ಎಲ್ಲಿಏನು ? ಶನಿವಾರ

Contributed bysuresha.yg@timesgroup.com|Vijaya Karnataka

ಬೆಂಗಳೂರಿನಲ್ಲಿ ಶನಿವಾರ ಹಲವು ಕಾರ್ಯಕ್ರಮಗಳು ನಡೆಯಲಿವೆ. ಬೆಂಗಳೂರು ಆರ್ಟ್ ಗ್ಯಾಲರಿಯಲ್ಲಿ 'ನಮ್ಮ ಪರಂಪರೆ' ಆವೃತ್ತಿ-2 ನಡೆಯಲಿದೆ. ಪಂಪ ಸಾಂಸ್ಕೃತಿಕ ಕೇಂದ್ರದಲ್ಲಿ 19ನೇ ವಾರ್ಷಿಕೋತ್ಸವ ಹಾಗೂ ವಿಶ್ವ ಪರಿಸರ ದಿನಾಚರಣೆ 'ರಂಗ ಹಸಿರು' ಕಾರ್ಯಕ್ರಮವಿದೆ. ಬೆಂಗಳೂರು ಲಲಿತಕಲಾ ಪರಿಷತ್‌ನಲ್ಲಿ ಡಾ. ಎಚ್. ನರಸಿಂಹಯ್ಯ ಜನ್ಮದಿನದ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ. ಸಹಕಾರ ನಗರದಲ್ಲಿ ಮೌಂಟ್ ಎವರೆಸ್ಟ್ ಏರಿದ ಸಾಧಕರಿಗೆ ಸನ್ಮಾನ ನಡೆಯಲಿದೆ.

art events and environment celebration joy of saturday

ಬೆಂಗಳೂರು ಆರ್ಟ್ ಗ್ಯಾಲರಿ/ ಆರ್ಟ್ ಮ್ಯಾಟರ್ಸ್ : ನಮ್ಮ ಪರಂಪರೆ ಆವೃತ್ತಿ-2. ಮುಖ್ಯ ಅತಿಥಿಗಳು: ಕಲಾವಿದ : ಜಿ.ಸುಬ್ರಹ್ಮಣಿಯನ್ , ಪರಿಸರ ಸ್ನೇಹಿ ವಾಸ್ತು ಶಿಲ್ಪಿ ಪ್ರೊ.ಸತ್ಯ ಪ್ರಕಾಶ್ ವಾರಣಾಶಿ, ಸುಧೀ ನೆಟ್ ವರ್ಕ್ಸ್ ನ ಸಿಇಒ ಪ್ರದೀಪ್ ಪೈ ಎಚ್ .

ಸ್ಥಳ : ಬೆಂಗಳೂರು ಆರ್ಟ್ ಗ್ಯಾಲರಿ, ಯುವಪಥ, ಜಯನಗರ 4ನೇ ಬ್ಲಾಕ್ . ಬೆಳಗ್ಗೆ 11.30.

ಪಂಪ ಸಾಂಸ್ಕೃತಿಕ ಮತ್ತು ಸಾಮಾಜಿಕ ಕೇಂದ್ರ: 19ನೇ ವಾರ್ಷಿಕೋತ್ಸವ ಸಂಭ್ರಮ ಹಾಗೂ ವಿಶ್ವ ಪರಿಸರ ದಿನದ ಪ್ರಯುಕ್ತ ‘ರಂಗ ಹಸಿರು’ ಕಾರ್ಯಕ್ರಮ. ಹಾಸ್ಯೋತ್ಸವ ಹಾಗೂ ಪರಿಸರ ಗೀತೆಗಳು. ಉದ್ಘಾಟನೆ : ವಿಧಾನಪರಿಷತ್ ಮಾಜಿ ಸದಸ್ಯ ಮೋಹನ್ ಕೊಂಡಜ್ಜಿ.

ಸ್ಥಳ : ಕೊಂಡಜ್ಜಿ ಬಸಪ್ಪ ರಂಗಮಂದಿರ, ಅರಮನೆ ರಸ್ತೆ. ಸಂಜೆ 5.30.

ಬೆಂಗಳೂರು ಲಲಿತಕಲಾ ಪರಿಷತ್ : ಡಾ.ಎಚ್ .ನರಸಿಂಹಯ್ಯ ಜನ್ಮದಿನ ಪ್ರಯುಕ್ತ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ.

ಸ್ಥಳ : ಮಲ್ಟಿಮೀಡಿಯಾ ಹಾಲ್ , ನ್ಯಾಷನಲ್ ಕಾಲೇಜು, ಜಯನಗರ. ಸಂಜೆ 5.

ಸಹಕಾರ ನಗರದ ವಿವಿಧ ಸಂಘ ಸಂಸ್ಥೆಗಳು : ಮೌಂಟ್ ಎವೆರೆಸ್ಟ್ ಶಿಖರ ಏರಿದ ಸಂತೋಷ್ ದೇವರಾಜಪ್ಪ ಹಾಗೂ ಡಾ.ಚಿನ್ಮಯಿ ತ್ರಿಶೂಲಮೂರ್ತಿ ಅವರಿಗೆ ಸನ್ಮಾನ. ಉದ್ಘಾಟನೆ : ಸಚಿವ ಕೃಷ್ಣ ಬೈರೇಗೌಡ.

ಸ್ಥಳ : ರಾಧಾಕೃಷ್ಣ ಕಲ್ಯಾಣ ಮಂಟಪ, ಸಹಕಾರ ನಗರ. ಸಂಜೆ 5.