ವಿಕ ಸುದ್ದಿಲೋಕ ಶೃಂಗೇರಿಯಮ, ನಿಯಮ, ಆಸನ, ಪ್ರಾಣಾಯಾಮ ಹಾಗೂ ಧ್ಯಾನ ಯೋಗದ ಪ್ರಮುಖ ಅಂಗವಾಗಿದೆ ಎಂದು ಶ್ರೀ ಶಾರದಾ ಧನ್ವಂತರಿ ಆಯುರ್ವೇದ ಆಸ್ಪತ್ರೆ ವೈದ್ಯ ಡಾ.ಸುಹಾಸ್ ಹೇಳಿದರು.
ಶ್ರೀ ಶಾರದಾ ಧನ್ವಂತರಿ ಆಸ್ಪತ್ರೆ ಮತ್ತು ನರ್ಸಿಂಗ್ ಕಾಲೇಜು ಜಂಟಿ ಆಶ್ರಯದಲ್ಲಿವಿಶ್ವ ಯೋಗ ದಿನಾಚರಣೆ ಅಂಗವಾಗಿ ಭಾನುವಾರ ಏರ್ಪಡಿಸಿದ್ದ ವಿಶ್ವ ಯೋಗ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಯಮ ಎಂದರೆ ಸಾಮಾಜಿಕ ಶಿಸ್ತು, ನಿಯಮ ಎಂದರೆ ವೈಯುಕ್ತಿಕ ಶಿಸ್ತು, ಆಸನಗಳು ದೇಹವನ್ನು ಯಾವುದೇ ಸ್ಥಿತಿಯಲ್ಲೂಆರಾಮದಾಯಕವಾಗಲು ಸಹಕಾರಿಯಾಗಿರುತ್ತದೆ. ಪ್ರಾಣಾಯಾಮ ಉಸಿರಾಟದ ಅವಧಿಯನ್ನು ವಿಸ್ತರಿಸುವ ಮೂಲಕ ದೇಹದ ಜೀವ ಕೋಶಗಳಿಗೆ ಹೆಚ್ಚಿನ ಆಮ್ಲಜನಕ ಪೂರೈಕೆ ಮಾಡುತ್ತದೆ. ಇದರಿಂದ ಜೀವಕೋಶಗಳ ಶುದ್ಧೀಕರಣದ ಜತೆಗೆ ಉಸಿರಾಟದ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಲು ಸಾಧ್ಯ ಎಂದರು.
ಧ್ಯಾನ ಎಂಬುದು ಧೀ ಮತ್ತು ಯಾನ ಎಂಬ ಎರಡು ಪದದಿಂದ ಕೂಡಿದೆ. ಬುದ್ಧಿಯ ಮೂಲಕ ಆಂತರಿಕ ಪಯಣ ನಡೆಸುವ ಪ್ರಕ್ರಿಯೆ ಆಗಿದೆ. ಇದು ಮನಸ್ಸಿಗೆ ಸ್ಪಷ್ಠತೆ, ಏಕಾಗ್ರತೆ ಹಾಗೂ ಅಜ್ಞಾನ ವಿಷಯವನ್ನು ಅರ್ಥ ಮಾಡಿಕೊಳ್ಳುವ ಸಾಮಾರ್ಥ್ಯ ನೀಡುತ್ತದೆ ಎಂದರು.
ತರಬೇತುದಾರರಾದ ಪದ್ಮಿನಿ ಹಾಗೂ ವರ್ಷ ನೇತೃತ್ವದಲ್ಲಿಯೋಗ ತರಬೇತಿ ನಡೆಯಿತು. ನರ್ಸಿಂಗ್ ಸಂಸ್ಥೆ ಪ್ರಾಂಶುಪಾಲ ಅಬ್ರಹಾಂ ಹಾಗೂ ಪ್ರೊ.ಕಾರ್ತಿಕ್ ಇದ್ದರು.
22ಶ್ರೀ3-ಶೃಂಗೇರಿ ನರ್ಸಿಂಗ್ ಕಾಲೇಜಿನಲ್ಲಿವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಡಾ.ಸುಹಾಸ್ ಉದ್ಘಾಟಿಸಿದರು.