ಕೊಪ್ಪಳ: ಕೊಪ್ಪಳ ವಿಶ್ವವಿದ್ಯಾಲಯಕ್ಕೆ ಸಂಯೋಜಿತ ಕಾಲೇಜುಗಳ ಇಬ್ಬರು ಪ್ರಾಚಾರ್ಯರನ್ನು ವಿಶ್ವವಿದ್ಯಾಲಯದ ಸಿಂಡಿಕೇಟ್ ಪ್ರಾಧಿಕಾರದ ಸದಸ್ಯರನ್ನಾಗಿ ಸೋಮವಾರ ನಾಮನಿರ್ದೇಶನ ಮಾಡಲಾಗಿದೆ. ಕುಲಪತಿಗಳ ಅನುಮೋದನೆಯಂತೆ ಒಂದು ವರ್ಷದ ಅವಧಿಗೆ ತಾವರಗೇರಾ ಗ್ರಾಮದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ.ಬಿ.ವೆಂಕಟೇಶ, ಗಂಗಾವತಿ ನಗರದ ಕೊಲ್ಲಿನಾಗೇಶ್ವರರಾವ್ ಗಂಗಯ್ಯ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ. ಶಿವರಾಜ ಜಿ. ಗುರಿಕಾರ ಅವರನ್ನು ನಾಮನಿರ್ದೇಶನ ಮಾಡಲಾಗಿದೆ ಎಂದು ವಿಶ್ವವಿದ್ಯಾಲಯದ ಅಧಿಸೂಚನೆಯಲ್ಲಿತಿಳಿಸಲಾಗಿದೆ.ಧಿಧಿ