ಇಂಟ್ರೊ- ಎಐ ಕ್ಷೇತ್ರದಲ್ಲಿಗಣನೀಯ ಪ್ರಗತಿ, ಊಹೆಗೂ ನಿಲುಕದ ಸಾಧ್ಯಾಸಾಧ್ಯತೆಗಳು ಹೊರಬೀಳುತ್ತಿವೆ. ಇದೇ ಸಮಯದಲ್ಲಿಎಐ ಸಂಸ್ಥೆಗಳು ಆತ್ಮಾವಲೋಕನ ಮಾಡಿಕೊಳ್ಳುತ್ತಿರುವ ಉತ್ತಮ ಬೆಳವಣಿಗೆ ಕಂಡುಬಂಡಿದೆ. ಅವು ಸಾಮಾಜಿಕ ವ್ಯವಸ್ಥೆಗೆ ಪೂರಕವಾಗಿ ಸ್ಪಂದಿಸುವ ಪ್ರಗತಿಯ ಕುರಿತು ಮಾತುಕತೆ ನಡೆಸಿವೆ.
- - -
ಮನುಷ್ಯ- ಪ್ರಾಣಿ ಸಂವಹನ
ಎಐ ತಂತ್ರಜ್ಞಾನ ಏನೇನೆಲ್ಲಾಮಾಡಬಹುದು ಎನ್ನುವ ಕುತೂಹಲ ಜಗತ್ತಿನೆದುರಿದೆ. ಉದ್ಯೋಗ, ಆರೋಗ್ಯ, ಶಿಕ್ಷಣ, ಬಾಹ್ಯಾಕಾಶ ಹೀಗೆ ನಾನಾ ಕ್ಷೇತ್ರಗಳಲ್ಲಿಕ್ರಾಂತಿಕಾರಿ ಬದಲಾವಣೆಗಳನ್ನು ಪರಿಣತರು ಪಟ್ಟಿ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿಕುತೂಹಲ ಕೆರಳಿಸುವ ಸಾಧ್ಯತೆಯೊಂದನ್ನು ವಿಜ್ಞಾನಿಗಳು ಹೊರಹಾಕಿದ್ದಾರೆ. ಎಐ ನಿಂದ ಮುಂದಿನ ದಿನಗಳಲ್ಲಿಮನುಷ್ಯರು ಪ್ರಾಣಿಗಳೊಂದಿಗೆ ನೇರವಾಗಿ ಸಂವಹನ ನಡೆಸಬಹುದು ಎಂದು ಸಂಶೋಧನೆಯೊಂದು ಬಹಿರಂಗಪಡಿಸಿದೆ. ಸಂಶೋಧನೆಯಲ್ಲಿಪಾಲ್ಗೊಂಡ ಸೇಂಟ್ ಎಟಿಯೆನ್ ವಿವಿಯ ವಿಜ್ಞಾನಿಗಳು ಪ್ರೊ. ನಿಕೊಲಸ್ ರ ನೇತೃತ್ವದಲ್ಲಿದಕ್ಷಿಣ ಆಫ್ರಿಕಾದ ಕಾರೂ ಮರುಭೂಮಿಯಲ್ಲಿ12 ದಿನಗಳ ಕಾಲ ಬೀಡುಬಿಟ್ಟರು. ಅಲ್ಲಿಅವರು ಆಫ್ರಿಕನ್ ಸ್ಟ್ರೈಪ್ ್ಡ ಇಲಿಗಳ ಬೆನ್ನು ಬಿದ್ದು 1.22 ಲಕ್ಷ ಬಗೆಯ ಶಬ್ದಗಳನ್ನು ರೆಕಾರ್ಡ್ ಮಾಡಿದ್ದಾರೆ. ಇವಿಷ್ಟೂ ಮಾಹಿತಿಯನ್ನು ಅವರು ‘ಎಐ ನ್ಯೂರಲ್ ನೆಟ್ ವರ್ಕ್’ಗೆ ಫೀಡ್ ಮಾಡಿದಾಗ ಪ್ರತಿ ಇಲಿಯೂ ತನ್ನದೇ ವಿಶಿಷ್ಟ ಸ್ವರವನ್ನು ಹೊಂದಿರುವುದನ್ನು ಎಐ ಪತ್ತೆ ಹಚ್ಚಿದೆ. ಇದೇ ಬಗೆಯ ಸಂಶೋಧನೆಗಳು ಚಿಂಪಾಂಜಿ, ಪಕ್ಷಿ, ಜೀಬ್ರಾ ಮುಂತಾದ ಪ್ರಾಣಿಗಳ ಮೇಲೂ ಆಗುತ್ತಿದೆ. ಇದೇ ವೇಳೆ ಕೆಲ ವಿಜ್ಞಾನಿಗಳು ಮನುಷ್ಯರು ಪ್ರಾಣಿಗಳೊಂದಿಗೆ ನೇರವಾಗಿ ಸಂವಹನ ನಡೆಸುವ ಸಂಶೋಧನೆಯ ಕುರಿತು ಆತಂಕ ವ್ಯಕ್ತಪಡಿಸಿದ್ದಾರೆ. ಇದರಿಂದ ಪ್ರಾಣಿಗಳ ಮೇಲಿನ ದೌರ್ಜನ್ಯ ಹೆಚ್ಚುವುದರ ಜೊತೆಗೆ ಪ್ರಾಣಿಗಳ ಸ್ವಭಾವಗಳು ಬದಲಾಗಬಹುದು ಎಂದು ಎಚ್ಚರಿಸಿದ್ದಾರೆ.
ಚಟಾಕಿ: ಕತ್ತೆ, ಗೂಬೆ, ನಾಯಿ, ಹಂದಿಗಳನ್ನು ಬೈಗುಳ ಪದವಾಗಿ ಬಳಸುವಾಗ ಎಚ್ಚರ. ಇನ್ಮುಂದೆ ಅವುಗಳೂ ತಿರುಗಿ ಬೈದೀತು.
ಆಂಥ್ರೋಪಿಕ್ ಬಾಯಲ್ಲಿಭಗವದ್ಗೀತೆ
ಜಗತ್ತಿನೆಲ್ಲೆಡೆ ತಲ್ಲಣ ಸೃಷ್ಟಿಸುತ್ತಿರುವ ಎಐ ಕಂಪನಿಗಳು ಹೊಣೆಗಾರಿಕೆಯ ಮಾತುಗಳನ್ನಾಡುವುದನ್ನು ಯಾರೂ ಊಹಿಸಲಾರರು. ಅದರಲ್ಲಿಯೂ ಉದ್ಯೋಗ ಕಡಿತ, ಆರ್ಥಿಕತೆ ಬದಲಾವಣೆ ಹೀಗೆ ಇದುವರೆಗಿನ ಜಾಗತಿನ ವ್ಯವಸ್ಥೆಯೇ ಬದಲಾಗುತ್ತಿದೆ ಎಂದು ಎಐ ಕಂಪನಿಗಳು ಸಾರುತ್ತಿರುವ ಸಮಯದಲ್ಲಿಅವರಿಂದ ಮಾನವೀಯ ಸಂವೇದನೆಯ ಮಾತುಗಳನ್ನು ಯಾರೂ ನಿರೀಕ್ಷಿಸದೇ ಇರುವುದು ಸಹಜ ಕೂಡ. ಆದರೆ ಇತ್ತೀಚೆಗೆ ಆಂಥ್ರೋಪಿಕ್ ಎಐ ಸಂಸ್ಥೆಯು ನೀಡಿರುವ ಹೇಳಿಕೆಯು ಈ ಮೇಲಿನ ಆರೋಪಗಳಿಗೆ ವ್ಯತಿರಿಕ್ತವಾಗಿದೆ. ‘ಎಐ ಕಂಪನಿಗಳು ಪರಸ್ಪರ ಜೊತೆಗೂಡಿ ಕಾರ್ಯನಿರ್ವಹಿಸಬೇಕು. ಒಂದು ವೇಳೆ ಎಐ ತಂತ್ರಜ್ಞಾನ ನಿಯಂತ್ರಣಕ್ಕೂ ಸಿಗದಂತೆ ಸಮಾಜ ವ್ಯವಸ್ಥೆಗೆ ಅಪಾಯ ತಂದೊಡ್ಡುವ ರೀತಿಯಲ್ಲಿಬೆಳೆಯುತ್ತಿದೆ ಎಂದೆನಿಸಿದಾಗ ಅಂಥಾ ಸಂಶೋಧನೆಯನ್ನು ಸ್ಥಗಿತಗೊಳಿಸುವುದು ಅಥವಾ ಮುಂದೂಡುವುದು ಉತ್ತಮ’ ಎಂದು ಆಂಥ್ರೋಪಿಕ್ ತನ್ನ ಪ್ರಕಟಣೆಯಲ್ಲಿತಿಳಿಸಿದೆ. ತನ್ನನ್ನು ತಾನೇ ಸೃಷ್ಟಿಸಿಕೊಳ್ಳುವ ಎಐ, ತನ್ನನ್ನು ತಾನೇ ತಿದ್ದಿಕೊಳ್ಳುವ ಎಐ ತಂತ್ರಜ್ಞಾನವು ತಂತ್ರಜ್ಞಾನ ಕ್ಷೇತ್ರಕ್ಕೇ ಆತಂಕಕಾರಿಯಾದುದು ಎಂದು ಸಂಸ್ಥೆ ಅಭಿಪ್ರಾಯಪಟ್ಟಿದೆ. ಇದರಿಂದ ಮನುಷ್ಯರು ಎಐ ಮೇಲೆ ನಿಯಂತ್ರಣ ಕಳೆದುಕೊಂಡು ಪರಿಸ್ಥಿತಿ ಕೈಮೀರಿ ಹೋಗುವ ಸಾಧ್ಯತೆ ಕುರಿತು ಸಂಸ್ಥೆ ಆತಂಕ ವ್ಯಕ್ತಪಡಿಸಿದೆ. ಮಾನವ ಪ್ರಗತಿಗೆ ಪೂರಕವಾದ ವಾತಾವರಣ ರೂಪುಗೊಳಿಸುವ ಕುರಿತು ಎಐ ಕಂಪನಿಗಳು ಹೊಣೆಗಾರಿಕೆಯಿಂದ ಜೊತೆಗೂಡಿ ಕೆಲಸ ಮಾಡುವ ಅಗತ್ಯ ಇಂದಿನ ತುರ್ತು ಕೂಡ ಆಗಿದೆ.
ಚಟಾಕಿ: ಇಷ್ಟೆಲ್ಲಾವೇದಾಂತಿಯಂತೆ ಮಾತನಾಡುವುದು ನೋಡಿದರೆ ಆಂಥ್ರೋಪಿಕ್ ಬಳಿ ಅಂಥಾ ಮಾರಕ ತಂತ್ರಜ್ಞಾನ ಇರಬಹುದು ಎನ್ನುವ ಅನುಮಾನ ಖಂಡಿತಾ ಬರುತ್ತದೆ.
ಎಐ ಕಂಪನಿಗಳು ತತ್ವಜ್ಞಾನಿಗಳನ್ನು ಕೆಲಸಕ್ಕೆ ತೆಗೆದುಕೊಳ್ಳುತ್ತಿರುವುದೇಕೆ?
ಕೃತಕ ಬುದ್ಧಿಮತ್ತೆ ಮನುಷ್ಯರ ಜೀವನವನ್ನೇ ಬದಲಿಸುವ ಅತ್ಯಾಧುನಿಕ ತಂತ್ರಜ್ಞಾನವನ್ನು, ಸಾಮರ್ಥ್ಯವನ್ನು ಹೊಂದಿದೆ ಎಂಬುದೇನೋ ನಿಜ. ಆದರೆ, ಈ ತಂತ್ರಜ್ಞಾನ ಇನ್ನೂ ಬಾಲ್ಯಾವಸ್ಥೆಯಲ್ಲಿದೆ. ಅದರ ಮುಂದೆ ಕಂಪ್ಯೂಟರ್ ಕೋಡ್ ಬಗೆಹರಿಸಲು ಸಾಧ್ಯವಾಗದ ನೈತಿಕ, ಪರಿಕಲ್ಪನಾತ್ಮಕ ಮತ್ತು ಅಸ್ತಿತ್ವವಾದದ(ಎಕ್ಸಿಸ್ಟೆನ್ಷಿಯಲ್ ) ಸವಾಲುಗಳು ಹಲವಾರಿವೆ. ಹೀಗಾಗಿಯೇ ಗೂಗಲ್ , ಆಂಥ್ರೋಪಿಕ್ , ಓಪನ್ ಎಐ ಮುಂತಾದ ಎಐ ದಿಗ್ಗಜ ಸಂಸ್ಥೆಗಳು ತತ್ವಜ್ಞಾನಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿಉದ್ಯೋಗಕ್ಕೆ ಸೇರಿಸಿಕೊಳ್ಳುತ್ತಿವೆ. ಎಐ ಕಂಪನಿಗಳಲ್ಲಿಅವರು ಎಐನ ಕಾನೂನು ರಚನೆ, ಅವುಗಳ ಸ್ವಭಾವಕ್ಕೆ ನೀತಿ ಮತ್ತು ನಿಯಮಗಳನ್ನು ಬರೆಯುವಲ್ಲಿಅವರು ಮುಖ್ಯ ಪಾತ್ರನಿರ್ವಹಿಸಲಿದ್ದಾರೆ.
ಎಂಜಿನಿಯರ್ ಗಳು ತಂತ್ರಜ್ಞಾನದ ತಾಂತ್ರಿಕ ವಿಚಾರಗಳ ಕುರಿತು ತಲೆಕೆಡಿಸಿಕೊಳ್ಳಬಹುದು. ಆದರೆ ನ್ಯಾಯ, ಹೊಣೆಗಾರಿಕೆ, ನ್ಯಾಯಸಮ್ಮತ ಹೀಗೆ ಹಲವು ತಾತ್ವಿಕ ವಿಚಾರಗಳು ಬಂದಾಗ ಪಕ್ಷಪಾತಿಯಾಗದೆ ಫಲಿತಾಂಶ ನೀಡಬೇಕೆಂದರೆ ಆ ತಂತ್ರಜ್ಞಾನಕ್ಕೆ ತತ್ವಜ್ಞಾನದ ಅಗತ್ಯ ಬಹಳ ಇದೆ. ಆಗಲೇ ಎಐ ಮಾನವ ಮೌಲ್ಯಗಳ ಚೌಕಟ್ಟಿನ ಆಧಾರದಲ್ಲಿಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ. ಅದಕ್ಕಾಗಿ ತತ್ವಜ್ಞಾನಿಗಳು ಬೇಕಿದ್ದಾರೆ. ಜಗತ್ತಿನ ಇತಿಹಾಸವನ್ನು ಇಣುಕಿದರೆ ಅದರಲ್ಲಿತತ್ವಜ್ಞಾನಿಗಳ ಪಾತ್ರ ಮಹತ್ತರವಾಗಿರುವುದು ಕಾಣಿಸುತ್ತದೆ. ಸಾವಿರಾರು ವರ್ಷಗಳ ಹಿಂದೆ ರಾಜಪ್ರಭುತ್ವದ ಕಾಲದಲ್ಲಿರಾಜರುಗಳ ಆಪ್ತಬಳಗದಲ್ಲಿತತ್ವಜ್ಞಾನಿಗಳೂ ಇದ್ದರು. ಆರೋಗ್ಯಕರ ಸಾಮಾಜಿಕ ವ್ಯವಸ್ಥೆ ರೂಪುಗೊಳ್ಳುವಲ್ಲಿಅವರ ಪಾತ್ರ ಹಿರಿದು. ಈಗ ತಂತ್ರಜ್ಞಾನದ ಉತ್ತುಂಗ ಕಾಲದಲ್ಲಿತತ್ವಜ್ಞಾನಿಗಳಿಗೆ ಬೇಡಿಕೆ ಕುದುರಿರುವುದು ಒಳ್ಳೆಯ ಲಕ್ಷಣ.
ಚಟಾಕಿ: ಮನುಷ್ಯ ಎಐಗೆ ಕಲಿಸಲು ಸಾಧ್ಯವಾಗದ ಇನ್ನೂ ಅದೆಷ್ಟೋ ವಿಚಾರಗಳಿವೆ ಎನ್ನುವುದು ಸದ್ಯಕ್ಕಂತೂ ನೆಮ್ಮದಿದಾಯಕ ಸಂಗತಿ.
ಗೂಗಲ್ ಸರ್ಚ್ ಪೇಜ್ ನಲ್ಲಿಖಾಸಗಿ ಮಾಹಿತಿ
ಗೂಗಲ್ ಸರ್ಚ್ನಲ್ಲಿಎಲ್ಲವೂ ಲಭಿಸುತ್ತದೆ. ಖಾಸಗಿತನದ ಕುರಿತಂತೂ ಮಾತನಾಡುವ ಹಾಗೆಯೇ ಇಲ್ಲ. ನಮ್ಮ ಬಗೆಗಿನ ಮಾಹಿತಿಯನ್ನು ನಾವೇ ಸಾಮಾಜಿಕ ಜಾಲತಾಣಗಳಲ್ಲಿಹಾಕಿಕೊಳ್ಳುತ್ತೇವೆ. ಆದರೆ ಫೋನ್ ನಂಬರ್ , ಇಮೇಲ್ , ವಿಳಾಸ ಮುಂತಾದ ಖಾಸಗಿ ಮಾಹಿತಿ ಗೂಗಲ್ ಸರ್ಚ್ನಲ್ಲಿಕಂಡು ಬಂದರೆ ಅದು ಆತಂಕಪಡಬೇಕಾದ ಸಂಗತಿ. ಇಂಟರ್ನೆಟ್ ನಲ್ಲಿನಮಗರಿವಿಲ್ಲದಂತೆ ಯಾವುದಾದರೂ ಜಾಲತಾಣಗಳಲ್ಲಿನಮ್ಮ ಖಾಸಗಿ ಮಾಹಿತಿ ದಾಖಲಾಗಿದ್ದರೆ ಅದು ಗೂಗಲ್ ರಿಸಲ್ಟ್ $್ಸ ಪೇಜ್ ನಲ್ಲಿಮೂಡದಂತೆ ಮಾಡಬೇಕು. ಸೈಬರ್ ವಂಚನೆಗಳು ಹೆಚ್ಚುತ್ತಿರುವ ಸದ್ಯದ ಸಂದರ್ಭದಲ್ಲಿಈ ಬಗ್ಗೆ ಎಚ್ಚರಿಕೆ ವಹಿಸುವ ಅಗತ್ಯವಿದೆ.
1. ಗೂಗಲ್ ನ ‘ರಿಸಲ್ಟ್ $್ಸ ಅಬೌಟ್ ಯು’ ವೆಬ್ ಪೇಜ್ ತೆರೆದು ಲಾಗಿನ್ ಆಗಬೇಕು.
2. ಅಲ್ಲಿಬಳಕೆದಾರರು ತಾವು ಮಾನಿಟರ್ ಮಾಡಲು ಇಚ್ಚಿಸುವ ಮಾಹಿತಿಯನ್ನು ಅಂದರೆ ಫೋನ್ ನಂಬರ್ , ಇಮೇಲ್ ಐಡಿ, ಮನೆ ವಿಳಾಸದ ಕುರಿತು ವಿವರ ಸಲ್ಲಿಸಬೇಕು.
3. ಈ ಬಗ್ಗೆ ಗೂಗಲ್ ತಮಗೆ ಯಾವ ರೀತಿ ಅಲರ್ಟ್ ನೋಟಿಫಿಕೇಷನ್ ನೀಡಬೇಕು ಎನ್ನುವುದನ್ನು ಆಯ್ಕೆ ಮಾಡಬೇಕು.
4. ಗೂಗಲ್ ಸ್ಕ್ಯಾ ನ್ ಮಾಡಿ ವರದಿ ಸಲ್ಲಿಸಲು ಕಾಲಾವಕಾಶ ನೀಡಿ. ಆ ವರದಿಯಲ್ಲಿಇಂಟರ್ನೆಟ್ ನಲ್ಲಿಎಲ್ಲೆಲ್ಲಿನಮ್ಮ ಖಾಸಗಿ ಮಾಹಿತಿ ನಮೂದಾಗಿದೆ ಎನ್ನುವುದರ ಮಾಹಿತಿಯನ್ನು ಗೂಗಲ್ ನೀಡುತ್ತದೆ.
5. ಗೂಗಲ್ ಫಲಿತಾಂಶಗಳ ಪೇಜ್ ನಲ್ಲಿತಮ್ಮ ಖಾಸಗಿ ಮಾಹಿತಿ ಇರುವ ಜಾಲತಾಣ ಮೂಡುವಂತೆ ಮಾಡಿ. ಬಳಿಕ ಅದರ ಪಕ್ಕದ ಮೂರು ಚುಕ್ಕೆಗಳ ಸಂಕೇತವನ್ನು ಕ್ಲಿಕ್ಕಿಸಿ ರಿಮೂವ್ ರಿಸಲ್ಟ್ ಕ್ಲಿಕ್ ಮಾಡಿ. ಬಳಿಕ ಡಿಲೀಟ್ ಮಾಡಲು ಸೂಕ್ತ ಕಾರಣ ನೀಡಿ ನಂತರ ಸಬ್ಮಿಟ್ ಕ್ಲಿಕ್ ಮಾಡಿ. ಗೂಗಲ್ ನಿಮ್ಮ ಮನವಿಯನ್ನು ಪರಿಶೀಲಿಸಿ ಅದು ಸಮಂಜಸ ಎಂದು ತೋರಿಸಲ್ಲಿಪುರಸ್ಕರಿಸುತ್ತದೆ. ಆಗ ಗೂಗಲ್ ಸರ್ಚ್ನಲ್ಲಿನಿಮ್ಮ ಖಾಸಗಿ ಮಾಹಿತಿ ಇರುವ ಪೇಜ್ ಮೂಡುವುದೇ ಇಲ್ಲ.
ಚಟಾಕಿ: ಇಂಟರ್ನೆಟ್ ನಲ್ಲಿಸುಳ್ಳು ಹೇಳುವುದನ್ನು, ಸುಳ್ಳು ಮಾಹಿತಿ ನೀಡುವುದನ್ನು ರೂಢಿಸಿಕೊಂಡಿರುತ್ತಿದ್ದರೆ ಇವೆಲ್ಲಾತಾಪತ್ರಯಗಳೇ ಇರುತ್ತಿರಲಿಲ್ಲ.

