ಶೇ.96.55 ಮ್ಯಾಪಿಂಗ್ ಪೂರ್ಣ

Contributed byprakashbabbur@gmail.com|Vijaya Karnataka

ಹಿರಿಯೂರು ವಿಧಾನಸಭಾ ಕ್ಷೇತ್ರದ ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ ಪ್ರಗತಿಯಲ್ಲಿದೆ. ಮ್ಯಾಪಿಂಗ್‌ ಶೇ.96.55ರಷ್ಟು ಪೂರ್ಣಗೊಂಡಿದೆ. 2026ರ ಮತದಾರರ ಪಟ್ಟಿಗಾಗಿ ಸಿದ್ಧತೆ ನಡೆಯುತ್ತಿದೆ. ಅರ್ಹ ಮತದಾರರ ಹೆಸರು ಸೇರ್ಪಡೆಗೆ ಅವಕಾಶವಿದೆ. ಕರಡು ಪಟ್ಟಿ ಆಗಸ್ಟ್‌ 5ರಂದು ಪ್ರಕಟವಾಗಲಿದೆ. ಅಂತಿಮ ಪಟ್ಟಿ ಅಕ್ಟೋಬರ್‌ 7ರಂದು ಪ್ರಕಟವಾಗಲಿದೆ. ಮತದಾರರ ಪಟ್ಟಿಯನ್ನು ನಿಖರಗೊಳಿಸುವ ಗುರಿ ಇದೆ.

9655 voter list revision successful in hiryur constituency

ಶೇ.96.55 ಮ್ಯಾಪಿಂಗ್ ಪೂರ್ಣ

ವಿಕ ಸುದ್ದಿಲೋಕ ಹಿರಿಯೂರು

ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್ ಐಆರ್ ) ಕಾರ್ಯದ ಮ್ಯಾಪಿಂಗ್ ಪ್ರಕ್ರಿಯೆ ಶೇ.96.55ರಷ್ಟು ಪ್ರಗತಿ ಕಂಡಿದೆ ಎಂದು ಮತದಾರರ ನೋಂದಣಾಧಿಕಾರಿ ವೆಂಕಟೇಶ್ ನಾಯ್ ್ಕ ಹೇಳಿದರು.

ಇಲ್ಲಿನ ತಾಲೂಕು ಕಚೇರಿ ಸಭಾಂಗಣದಲ್ಲಿಗುರುವಾರ ನಡೆದ ಎಸ್ ಐಆರ್ 2026ರ ಕುರಿತ ಸಭೆ ಅಧ್ಯಕ್ಷತೆ ಮಾತನಾಡಿ, ಕ್ಷೇತ್ರದಲ್ಲಿ2002ರ ಅಂಕಿ ಅಂಶ ಪ್ರಕಾರ 2,04,795 ಮತದಾರರಿದ್ದರು. 2026ರ ಪಟ್ಟಿಯಂತೆ ಒಟ್ಟು 2,51,353 ಮತದಾರರಿದ್ದಾರೆ ಎಂದರು.

2002ರ ಮತದಾರರ ಪಟ್ಟಿಗೆ 2025ರ ಮತದಾರರ ಪಟ್ಟಿ ಮ್ಯಾಪಿಂಗ್ ಮಾಡಿರುವ ಅಂಕಿಅಂಶಗಳ ಪ್ರಕಾರ 2,42,864 ಮತದಾರರನ್ನು ಮ್ಯಾಪಿಂಗ್ ಮಾಡಿದ್ದು, 8669 ಮತದಾರರ ಮ್ಯಾಪಿಂಗ್ ಮಾಡಲು ಬಾಕಿ ಇದೆ. ಎಸ್ ಐಆರ್ ಎಂಬುದು ಮತದಾರರ ಪಟ್ಟಿಯ ಸಂಪೂರ್ಣ ನವೀಕರಣ ಪ್ರಕ್ರಿಯೆಯಾಗಿದ್ದು, ಆ ಮೂಲಕ ಪ್ರತಿ ಮತದಾರನ ಅರ್ಹತೆ ಪರಿಶೀಲಿಸಿ ದೃಢೀಕರಿಸಲಾಗುತ್ತದೆ. ಇದಕ್ಕೆ ಎಲ್ಲಮತದಾರರು ಸಹಕರಿಸಬೇಕು ಎಂದು ಕೋರಿದರು.

ಪ್ರತಿಯೊಬ್ಬ ಅರ್ಹ ನಾಗರಿಕರಿಗೆ ಮತದಾನದ ಹಕ್ಕು ನೀಡುವುದು ಹಾಗೂ ಮತದಾರರ ಪಟ್ಟಿ ಶುದ್ಧತೆ ಕಾಪಾಡುವುದು, ಮರಣ ಹೊಂದಿದ, ಸ್ಥಳಾಂತರಗೊಂಡ ಅಥವಾ ಅನರ್ಹರ ಹೆಸರನ್ನು ಪಟ್ಟಿಯಿಂದ ತೆಗೆಯುವುದು, ಆ ಮೂಲಕ ಮತದಾರರ ಪಟ್ಟಿಯನ್ನು ಹೆಚ್ಚು ನಿಖರ ಹಾಗೂ ದೋಷರಹಿತವಾಗಿಸುವುದು ಈ ಪ್ರಕ್ರಿಯೆ ಉದ್ದೇಶವಾಗಿದೆ. ಚುನಾವಣೆ ಆಯೋಗ ನಿಗದಿಪಡಿಸಿದಂತೆ ಜೂ.20ರಿಂದ 29ರವರೆಗೆ ಪೂರ್ವ ಸಿದ್ಧತೆ, ತರಬೇತಿ, ಮುದ್ರಣ, ಜೂ.30ರಿಂದ ಜುಲೈ 29ರವರೆಗೆ ಬಿಎಲ್ ಒ ನೇತೃತ್ವದಲ್ಲಿಮನೆ ಮನೆ ಭೇಟಿ, ಆಗಸ್ಟ್ 5ರಂದು ಕರಡು ಮತದಾರರ ಪಟ್ಟಿ ಪ್ರಕಟ, ಸೆಪ್ಟೆಂಬರ್ 4ರವರೆಗೆ ಆಕ್ಷೇಪಣೆ ಸಲ್ಲಿಕೆಗೆ ಅವಕಾಶವಿದ್ದು, ಅಕ್ಟೋಬರ್ 7ರಂದು ಮತದಾರರ ಅಂತಿಮ ಪಟ್ಟಿ ಪ್ರಕಟಿಸಲಾಗುವುದು ಎಂದು ಮಾಹಿತಿ ನೀಡಿದರು.

ಬಿಎಲ್ ಒಗಳು ಪ್ರತಿ ಮನೆಗೆ ಕನಿಷ್ಠ ಮೂರು ಬಾರಿ ಭೇಟಿ ನೀಡುತ್ತಾರೆ. ಮೊದಲ ಬಾರಿ ಮತದಾರರಿಗೂ ಗಣತಿ ನಮೂನೆ ವಿತರಿಸಿ, ಎರಡನೇ ಭೇಟಿಯಲ್ಲಿಭರ್ತಿ ಮಾಡಿದ ನಮೂನೆಗಳನ್ನು ಸಂಗ್ರಹಿಸುತ್ತಾರೆ. ಮೂರನೇ ಭೇಟಿಯಲ್ಲಿಬೀಗ ಹಾಕಿದ ಮನೆಗಳಿಗೆ ಭೇಟಿ ನೀಡಿ ಭರ್ತಿ ಮಾಡಿದ ನಮೂನೆಗಳನ್ನು ಸಂಗ್ರಹಿಸುತ್ತಾರೆ ಎಂದರು.

ತಹಸೀಲ್ದಾರ್ ಎಂ.ಸಿದ್ದೇಶ್ ಮಾತನಾಡಿ 18 ವರ್ಷ ತುಂಬಿದ ಎಲ್ಲಸಾರ್ವಜನಿಕರು ಪಟ್ಟಿಯಲ್ಲಿಹೆಸರು ಸೇರಿಸಲು ಹಾಗೂ ಅಗತ್ಯ ತಿದ್ದುಪಡಿ ಮಾಡಿಸಿಕೊಳ್ಳಲು ಅವಕಾಶವಿದೆ ಎಂದರು. ಬಿಇಒ ಸಿ.ಎಂ.ತಿಪ್ಪೇಸ್ವಾಮಿ, ನಗರಸಭೆ ಎಇಇ ಸುನೀಲ್ , ನಾನಾ ಪಕ್ಷಗಳ ಮುಖಂಡರು ಇದ್ದರು.

--

4 ಪಿಎಚ್ ವೈಆರ್ 1

ಹಿರಿಯೂರು ತಾಲೂಕು ಕಚೇರಿ ಸಭಾಂಗಣದಲ್ಲಿಗುರುವಾರ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ 2026ರ ಕುರಿತು ನಡೆದ ಸಭೆಯಲ್ಲಿವಿಶೇಷ ಭೂಸ್ವಾಧೀನ ಅಧಿಕಾರಿ ವೆಂಕಟೇಶ್ ನಾಯ್ ್ಕ ಮಾತನಾಡಿದರು.