ಪ್ರತಿಭಾನ್ವೇಷಣೆ ಪರೀಕ್ಷೆ, 15 ವಿದ್ಯಾರ್ಥಿಗಳು ಆಯ್ಕೆ
----
ವಿಕ ಸುದ್ದಿಲೋಕ ಸಂತೆಬೆನ್ನೂರು
ಸರಕಾರಿ ಪ್ರೌಢಶಾಲೆ ಶಿಕ್ಷಕರ ಕಾಳಜಿಯಿಂದ ರಾಜ್ಯ ಮಟ್ಟದ ಎನ್ ಎಂಎಂಎಸ್ 2025-26ರ ರಾಷ್ಟ್ರೀಯ ಪ್ರತಿಭಾನ್ವೇಷಣೆ ಪರೀಕ್ಷೆಯಲ್ಲಿಚನ್ನಗಿರಿ ತಾಲೂಕಿನ ಸಂತೆಬೆನ್ನೂರು ಕೆಪಿಎಸ್ ಶಾಲೆ ಉತ್ತಮ ಫಲಿತಾಂಶ ಪಡೆದು ಜಿಲ್ಲೆಗೆ ಮಾದರಿಯಾಗಿದೆ.
ಈಗಾಗಲೇ ರಾಜ್ಯಕ್ಕೆ ತೃತೀಯ ರಾರ ಯಂಕ್ ಪಡೆದು ಗಮನ ಸೆಳೆದಿದ್ದ ಶಾಲೆಯ ಬಿಂದುಶ್ರೀ, ಸ್ಪೂರ್ತಿ, ಸಿಂಚನಾ, ಗೌತಮ್ , ಪುಷ್ಪ, ದಿವ್ಯ, ತುಳಸಿ, ಇಂಚರ, ಖಲಿದಾ ಖಾನಂ, ಮನುಶ್ರೀ, ವರ್ಷ, ಅಮೂಲ್ಯ, ವರುಣ್ , ವಿಶ್ವನಾಥ್ ಹಾಗೂ ಅಂಜಲಿ ಒಟ್ಟು 15 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿಆಯ್ಕೆಯಾಗಿದ್ದಾರೆ.
ಸರಕಾರಿ ಶಾಲೆಯಲ್ಲಿಆಗಸ್ಟ್ ತಿಂಗಳಿಂದ ಸತತ ಐದು ತಿಂಗಳು 50 ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದು, ಸಮಾಜ ಶಿಕ್ಷಕ ಮಲ್ಲೇಶ್ , ವಿಜ್ಞಾನ ಮತ್ತು ಗಣಿತ ವಿಷಯ ಶಿಕ್ಷಕ ದ್ಯಾಮೇಶ್ ಹಾಗೂ ಮಾನಸಿಕ ಸಾಮರ್ಥ್ಯ ಜಗದೀಶ್ ವಿಶೇಷವಾಗಿ ತರಬೇತಿ ನೀಡಿದ್ದಾರೆ ಹಾಗೂ ಉಪಪ್ರಾಶುಪಾಲ ಯು.ಸಿದ್ದೇಶ್ ಹಾಗೂ ಶಿಕ್ಷಕರ ವೃಂದದವರು ಗ್ರಾಮೀಣ ಮಕ್ಕಳು ಈ ಪರೀಕ್ಷೆ ಬರೆಯಲು ಪ್ರೇರಣೆ ನೀಡಿದ್ದಾರೆ.
ಪರೀಕ್ಷೆಯಲ್ಲಿ8ನೇ ತರಗತಿ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶವಿದೆ. ಸಾಮಾನ್ಯ ಬೌದ್ಧಿಕ ಸಾಮರ್ಥ್ಯ ಪರೀಕ್ಷೆ ಹಾಗೂ ವ್ಯಾಸಂಗಿಕ ಪ್ರವೃತ್ತಿ ಪರೀಕ್ಷೆಯ ಎರಡು ಪೇಪರ್ ನ ಒಟ್ಟು 180 ಅಂಕಗಳಿಗೆ ಈ ಪರೀಕ್ಷೆ ನಡೆಯುತ್ತದೆ. ಆಯ್ಕೆಯಾದವರಿಗೆ ಮುಂದಿನ 4 ವರ್ಷ ಸರಕಾರ ಮಾಸಿಕ ಒಂದು ಸಾವಿರ ರೂ. ಪ್ರೋತ್ಸಾಹ ಧನ ನೀಡುತ್ತದೆ. ಸಂತೆಬೆನ್ನೂರು ಕೆಪಿಎಸ್ ಶಾಲೆಯ ಶಿಕ್ಷಕರಿಗೆ ಆಡಳಿತ ಮಂಡಳಿ ಹಾಗೂ ಗ್ರಾಮಸ್ಥರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
====
ಜೀಮ್ಯಾಟ್ ಮತ್ತು ಸ್ಯಾಟ್ ನಲ್ಲಿನಮಗೆ ವಿಶೇಷ ತರಬೇತಿ ನೀಡಿದ್ದರಿಂದ ನಾನು ಆಯ್ಕೆಯಾಗಿದ್ದೇನೆ. ನಮ್ಮ ಕೆಪಿಎಸ್ ಶಾಲೆಯ ಶಿಕ್ಷಕರಿಗೆ ಧನ್ಯವಾದ.
-ಮನುಶ್ರೀ, ವಿದ್ಯಾರ್ಥಿನಿ, ಕೆಪಿಎಸ್ ಶಾಲೆ ಸಂತೆಬೆನ್ನೂರು.
----
ಎನ್ ಎಂಎಂಎಸ್ ಪರೀಕ್ಷೆಯಲ್ಲಿಚನ್ನಗಿರಿ ತಾಲೂಕಿನ 61 ವಿದ್ಯಾರ್ಥಿಗಳು ಆಯ್ಕೆಯಾಗಿ ಸತತ ಮೂರನೇ ವರ್ಷ ಜಿಲ್ಲೆಗೆ ಪ್ರಥಮ ಸ್ಥಾನದಲ್ಲಿದೆ. ಸಂತೆಬೆನ್ನೂರು ಕೆಪಿಎಸ್ ಶಾಲೆಯಲ್ಲಿ15 ವಿದ್ಯಾರ್ಥಿಗಳು ಆಯ್ಕೆಯಾಗಿ, ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದು, ಸ್ಪರ್ಧಾತ್ಮಕ ಪರೀಕ್ಷೆಗೆ ಭೂನಾದಿಯಾಗಿದೆ. ಮಕ್ಕಳಿಗೆ ಹಾಗೂ ತರಬೇತಿ ನೀಡಿದ ಶಿಕ್ಷಕರಿಗೆ ಶಿಕ್ಷಣ ಇಲಾಖೆ ಅಭಿನಂದಿಸಿದೆ.
-ಎಲ್ .ಜಯಪ್ಪ, ಬಿಇಒ ಚನ್ನಗಿರಿ.
---
05ಎಸ್ ಬಿಆರ್ 02
ಎನ್ ಎಂಎಂಎಸ್ ಪರೀಕ್ಷೆಯಲ್ಲಿಆಯ್ಕೆಯಾದ ಸಂತೆಬೆನ್ನೂರು ಕೆಪಿಎಸ್ ಶಾಲೆ 15 ವಿದ್ಯಾರ್ಥಿಗಳು.

