ವಿದ್ಯುತ್ ಸರಬರಾಜು ಖಾಸಗಿಕರಣ ವಿರೋಧಿಸಿ ಮನವಿ

Contributed bysidramappasn@gmail.com|Vijaya Karnataka
strong opposition to power privatization in karnataka
ವಿದ್ಯುತ್ ಸರಬರಾಜು ಖಾಸಗಿಕರಣ ವಿರೋಧಿಸಿ ಮನವಿ

ವಿಕ ಸುದ್ದಿಲೋಕ ತರೀಕೆರೆ
ರಾಜ್ಯದಲ್ಲಿವಿದ್ಯುತ್ ವಿತರಣೆ ಮಾಡಲು ಟಾಟಾ ಪವರ್ ಕಂಪನಿಯು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ ಅರ್ಜಿ ಸಲ್ಲಿಸಿದ್ದು, ಆಯೋಗವು ಆ ಮನವಿಯನ್ನು ತಿರಸ್ಕರಿಸಬೇಕೆಂದು ತಾಲೂಕು ಮುದ್ರಕರ ಸಂಘದ ವತಿಯಿಂದ ಉಪವಿಭಾಗಾಧಿಕಾರಿ ಎನ್ .ವಿ.ನಟೇಶ್ ಅವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.

ರಾಜ್ಯದಲ್ಲಿಈಗಾಗಲೇ ಸರಕಾರಿ ಸ್ವಾಮ್ಯದಲ್ಲಿರುವ ಎಲ್ಲವಿದ್ಯುತ್ ವಿತರಣಾ ಕಂಪನಿಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ನೌಕರರಿಗೆ, ಗ್ರಾಹಕರಿಗೆ, ಸಾರ್ವಜನಿಕರಿಗೆ, ರೈತರಿಗೆ, ಕೈಗಾರಿಕೋದ್ಯಮಿಗಳಿಗೆ ಉತ್ತಮ ಸೇವೆ ನೀಡಲಾಗುತ್ತಿದೆ ಎಂದರು.

ಖಾಸಗಿಯವರಿಗೆ ವಿದ್ಯುತ್ ವಿತರಿಸಲು ಅವಕಾಶಕೊಟ್ಟರೆ ಸರಕಾರದ ನಿಯಂತ್ರಣವಿಲ್ಲದೇ, ನೌಕರರಿಗೆ, ಸಾರ್ವಜನಿಕರಿಗೆ, ರೈತರಿಗೆ, ಕೈಗಾರಿಕೋದ್ಯಮಿಗಳಿಗೆ ಅನ್ಯಾಯವಾಗುತ್ತದೆ ಎಂದು ಮನವಿಯಲ್ಲಿತಿಳಿಸಿದ್ದಾರೆ.

ತಾಲೂಕು ಮುದ್ರಕರ ಸಂಘದ ಅಧ್ಯಕ್ಷ ಟಿ.ಎಸ್ . ಕುಮಾರಸ್ವಾಮಿ, ಪದಾಧಿಕಾರಿಗಳಾದ ಹರೀಶ್ , ಖಲೀಲ್ ಅಹ್ಮದ್ , ಅರುಣ್ ಮೋಸಸ್ , ಜಿ.ರಮೇಶ್ , ಪ್ರೀತಮ್ ಇದ್ದರು.

23ತರೀಕೆರೆ2 :

ತರೀಕೆರೆಯಲ್ಲಿವಿದ್ಯುತ್ ಸರಬರಾಜು ಖಾಸಗೀಕರಣ ವಿರೋಧಿಸಿ ತಾಲೂಕು ಮುದ್ರಕರ ಸಂಘದ ವತಿಯಿಂದ ಉಪವಿಭಾಗಾಧಿಕಾರಿ ಎನ್ .ವಿ.ನಟೇಶ್ ಅವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.