ಬೇಡಡ್ಕ : ಈ ವರ್ಷದ ಪ್ರವೇಶೋತ್ಸವವನ್ನು ಬೇಡಡ್ಕ ಪಾಂಡಿಕಂಡ ಮದರ್ ಬಡ್ಸ್ ಶಾಲೆಯಲ್ಲಿ ಕುಟುಂಬಶ್ರೀ ಜಿಲ್ಲಾಮಿಷನ್ ಮತ್ತು ಕುಟುಂಬಶ್ರೀ ಸಿಡಿಎಸ್ , ಗ್ರಾಮ ಪಂಚಾಯಿತಿಯ ಜಂಟಿ ಆಶ್ರಯದಲ್ಲಿನಡೆಸಲಾಯಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಇ. ಕುಂಞಿರಾಮನ್ ಉದ್ಘಾಟಿಸಿದರು.ಸಿಡಿಎಸ್ ಅಧ್ಯಕ್ಷೆ ಗುಲಾಬಿ ಎಂ.ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕುಟುಂಬಶ್ರೀ ಮಿಷನ್ ಎಡಿಎಂಸಿ ಕಿಶೋರ್ ಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ರಾಧಾ ರವಿ, ಕ್ಷೇಮಕಾರ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಸಿ.ಕೃಷ್ಣವೇಣಿ, ಆರೋಗ್ಯ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ವಿಷ್ಣುರಾಜ್ , ಅಭಿವೃದ್ಧಿ ಸ್ಥಾಯಿ ಸಮಿತಿಯ ಅಧ್ಯಕ್ಷೆ ಲತಾಗೋಪಿ, ವಾರ್ಡ್ ಸದಸ್ಯ ಅನೀಫಾ ಕರಿಯತ್ , ಕಾಸರಗೋಡು ಬ್ಲಾಕ್ ಪಂಚಾಯಿತಿ ಸದಸ್ಯೆ ಪ್ರಿಯಾ ಕೆ.ಮತ್ತು ವಾರ್ಡ್ ಸದಸ್ಯ ಇ.ಲಕ್ಷ್ಮೇ, ಗ್ರಾಮ ಪಂಚಾಯಿತಿಯ ಸಹಾಯಕ ಕಾರ ್ಯದರ್ಶಿ ಪ್ರದೀಶ್ , ಕೇರಳ ಬ್ಯಾಂಕ್ ಅಧ್ಯಕ್ಷ ಮುರಳೀಧರನ್ , ಸಿಡಿಎಸ್ ಸದಸ್ಯೆ ರಸೀದ ಕೆ. ಕಾರ ್ಯಕ್ರಮದಲ್ಲಿಭಾಗವಹಿಸಿದ್ದರು. ಸಂಘಟನಾ ಸಮಿತಿಯ ಸಂಚಾಲಕ ರಾಜೇಶ್ ಪಾಂಡಿಕಂಡಂ ಸ್ವಾಗತಿಸಿ, ಮದರ್ ಬಡ್ಸ್ ಶಾಲೆಯ ಪ್ರಿನ್ಸಿಪಾಲ್ ಸುರನ್ಯಾ ಅವರು ವಂದಿಸಿದರು.
ಚಿತ್ರ..4ಎಂಯುಬಡ್ಸ್ ( ಗ್ರಾಮ ಪಂ. ಅಧ್ಯಕ್ಷ ಇ.ಕುಂಞಿರಾಮನ್ ಉದ್ಘಾಟಿಸಿ ಮಾತನಾಡಿದರು)

