬವನ್ನು ಆಚರಿಸಬೇಕು.
ಗ್ರಾಮದ ದಳಪತಿ ಹನಮಗೌಡ ಪೊ.ಪಾಟೀಲ್ ಮಾತನಾಡಿ, ‘‘ಗ್ರಾಮಸ್ಥರು ಹಾಗೂ ಯುವಕರು ಪೊಲೀಸ್ ಇಲಾಖೆಯೊಂದಿಗೆ ಕೈಜೋಡಿಸಬೇಕು. ಮೊಹರಂ ಹಬ್ಬವನ್ನು
ಯಶಸ್ವಿಯಾಗಿ ನಡೆಸಲು ಸಹಕರಿಸಬೇಕು. ಗ್ರಾಮದ ಹಿರಿಯರು, ಯುವಕರು ಜಗಳ ಮತ್ತು ಗಲಾಟೆ ಮಾಡಲ್ಲ,’’ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿಸಂಗನಗೌಡ, ವೇಷಗಾರ ಸಮಾಜದ ಮುಖಂಡರಾದ ಚಿನ್ನಪ್ಪ, ದುರಗಪ್ಪ ದೊಪಂ, ಚಂದಪ್ಪ, ರಮೇಶ, ಮಂಜುನಾಥ ಗಟ್ಟೆಪ್ಪನವರ್ , ಗ್ರಾಮದ ಮುಖಂಡ ಬಸಪ್ಪ ದೊಡ್ಡಮನಿ,
ಸುಭಾಷ್ ಈಡಿಗೇರ, ಖಾಸೀಮ್ ಮಾಕಾಂದರ್ , ಗ್ರಾ.ಪಂ ಮಾಜಿ ಸದಸ್ಯರಾದ ಮಾಬುಸಾಬ ಮಕಂದಾರ್ , ಶರಣಯ್ಯ ಜಂಗಮೂರು, ರವಿ ಕಟಗಿ ಇದ್ದರು .
ಧಿ-
ಕೆಪಿಎಲ್ 22ಕೆಕೆಎನ್ ಪೋಟೊ: 2 ಕುಕನೂರು ತಾಲೂಕಿನ ಕುದರಿಮೋತಿ ಗ್ರಾಮದಲ್ಲಿನಡೆದ ಶಾಂತಿಸಭೆಯಲ್ಲಿಪಿಎಸ್ ಐ ಗುರುರಾಜ ಮಾತನಾಡಿದರು.
ಧಿ-