(ವಿಕ ಫಾಲೋಅಪ್ )
- ಇಂಧನ ಕಂಪನಿಗಳಿಗೆ ಜಿಲ್ಲಾಧಿಕಾರಿ ಸೂಚನೆ
ವಿಕ ಸುದ್ದಿಲೋಕ ಬೆಳಗಾವಿ
ಸಿಎನ್ ಜಿ ಹಾಗೂ ಎಲ್ ಪಿಜಿ ದರ ನಿಗದಿಗೆ ಅನುಸರಿಸುತ್ತಿರುವ ನಿಯಮ ಹಾಗೂ ದರ ವ್ಯತ್ಯಾಸಕ್ಕೆ ಕಾರಣವಾಗಿರುವ ಅಂಶಗಳ ಕುರಿತು ಎರಡು ದಿನಗಳಲ್ಲಿಸಮಗ್ರ ವರದಿ ಸಲ್ಲಿಸುವಂತೆ ಇಂಧನ ಕಂಪನಿಗಳಿಗೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸೂಚಿಸಿದರು.
ಸಿಎನ್ ಜಿಗೆ ಜಿಲ್ಲೆಯಿಂದ ಜಿಲ್ಲೆಗೆ ಭಾರೀ ಪ್ರಮಾಣದ ದರ ವ್ಯತ್ಯಾಸ ಹಿನ್ನೆಲೆಯಲ್ಲಿಸಿಎನ್ ಜಿ ಹಾಗೂ ಎಲ್ ಪಿಜಿ ಪೂರೈಸುವ ಇಂಡಿಯನ್ ಆಯಿಲ್ , ಗೋ ಗ್ಯಾಸ್ , ಭಾರತ್ ಪೆಟ್ರೋಲಿಯಂ, ಮೆಗಾ ಗ್ಯಾಸ್ ಸೇರಿದಂತೆ ವಿವಿಧ ಕಂಪನಿಗಳ ಪ್ರತಿನಿಧಿಗಳ ಜತೆ ಶುಕ್ರವಾರ ತಮ್ಮ ಕಚೇರಿಯಲ್ಲಿಸಭೆ ನಡೆಸಿ ಮಾಹಿತಿ ಪಡೆದರು.
‘‘ಪ್ರತಿಯೊಂದು ಕಂಪನಿಯೂ ಪ್ರತ್ಯೇಕ ಎಂಒಯು (ಒಪ್ಪಂದ), ಕಾರ್ಯಾಚರಣೆ ಮಾದರಿ ಹಾಗೂ ಪೂರೈಕೆ ವ್ಯವಸ್ಥೆ ಹೊಂದಿದೆ. ಎಸ್ ಒಪಿ ಸೇರಿದಂತೆ ವಿವಿಧ ಕಾರಣಗಳಿಂದ ದರದಲ್ಲಿವ್ಯತ್ಯಾಸ ಉಂಟಾಗುತ್ತಿದೆ,’’ ಎಂದು ಇಂಧನ ಕಂಪನಿಗಳ ಪ್ರತಿನಿಧಿಗಳು ಮಾಹಿತಿ ನೀಡಿದರು.
ಈ ಕುರಿತು ಸಂಪೂರ್ಣ ಮಾಹಿತಿಯನ್ನು ಲಿಖಿತ ರೂಪದಲ್ಲಿಸಲ್ಲಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು. ಸಭೆಯಲ್ಲಿಮೆಗಾ ಗ್ಯಾಸ್ ಕಂಪನಿಯ ಮಯೂರ ಹೆಗಡೆ ಸೇರಿದಂತೆ ವಿವಿಧ ಕಂಪನಿಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.
* ಬಾಕ್ಸ್
ವಿಕ ವರದಿಗೆ ಸ್ಪಂದನೆ
ರಾಜ್ಯದಲ್ಲಿಸಿಎನ್ ಜಿ ದರ ಏಕರೂಪ ಇಲ್ಲದಿರುವ ಬಗ್ಗೆ ‘ಸಿಎನ್ ಜಿಗೆ ಜಿಲ್ಲೆಗೊಂದು ದರ’ ಶೀರ್ಷಿಕೆಯಲ್ಲಿಶುಕ್ರವಾರ ವಿಜಯ ಕರ್ನಾಟಕ ವಿಶೇಷ ವರದಿ ಪ್ರಕಟಿಸಿತ್ತು. ಈ ವರದಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಸಭೆ ನಡೆಸಿ ಮಾಹಿತಿ ಪಡೆದರು.
(05.06.2026)
* ಕ್ವೋಟ್
ಇಂಧನ ಪೂರೈಸುವ ಕಂಪನಿಗಳಿಗೆ ಎರಡು ದಿನಗಳಲ್ಲಿವರದಿ ಸಲ್ಲಿಸಲು ಸೂಚಿಸಲಾಗಿದೆ. ವರದಿ ಬಂದ ಬಳಿಕ ಪರಿಶೀಲಿಸಿ ಇಂಧನ ದರ ನಿಗದಿಗೆ ನಿಯಮಾನುಸಾರ ಕ್ರಮ ಜರುಗಿಸಲಾಗುವುದು.
- ಮೊಹಮ್ಮದ್ ರೋಷನ್ , ಜಿಲ್ಲಾಧಿಕಾರಿ
*ಫೋಟೋ-5ರವಿಜಿ10
ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ , ಇಂಧನ ಪೂರೈಕೆ ಕಂಪನಿಗಳ ಪ್ರತಿನಿಧಿಗಳ ಜತೆ ಸಭೆ ನಡೆಸಿ ಚರ್ಚಿಸಿದರು.

