‘ಪ್ರಾಯೋಗಿಕ ಜ್ಞಾನ ಅವಶ್ಯ’

Contributed bymandalamari84@gmail.com|Vijaya Karnataka
the importance of practical knowledge highlighted in the honor ceremony
‘ಪ್ರಾಯೋಗಿಕ ಜ್ಞಾನ ಅವಶ್ಯ’

ವಿಕ ಸುದ್ದಿಲೋಕ ಕುಷ್ಟಗಿ
‘‘ ಐಟಿಐ ವಿದ್ಯಾರ್ಥಿಗಳು ತಾಂತ್ರಿಕ ಶಿಕ್ಷಣದೊಂದಿಗೆ ಅಪ್ರೆಂಟಿಸ್ ಶಿಪ್ ತರಬೇತಿ ಪೂರ್ಣಗೊಳಿಸಿದರೆ ಉತ್ತಮ ಉದ್ಯೋಗಾವಕಾಶ ದೊರೆಯುತ್ತವೆ,’’ಎಂದು ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ಉಪನಿರ್ದೇಶಕ ಗವಿಶಂಕರ್ ಕೆ. ಹೇಳಿದರು.

ಪಟ್ಟಣದ ಸಜ್ಜಲ ಕೈಗಾರಿಕೆ ತರಬೇತಿ ಸಂಸ್ಥೆಯಲ್ಲಿಹನುಮನಾಳ ಸರ್ .ಎಂ.ವಿಶ್ವೇಶ್ವರಯ್ಯ ಐಟಿಐ ಕಾಲೇಜಿನ ಸಹಯೋಗದಲ್ಲಿಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿಮಾತನಾಡಿದರು.

ಸಜ್ಜಲ ಐಟಿಐ ಕಾಲೇಜಿನ ಪ್ರಾಂಶುಪಾಲ ಶ್ರೀಕಾಂತ ಶೇಖರಯ್ಯ ಸರಗಣಾಚಾರಿ ಮಾತನಾಡಿ, ‘‘ಐಟಿಐ ಶಿಕ್ಷಣ ಪಠ್ಯ ಆಧಾರಿತವಾಗಿರದೇ ಪ್ರಾಯೋಗಿಕ ತರಬೇತಿ ಮೇಲೆ ಹೆಚ್ಚು ಅವಲಂಬಿತವಾಗಿದೆ. ವಿದ್ಯಾರ್ಥಿಗಳು ನಿತ್ಯ ತರಗತಿ ಹಾಗೂ ಪ್ರಾಯೋಗಿಕ ತರಬೇತಿಯಲ್ಲಿಭಾಗಿಯಾಗುವುದರಿಂದ ಸಮಗ್ರ ಜ್ಞಾನ ಹೊಂದಬಹುದು,’’ ಎಂದರು.

ಹನುಮನಾಳ ಸರ್ .ಎಂ.ವಿಶ್ವೇಶ್ವರಯ್ಯ ಐಟಿಐ ಕಾಲೇಜಿನ ಪ್ರಾಂಶುಪಾಲ ವೀರಪ್ಪ ಸಂಗಮದ, ದ್ಯಾಮಣ್ಣ ನಾಯಕ, ರಂಗಪ್ಪ, ಪ್ರವೀಣ ಚಿಕ್ಕನವರ, ಈಶಪ್ಪ, ವೀರೇಶ ಸರಗಣಾಚಾರಿ ಸೇರಿ ಇತರರಿದ್ದರು.

* ಫೋಟೋ ಶೀರ್ಷಿಕೆ 22 ಕೆಎಸ್ ಟಿ ಪಿ02

ಕುಷ್ಟಗಿ ಪಟ್ಟಣದ ಸಜ್ಜಲ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿಹಮ್ಮಿಕೊಂಡಿದ್ದ ಸಮಾರಂಭದಲ್ಲಿಗವಿಶಂಕರ್ ಕೆ. ಅವರನ್ನು ಸನ್ಮಾನಿಸಲಾಯಿತು.