*ಪರಿಸರ ರಕ್ಷಣೆ ಪ್ರತಿಯೊಬ್ಬ ನಾಗರಿಕರ ಕರ್ತವ್ಯ

Contributed bynaikharsha6@gmail.com|Vijaya Karnataka

ಪಟೇಲ್ ಪಬ್ಲಿಕ್ ಆಂಗ್ಲ ಶಾಲೆಯಲ್ಲಿ ಪರಿಸರ ದಿನಾಚರಣೆ ನಡೆಯಿತು. ಶಾಲಾ ಸಂಸ್ಥಾಪಕ ಕಾರ್ಯದರ್ಶಿ ಪಟೇಲ್ ರಾಜು ಅವರು ಪರಿಸರ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯ ಎಂದರು. ಮಕ್ಕಳು ಹುಟ್ಟುಹಬ್ಬಕ್ಕೆ ಗಿಡ ನೆಡುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಪರಿಸರ ಉಳಿದರೆ ಆರೋಗ್ಯ ವೃದ್ಧಿಸುತ್ತದೆ. ಕಸ ಎಸೆಯದೆ ತ್ಯಾಜ್ಯ ನಿರ್ವಹಣೆ ಮಾಡಬೇಕು. ತೆಂಗಿನ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಪರಿಸರ ಹಾಳು ಮಾಡುವ ಕೆಲಸಗಳನ್ನು ತ್ಯಜಿಸಬೇಕು ಎಂದು ತಿಳಿಸಲಾಯಿತು.

citizens duty the importance of environmental protection

(ಆರ್ ಎಂಡಿ ವಿಭಾಗದ ಕೋರಿಕೆಯ ಮೇರೆಗೆ)

ಪರಿಸರ ರಕ್ಷಣೆ ಪ್ರತಿಯೊಬ್ಬ ನಾಗರಿಕರ ಕರ್ತವ್ಯ

ಪಟೇಲ್ ಪಬ್ಲಿಕ್ ಆಂಗ್ಲಶಾಲೆಯಲ್ಲಿಪರಿಸರ ದಿನಾಚರಣೆ | ಶಾಲೆಯ ಸಂಸ್ಥಾಪಕ ಕಾರ್ಯದರ್ಶಿ ಪಟೇಲ್ ರಾಜು ಅಭಿಪ್ರಾಯ

ರಾಮನಗರ: ಪರಿಸರ ರಕ್ಷಣೆ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದ್ದು, ಮಕ್ಕಳು ಪರಿಸರ ಸಂರಕ್ಷಣೆಯಲ್ಲಿತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ಪಟೇಲ್ ಆಂಗ್ಲಶಾಲೆಯ ಸಂಸ್ಥಾಪಕ ಕಾರ್ಯದರ್ಶಿ ಪಟೇಲ್ ರಾಜು ಕರೆ ನೀಡಿದರು.

ನಗರದ ಕೆಂಪೇಗೌಡ ವೃತ್ತದ ಬಳಿ ಮಾಗಡಿ ರಸ್ತೆಯಲ್ಲಿರುವ ಪಟೇಲ್ ಪಬ್ಲಿಕ್ ಆಂಗ್ಲಶಾಲೆಯಲ್ಲಿನಡೆದ ಪರಿಸರ ದಿನಾಚರಣೆ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು. ಶಾಲಾ ಮಕ್ಕಳು ಹಾಗೂ ಸಾರ್ವಜನಿಕರು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವಾಗ ಅದರ ನೆನಪಿಗಾಗಿ ಒಂದು ಗಿಡವನ್ನು ನೆಡುವ ರೂಢಿಯನ್ನು ಬೆಳೆಸಿಕೊಳ್ಳಬೇಕು. ಪರಿಸರ ಎಲ್ಲಿಉಳಿಯುತ್ತದೆಯೋ ಅಲ್ಲಿಆರೋಗ್ಯವೂ ವೃದ್ಧಿಸುತ್ತದೆ. ಶಾಲಾ ಮಕ್ಕಳು ಮಣ್ಣನ್ನು ರಕ್ಷಿಸುವಲ್ಲಿಪ್ರಮುಖ ಪಾತ್ರ ವಹಿಸಬೇಕಾಗಿದೆ ಎಂದರು.

ಎಲ್ಲೆಂದರಲ್ಲಿಕಸಗಳನ್ನು ಬಿಸಾಡುವ ಬದಲು ತ್ಯಾಜ್ಯಗಳನ್ನು ನಿರ್ಮೂಲನೆ ಮಾಡಬೇಕು. ಆಗ ಅಲ್ಲಿಮಣ್ಣು ಫಲವತ್ತಾಗಿ ಹಸಿರು ಮತ್ತು ಗಿಡಮರಗಳು ಉತ್ತಮವಾಗಿ ಬೆಳೆಯುತ್ತವೆ. ನಾಗರಿಕರು ತಮ್ಮ ಮನೆಯ ಮುಂಭಾಗ ಮತ್ತು ತಮ್ಮ ಸುತ್ತಮುತ್ತಲ ಪಾರ್ಕ್ಗಳನ್ನು ಹಸಿರುಮಯವಾಗಿ ಪರಿವರ್ತಿಸಿಕೊಳ್ಳುವುದರಿಂದ ಪರಿಸರ ರಕ್ಷಣೆ ಆಗುತ್ತದೆ. ಹಸಿರೇ ಉಸಿರು ಎನ್ನುವಂತೆ ಪರಿಸರ ರಕ್ಷಣೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿ ಎಂದು ತಿಳಿಸಿದರು.

ಜಿಲ್ಲಾನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ಖಜಾಂಚಿ ಸಿ. ರವಿ ಅವರು, ತೆಂಗಿನ ಸಸಿ ನೆಡುವುದರ ಮೂಲಕ ಪರಿಸರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿ, ನಮ್ಮ ಭೂಮಿ, ನಮ್ಮ ಜಲ, ನಮ್ಮ ಪರಿಸರ ಇವುಗಳ ರಕ್ಷಣೆ ಮತ್ತು ಸಂಸ್ಕರಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಪರಿಸರವನ್ನು ಹಾಳು ಮಾಡುವಂತಹ ಕೆಲಸಗಳಾದ ಎಲ್ಲೆಂದರಲ್ಲಿಬೆಂಕಿ ಹಚ್ಚುವುದು, ತ್ಯಾಜ್ಯಗಳನ್ನು ಎಸೆಯುವುದು, ನೀರನ್ನು ಮಲಿನಗೊಳಿಸುವುದು ಇತ್ಯಾದಿ ಕಾರ್ಯಗಳನ್ನು ನಾವು ತ್ಯಜಿಸಬೇಕು ಎಂದು ಕರೆ ನೀಡಿದರು.

ಪರಿಸರ ದಿನಾಚರಣೆ ಪ್ರಯುಕ್ತ ಪರಿಸರ ರಕ್ಷಣೆಯ ಬಗ್ಗೆ ಅರಿವು ಮೂಡಿಸುವ ಕಿರುನಾಟಕವನ್ನು ಶಾಲಾ ಮಕ್ಕಳು ಪ್ರದರ್ಶಿಸಿದರು.

ಫೋಟೋ:

06ಆರ್ ಎನ್ ಆರ್ ಎಚ್ ಎನ್ ಜೆ 01

ನಗರದ ಪಟೇಲ್ ಆಂಗ್ಲಶಾಲೆಯಲ್ಲಿತೆಂಗಿನ ಸಸಿ ನೆಡುವ ಮೂಲಕ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.